ತೇರದಾಳ ಪಟ್ಟಣದ ಹೊರ ವಲಯದಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟ್ನಲ್ಲಿ ತಪಾಸಣೆ ಮಾಡಲಾಯಿತು. ಎಸ್‌ಎಸ್‌ಟಿ ಅಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಪೊಲೀಸ್ ಸಿಬ್ಬಂದಿ ಪಿ.ಎಸ್.ನರಸನ್ನವರ ತಪಾಸಣೆ ನಡೆಸಿದರು. 
ಬಾಗಲಕೋಟೆ

ಸಿಬ್ಬಂದಿ ಕೊರತೆ ನಡುವೆ ಮುಂದುವರಿದ ತಪಾಸಣೆ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಬಾಗಲಕೋಟೆ ಉಪ ಚುನಾವಣೆ
  • ವಾಹನಗಳ ತಪಾಸಣೆ
ತೇರದಾಳ: ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆ ಮಹಾರಾಷ್ಟ್ರದಿಂದ ಬರುವ ವಾಹನಗಳ ತಪಾಸಣೆಗಾಗಿ ಜಿಲ್ಲೆ ಪ್ರವೇಶಿಸುವ ಪಟ್ಟಣದ ಸ್ಥಾಪಿಸಲಾದ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಕಾರ್ಯವು ಬುಧವಾರ ಮುಂದುವರಿದಿದೆ.
ಕಾರು ಸೇರಿ ವಿವಿಧ ವಾಹನಗಳ ತಪಾಸಣೆ ಎಸ್‌ಎಸ್‌ಟಿ ತಂಡದವರು ಮುಂದುವರಿಸಿದ್ದಾರೆ. ಮೇಲ್ವಿಚಾರಣೆ ಹಿನ್ನೆಲೆ ಎಫ್‌ಎಸ್‌ಟಿ ತಂಡದವರು ಕೂಡ ಭೇಟಿ ನೀಡಿ, ಚೆಕ್‌ಪೋಸ್ಟ್ ಸ್ಥಿತಿಯನ್ನು ಪರಿಶೀಲಿಸಿದರು. ಎಸ್‌ಎಸ್‌ಟಿ ಅಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಪೊಲೀಸ್ ಸಿಬ್ಬಂದಿ ಪಿ.ಎಸ್. ನರಸನ್ನವರ ಕಾರ್ಯನಿರ್ವಹಿಸಿದರು.
ಎಫ್‌ಎಸ್‌ಟಿ ಅಧಿಕಾರಿ ವಿ.ಜಿ. ಪತ್ತಾರ, ಎಎಸ್‌ಐ ಪೊಲೀಸ್ ಸಿಬ್ಬಂದಿ ಸದರಿ ಚೆಕ್‌ಪೋಸ್ಟ್ಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬ್ಬಂದಿ ಕೊರತೆ: ಚೆಕ್‌ಪೋಸ್ಟ್ ನಲ್ಲಿ ಎಸ್‌ಎಸ್‌ಟಿ ಅಧಿಕಾರಿಗೆ ಸಹಾಯಕರು ಇಲ್ಲದೇ ತೊಂದರೆಯಾಗುತ್ತಿದೆ. ಅಲ್ಲದೆ ಅಬಕಾರಿ, ಸೆಲ್ ಟ್ಯಾಕ್ಸ್ ಅಧಿಕಾರಿಗಳು ಚೆಕ್‌ಪೋಸ್ಟ್ನಲ್ಲಿ ಇಲ್ಲದೆ ಇರುವುದರಿಂದ ಅಕ್ರಮವಾಗಿ ಬರುವ ಸಾರಾಯಿ ಅಥವಾ ಇತರೆ ವಸ್ತುಗಳ ಪರಿಶೀಲನೆ ಮಾಡುವವರು ಯಾರು? ಎಂಬ ಪ್ರಶ್ನೆ ಸಾಮಾನ್ಯವಾಗಿದೆ.