ಗುಳೇದಗುಡ್ಢ ಸಮೀಪದ ಪರ್ವತಿ ಗ್ರಾಮದ ಆರ್‌ಎಂಎಸ್‌ಎ ಸರ್ಕಾರಿ ಪ್ರೌಢ ಶಾಲೆಗೆ ಜಿ.ಪಂ. ಸಿಇಒ ಶಶಿಧರ ಕುರೇರ ಭೇಟಿ ಪರಿಶೀಲನೆ ನಡೆಸಿದರು. ಮುಖ್ಯಗುರು ಎಚ್.ಕೆ. ಗುಡೂರ, ತಾ.ಪಂ. ಇಒ ಮಲ್ಲಿಕಾರ್ಜುನ ಬಡಿಗೇರಿ, ತಾ.ಪಂ. ಎಡಿಆರ್ ರಾಮಚಂದ್ರ ಮೇತ್ರಿ ಇತರರಿದ್ದರು. 
ಬಾಗಲಕೋಟೆ

ಮಕ್ಕಳ ದಾಖಲಾತಿ ಹೆಚ್ಚಿಸಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಜಿ.ಪಂ. ಸಿಇಒ ಶಶಿಧರ ಕುರೇರ ಸೂಚನೆ
  • ಪರ್ವತಿ ಗ್ರಾಮದ ಆರ್‌ಎಂಎಸ್‌ಎ ಶಾಲೆಗೆ ಭೇಟಿ
  • ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಳವಾಗಬೇಕು
ಗುಳೇದಗುಡ್ಡ : ಸಮೀಪದ ಪರ್ವತಿ ಗ್ರಾಮದ ಆರ್‌ಎಂಎಸ್‌ಎ ಸರ್ಕಾರಿ ಪ್ರೌಢ ಶಾಲೆಗೆ ಜಿ.ಪಂ. ಸಿಇಒ ಶಶಿಧರ ಕುರೇರ ಗುರುವಾರ ಭೇಟಿ ನೀಡಿ ಮಕ್ಕಳ ದಾಖಲಾತಿ ಪರಿಶೀಲಿಸಿ, ಮುಖ್ಯ ಗುರುಗಳಿಂದ ಮಾಹಿತಿ ಪಡೆದುಕೊಂಡರು.
ನಂತರ ಸಿಇಒ ಶಶಿಧರ ಕುರೇರ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಳವಾಗಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಒದಗಿಸಬೇಕು. ಮಕ್ಕಳೂ ಸಹ ಶಿಕ್ಷಕರು ಕಲಿಸಿದ ಪಾಠಗಳನ್ನು ಸರಿಯಾಗಿ ಮನನ ಮಾಡಿಕೊಂಡು ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಬಳಿಕ ಎಸ್‌ಎಸ್‌ಕೆ ಆರ್‌ಐಡಿಎ್ ಯೋಜನೆ ಅಡಿಯಲ್ಲಿ ಮಂಜೂರಾಗಿ ಪೂರ್ಣಗೊಂಡ ಶಾಲಾ ಕಟ್ಟಡವನ್ನು ವೀಕ್ಷಿಸಿದರು.
ಮುಖ್ಯಗುರು ಎಚ್.ಕೆ. ಗುಡೂರ, ತಾ.ಪಂ. ಇಒ ಮಲ್ಲಿಕಾರ್ಜುನ ಬಡಿಗೇರಿ, ತಾ.ಪಂ. ಎಡಿಆರ್ ರಾಮಚಂದ್ರ ಮೇತ್ರಿ, ಪಂಚಾಯತ್ ರಾಜ್ ಇಲಾಖೆಯ ಎಇಇ ಎ.ಎಸ್. ತೋಪಲಕಟ್ಟಿ, ಪರ್ವತಿ ಗ್ರಾ.ಪಂ. ಪಿಡಿಒ ಶಿವುಕುಮಾರ ರಾಜನಾಳ ಇತರರಿದ್ದರು.