ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆದಾಯ ತೆರಿಗೆ ಟಿಡಿಎಸ್ ವಂತಿಗೆ ಪಾವತಿಯಿಂದ ಆಗುವ ಲಾಭಗಳ ಕುರಿತು ವಿಚಾರ ಸಂಕೀರ್ಣದಲ್ಲಿ ಆದಾಯ ತೆರಿಗೆ ಬೆಳಗಾವಿ ವಿಭಾಗದ ಆದಾಯ ತೆರಿಗೆ ಅಧಿಕಾರಿ ಭುವನೇಶ್ವರ ಯಲ್ಲಾಪುರಮಠ ಮಾತನಾಡಿದರು. 
ಬಾಗಲಕೋಟೆ

ಆದಾಯ ತೆರಿಗೆ ಟಿಡಿಎಸ್ ಕಡ್ಡಾಯ

ಪ್ರಮುಖ ಮುಖ್ಯಾಂಶಗಳು

  • ಭುವನೇಶ್ವರ ಯಲ್ಲಾಪುರಮಠ ಹೇಳಿಕೆ
  • ಟಿಡಿಎಸ್ ಹಣ ನಿಗದಿತ ಅವಧಿಯ ಒಳಗಾಗಿ ಸಂದಾಯ ಮಾಡಿ
  • ತೆರಿಗೆ ಟಿಡಿಎಸ್ ವಂತಿಗೆ ಪಾವತಿಯಿಂದ ಆಗುವ ಲಾಭಗಳ ಕುರಿತು ವಿಚಾರ ಸಂಕೀರ್ಣ
ಬಾಗಲಕೋಟೆ: ಆದಾಯ ತೆರೆಗೆ ಟಿಡಿಎಸ್ ಹಣ ನಿಗದಿತ ಅವಧಿಯ ಒಳಗಾಗಿ ಸಂದಾಯ ಮಾಡಿ ಎಂದು ಆದಾಯ ತೆರಿಗೆ ಬೆಳಗಾವಿ ವಿಭಾಗದ ಆದಾಯ ತೆರಿಗೆ ಅಧಿಕಾರಿ ಭುವನೇಶ್ವರ ಯಲ್ಲಾಪುರಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಗುರುವಾರ ಆದಾಯ ತೆರಿಗೆ ಟಿಡಿಎಸ್ ವಂತಿಗೆ ಪಾವತಿಯಿಂದ ಆಗುವ ಲಾಭಗಳ ಕುರಿತು ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಅವರು, ಹಣ ಪಾವತಿಸದೆ ಇದ್ದರೆ ದಂಡ ಪಾವತಿಸಬೇಕಾಗುತ್ತದೆ. ಟಿಡಿಎಸ್ ನಿಬಂಧನೆಗಳ ಅನುಸರಣೆಗೆ ಪ್ರಾಥಮಿಕ ಜವಾಬ್ದಾರಿ ಸೇರಿ ಅನೇಕ ವಿಷಯಗಳ ಬಗ್ಗೆ ತಿಳಿಸಿದರು.
ತೆರಿಗೆ ಅಧಿಕಾರಿ ಆರ್.ಬಿ.ಕಬ್ಬಲಗೇರಿ ಮಾತನಾಡಿ, ಬಿವಿವಿ ಸಂಘವು ಆದಾಯ ತೆರಿಗೆ ಪಾವತಿ ಮಾಡುವ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಇದೊಂದು ಮಾದರಿ ಸಂಸ್ಥೆಯಾಗಿದೆ ಎಂದು ಶ್ಲಾಘಸಿದರು.
ಸಂಘದ ಲೆಕ್ಕಪರಿಶೋಧಕ ವಿಭಾಗದ ಪ್ರಭಾರಿ ಕುಮಾರ ಜಿಗಜಿನ್ನಿ ಆದಾಯ ತೆರಿಗೆ ಕುರಿತು ಸಂವಾದ ನಡೆಸಿದರು. ಸಂಘದ ಆಡಳಿತಾಧಿಕಾರಿ ವಿ.ಆರ್.ಶಿರೂಳ ಅಧ್ಯಕ್ಷತೆ ವಹಿಸಿದ್ದರು. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ್ಯ ಭುವನೇಶ್ವರಿ ಯಳಮೇಲಿ, ಸಂಘದ ಲೆಕ್ಕಾಧಿಕಾರಿ ಓಂಕಾರ, ಬಸವರಾಜ ಚಿನಿವಾಲರ ಇತರರಿದ್ದರು. ಸಿ.ಪಿ.ಸಿಂಪಿ ವಂದಿಸಿದರು. ಎಚ್.ಎಸ್.ಯಾದವಾಡ ನಿರೂಪಿಸಿದರು.