ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ಧಷ್ಟಾವಧಿ ಧರಣಿ 29ನೆಯ ದಿನವೂ ಮುಂದುವರೆಯಿತು. ಬಸವರಾಜ ಬಡ್ಡಿ, ಹಸನಸಾಬ ಪಿಂಜಾರ, ಮಹಾಂತೇಶ ನಾಡಗೌಡರ, ಸಂಗಪ್ಪ ಆನೇಹೊಸೂರ, ಭೀಮಪ್ಪ ಗೋನಾಳ ಇತರರಿದ್ದರು. 
ಬಾಗಲಕೋಟೆ

ಇದ್ದಲಗಿ ಸಂತ್ರಸ್ತರ ಧರಣಿ ಮುಂದುವರಿಕೆ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಬೇಡಿಕೆ ಈಡೇರಿಕೆಗೆ ಪಾದಯಾತ್ರೆ
  • ಪೂರ್ವಭಾವಿ ಸಭೆ ನಿರ್ಧಾರ
  • ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರು
ಹುನಗುಂದ: ತಾಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಬುಧವಾರ 29ನೇ ದಿನವೂ ಮುಂದುವರಿಯಿತು.
ಹಸನಸಾಬ ಪಿಂಜಾರ ಮಾತನಾಡಿ, ಪುನರ್ವಸತಿ ಕೇಂದ್ರದಲ್ಲಿ ಹೊಸ ಶೆಡ್‌ಗಳ ನಿರ್ಮಾಣ, ಎರಡನೇ ಹಂತದ ಪರಿಹಾರ ಮಂಜೂರು, 4 ಗುಂಟೆ ನಿವೇಶನ ಹಾಗೂ ಮೂಲ ಸೌಲಭ್ಯಗಳ ಒದಗಿಕೆಗಾಗಿ 29 ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ.
ಆದರೆ ಜನಪ್ರತಿನಿಧಿಗಳು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಇರುವುದರಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯವಾಗಿ ಜೂ. 5ರಂದು ಸಂಜೆ 4 ಗಂಟೆಗೆ ಇದ್ದಲಗಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಬಳಿಕ ಇದ್ದಲಗಿಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಹಾಗೂ ಸಂತ್ರಸ್ತರ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಬಸವರಾಜ ಬಡ್ಡಿ, ಮಹಾಂತೇಶ ನಾಡಗೌಡರ, ಸಂಗಪ್ಪ ಆನೇಹೊಸೂರ, ಭೀಮಪ್ಪ ಗೋನಾಳ, ಬಸಪ್ಪ ಹಳಪೇಟಿ, ಮಲ್ಲಪ್ಪ ಅಡಿಹಾಳ, ಭೀಮಪ್ಪ ಆಡಿಹಾಳ, ಸಂಗಮೇಶ ಆನೇಹೊಸೂರ, ಕಲ್ಲಪ್ಪ ಆನೇಹೊಸೂರ, ಶರಣಪ್ಪ ಮುಳ್ಳೂರ, ಬಸವರಾಜ ಮುಳ್ಳೂರ, ಹಬೀಸಾಬ ಮುಲ್ಲಾ, ಹುಚ್ಚಪ್ಪ ಬೂದಗೂಳಿ, ಹನಮಂತ ಹಡಪದ, ಮಹಾಂತೇಶ ವಾಲಿಕಾರ, ಇಮಾಮಸಾಬ ಹುನಗುಂದ, ಶರಣಪ್ಪ ಬೇನಾಳ, ಮಲ್ಲಮ್ಮ ಗಡ್ಡಿಮಠ, ಮುತ್ತವ್ವ ಬೇನಾಳ, ಮಹಾದೇವಿ ತೋಟಗೇರಿ ಇದ್ದರು.