ಇದ್ದಲಗಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ವಿಜಯಾನಂದ ಕಾಶಪ್ಪನವರ.  
ಬಾಗಲಕೋಟೆ

ಬೇಡಿಕೆ ಈಡೇರಿಸದಿದ್ದರೆ ನಿಮ್ಮೂರಿಗೆ ಕಾಲು ಇಡಲ್ಲ

ಬಾಗಲಕೋಟೆ: ನಾನು ಸಹ ಮುಳುಗಡೆ ಸಂತ್ರಸ್ತರ ಕುಟುಂಬದಿAದಲೇ ಬಂದವನು. ಸಂತ್ರಸ್ತರ ಕಣ್ಣೀರು ನೋಡಿಕೊಂಡೇ ಬೆಳೆದಿದ್ದೇನೆ. ನಿಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿಯೇ ತೀರುತ್ತೇನೆ. ಅದಕ್ಕೆ ನನಗೆ ಸ್ವಲ್ಪ ಸಮಯಾವಕಾಶವನ್ನು ಕೋರುತ್ತೇನೆ ಅಷ್ಟೆ. ನಿಮ್ಮ ಬೇಡಿಕೆ ಈಡೇರಿಸದೇ ಇದ್ದರೆ ನಾನು ನಮ್ಮೂರಿಗೆ ಕಾಲು ಇಡಲ್ಲ. ದಯವಿಟ್ಟು ನನ್ನನ್ನು ನಂಬಿ, ಸಮಯ ನೀಡಿ'.
ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತರಿಗೆ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಮಂಗಳವಾರ ಗ್ರಾಮದ ಶರಣಬಸವೇಶ್ವರ ದೇಗುಲ ಆವರಣದಲ್ಲಿ ಸಂತ್ರಸ್ತರಿಗೆ ಈ ರೀತಿ ಭರವಸೆ ನೀಡಿದರು.
ಆಗಸ್ಟ್ ೩೦ ರಂದು ರಾತ್ರಿ ಗ್ರಾಮದ ಸಂತ್ರಸ್ತರು ವಾಸ ಮಾಡುತ್ತಿದ್ದ ಶೆಡ್‌ಗಳಿಗೆ ಬೆಂಕಿ ಹತ್ತಿಕೊಂಡು ೨೮ ಶೆಡ್ ಸಂಪೂರ್ಣ ಭಸ್ಮವಾಗಿರುವ ಹಿನ್ನಲೆ ಘಟನಾ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿ, ಸಂತ್ರಸ್ತರ ಸಂಕಷ್ಟ ಆಲಿಸಿದ ಬಳಿಕ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಾಟ್ ಸರ್ಕಿಟ್‌ನಿಂದಾಗಿ ಅಗ್ನಿ ಅವಘಡ ಆಗಿದೆ. ಸಂತ್ರಸ್ತರು ಎಲ್ಲವನ್ನು ಕಳೆದುಕೊಂಡು ನಿರ್ಗತಿಕರಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ನಿಮ್ಮ ಕಣ್ಣೀರಲ್ಲಿ ಭಾಗಿಯಾಗಲು ಇಲ್ಲಿಗೆ ಬಂದಿದ್ದೇನೆ. ಘಟನೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ನೀವು ಯಾರೂ ಸಹ ದೃತಿಗೆಡಬೇಕಿಲ್ಲ, ಕಣ್ಣೀರು ಹಾಕಬೇಡಿ. ಧೈರ್ಯವಾಗಿರಿ. ನಿಮಗೆ ಆಗಿರುವ ನಷ್ಟವನ್ನು ಸರ್ಕಾರದಿಂದ ತುಂಬಿಕೊಡುವ ಪ್ರಾಮಾಣಿಕ ಕೆಲಸವನ್ನು ನಾನು ಮಾಡುತ್ತೇನೆ ಎಂದರು.
ಬೆAಕಿಗೆ ಸಿಕ್ಕು ಮನೆಯಲ್ಲಿ ಪ್ರತಿಯೊಂದು ವಸ್ತು ಸುಟ್ಟು ಹೋಗಿವೆ. ಹಣ, ಒಡವೆ, ಪಾತ್ರೆ, ಪಗಡೆ, ದಾಖಲೆ ಪತ್ರಗಳು, ಬಟ್ಟೆ ಎಲ್ಲವೂ ಹೋಗಿರುವುದು, ಸೆಪ್ಟಂಬರ್ ೧೩ರಂದು ಮದುವೆ ಮಾಡಲು ಮನೆಯಲ್ಲಿ ಇಟ್ಟಿದ್ದ ಹಣ, ಬಂಗಾರ, ಬೆಳ್ಳಿ, ಮದುವೆ ಸೀರೆಗಳು ನಾಶ ಆಗಿರುವುದು ಇದೆ. ಇದೆಲ್ಲವೂ ಬಹಳ ನೋವು ತಂದಿದೆ. ಈಗಾಗಲೇ ಯಾವ ಯಾವ ಶೆಡ್‌ಗಳಲ್ಲಿ ಏನೆಲ್ಲ ಹಾನಿಯಾಗಿದೆ ಎಂದು ವರದಿ ಪಡೆದುಕೊಂಡು ಮುಖ್ಯಮಂತ್ರಿಗಳು ಸಲ್ಲಿಸುವೆ. ಆಗಿರುವ ಹಾನಿಗೆ ಪರಿಹಾರ ಒದಗಿಸುವುದಾಗಿ ಹೇಳಿದ ಸಚಿವರು, ಸುಟ್ಟು ಹೋಗಿರುವ ೨೮ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿ, ಜಿಲ್ಲಾಡಳಿತದಿಂದ ಸಂತ್ರಸ್ತರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದರು.