ಬನಹಟ್ಟಿಯಲ್ಲಿ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಿಜಯಾ ಹೋಟೆಲ್ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಬಂದ್ ಆಗಿರುವುದು. 
ಬಾಗಲಕೋಟೆ

ಬನಹಟ್ಟಿಯಲ್ಲಿ ಹೊಟೇಲ್‌ಗಳು ಬಂದ್

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ
  • ರಬಕವಿ-ಬನಹಟ್ಟಿ ತಾಲೂಕಿನ ಹಲವಾರು ಹೊಟೇಲ್‌ಗಳು ಕಳೆದ ಮೂರು ದಿನಗಳಿಂದ ಬಂದ್
  • ವಾಣಿಜ್ಯ ಸಿಲಿಂಡರ್ ಲಭ್ಯತೆ ಇಲ್ಲದ ಹಿನ್ನೆಲೆಯಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿದ್ದು
ರಬಕವಿ/ಬನಹಟ್ಟಿ: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮದಿಂದ ರಬಕವಿ-ಬನಹಟ್ಟಿ ತಾಲೂಕಿನ ಹಲವಾರು ಹೊಟೇಲ್‌ಗಳು ಕಳೆದ ಮೂರು ದಿನಗಳಿಂದ ಬಂದ್ ಆಗುತ್ತಿದ್ದು, ಇದೀಗ ದೊಡ್ಡ ದೊಡ್ಡ ಹೊಟೇಲ್‌ಗಳಿಗೂ ಬಿಸಿ ತಟ್ಟಿದೆ.
ವಾಣಿಜ್ಯ ಸಿಲಿಂಡರ್ ಲಭ್ಯತೆ ಇಲ್ಲದ ಹಿನ್ನೆಲೆಯಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿದ್ದು, ಹೊರವಲಯದ ಡಾಬಾಗಳು ಸಹ ಸಿಲಿಂಡರ್ ಕೊರತೆಯಿಂದ ಬಹುತೇಕ ಮುಚ್ಚುವ ಸ್ಥಿತಿಗೆ ತಲುಪಿವೆ.
ಕೇಂದ್ರ ಸರ್ಕಾರದಿಂದ ವಾಣಿಜ್ಯ ಗ್ಯಾಸ್ ಪೂರೈಕೆ ಶೀಘ್ರದಲ್ಲೇ ಸರಾಗವಾಗಲಿದೆ ಎಂಬ ಭರವಸೆ ಇದ್ದರೂ, ಇನ್ನೂ ಒಂದು ವಾರದೊಳಗೆ ಪರಿಸ್ಥಿತಿ ಸಾಮಾನ್ಯವಾಗುವ ಸಾಧ್ಯತೆ ಕಡಿಮೆ ಎಂದು ಹೊಟೇಲ್ ಉದ್ಯಮಿಗಳು ಅಂದಾಜಿಸಿದ್ದಾರೆ.
ಕೆಲವು ಸಣ್ಣ ಹೊಟೇಲ್‌ಗಳು ಮಾತ್ರ ಸೀಮಿತ ಸಿಲಿಂಡರ್ ಬಳಕೆಯಿಂದ ಕಡಿಮೆ ಗ್ಯಾಸ್ ಬೇಕಾಗುವ ಪದಾರ್ಥಗಳನ್ನು ಮಾತ್ರ ತಯಾರಿಸುತ್ತಿವೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಮಾಡುವ ದೊಡ್ಡ ಹೋಟೆಲ್‌ಗಳು ಶೇ. 70ರಷ್ಟು ಪದಾರ್ಥಗಳ ತಯಾರಿಕೆಯನ್ನು ಸ್ಥಗಿತಗೊಳಿಸಿವೆ.
ಬನಹಟ್ಟಿಯಲ್ಲಿ ಸುಮಾರು 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಿಜಯಾ ಹೋಟೆಲ್ ಕೂಡ ಸಿಲಿಂಡರ್ ಕೊರತೆಯ ಪರಿಣಾಮವಾಗಿ ಬುಧವಾರದಿಂದ ಬಂದ್ ಮಾಡಲಾಗಿದೆ.