ಮಹಾಲಿಂಗಪುರದ ಬನಶಂಕರಿದೇವಿ ಕಲ್ಯಾಣಮಂಟಪದಲ್ಲಿ ರನ್ನ ವಿಚಾರ ವೇದಿಕೆ ವತಿಯಿಂದ ಜರುಗಲಿರುವ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆ ಅಧ್ಯಕ್ಷ ಜಿ.ಬಿ. ಖಾಸನಿಸ್, ಜಿ.ಎಸ್. ಗೊಂಬಿ, ಎಸ್.ಎಸ್. ಈಶ್ವರಪ್ಪಗೋಳ ಇತರರಿದ್ದರು. 
ಬಾಗಲಕೋಟೆ

13ರಂದು ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ

ಪ್ರಮುಖ ಮುಖ್ಯಾಂಶಗಳು

  • ವೇದಿಕೆ ಅಧ್ಯಕ್ಷ ಗುರುರಾಜ ಖಾಸನಿಸ್ ಮಾಹಿತಿ
  • ರನ್ನ ವಿಚಾರ ವೇದಿಕೆಯಿಂದ ಆಯೋಜನೆ
ಮಹಾಲಿಂಗಪುರ : ಪಟ್ಟಣದ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ರನ್ನ ವಿಚಾರ ವೇದಿಕೆ ವತಿಯಿಂದ ಜೂ. 13ರಂದು ಸಂಜೆ 5:30ಕ್ಕೆ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರನ್ನ ವಿಚಾರ ವೇದಿಕೆ ಅಧ್ಯಕ್ಷ ಗುರುರಾಜ ಖಾಸನಿಸ್ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕಲಾವಿದರಾದ ರಕ್ಷಿತ್ ಕುಲಕರ್ಣಿ, ವಿನಾಯಕ ಇನಾಮದಾರ ಮತ್ತು ಶ್ರೇಯಶ್ರೀ ಇನಾಮದಾರರಿಂದ ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆ ಹಾಗೂ ವಚನ ಗಾಯನ ನಡೆಯಲಿದೆ. ತಬಲಾ ವಾದನಕ್ಕೆ ವಿನಯ ಕುಲಕರ್ಣಿ ಮತ್ತು ಹಾರ್ಮೋನಿಯಂ ವಾದನಕ್ಕೆ ತ್ರಿಗುಣ ಪೂಜಾರಿ ಭಾಗವಹಿಸಲಿದ್ದಾರೆ.
ಯುವ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವರ್ಷಕ್ಕೆ ನಾಲ್ಕು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೂ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಹೇಳಿದರು.
ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆ ಮಾಧ್ಯಮ ಕಾರ್ಯದರ್ಶಿ ಎಸ್.ಎಸ್. ಈಶ್ವರಪ್ಪಗೋಳ, ಜಿ.ಎಸ್. ಗೊಂಬಿ, ಚನಬಸು ಹುಣಶ್ಯಾಳ, ಈರಪ್ಪ ಕಿತ್ತೂರ ಮತ್ತಿತರರಿದ್ದರು.