ಕೆರೂರ ಪಟ್ಟಣಕ್ಕೆ ಆಗಮಿಸಿದ ಉಡುಪಿ ಪೇಜಾವರಮಠದ ಪೀಠಾಽಪತಿ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅವರಿಗೆ ಹಿಂದೂ-ಮುಸ್ಲಿಂ ಸಮಾಜದ ಮುಖಂಡರು ಗೌರವ ನಮನ ಸಲ್ಲಿಸಿದರು. ಪ್ರಾಣೇಶ ಆಚಾರ್ಯ ಕೆರೂರ, ರಂಗನಾಥ ದೇಸಾಯಿ, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬದ್ರುದ್ದೀನಮುಲ್ಲಾ, ಉಸ್ಮಾನಸಾಬಮುಲ್ಲಾ, ಅಹಮ್ಮದಲಿ ಕುಡಚಿ, ಬುಡ್ಡೆಸಾ ಬಡೋಲಿಕಟ್ಟಿ, ಶೌಕತಲಿ ಕುಡಚಿ ಇತರರಿದ್ದರು.
- ಉಡುಪಿ ಪೇಜಾವರ ಶ್ರೀಗಳ ಭೇಟಿ
- ನಗರೇಶ್ವರ ದೇವಸ್ಥಾನಕ್ಕೆ ಭೇಟಿ
ಕೆರೂರ: ಪಟ್ಟಣಕ್ಕೆ ಆಗಮಿಸಿದ ಉಡುಪಿ ಪೇಜಾವರಮಠದ ಪೀಠಾಧಿಪತಿ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.
ಹಳಪೇಟಿ ಬಡಾವಣೆಯ ನಗರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಮೆರವಣಿಗೆ ಮೂಲಕ ಕರೆ ತರಲಾಯಿತು. ಬಳಿಕ ಪಾದ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀಗಳಿಗೆ ಮುಸ್ಲಿಂ ಸಮಾಜದಿಂದ ಗೌರವ ಸಲ್ಲಿಸಲಾಯಿತು. ಪೇಜಾವರ ಶ್ರೀಗಳು ಮಾತನಾಡಿ, ಹಿಂದೂ-ಮುಸ್ಲಿಂ ಸಮಾಜದವರು ಒಂದಾಗಿ ಬಾಳಬೇಕು. ಎಲ್ಲರಿಗೂ ಭಗವಂತ ಒಳ್ಳೆದು ಮಾಡುತ್ತಾನೆ ಎಂದು ಅನುಗ್ರಹ ಸಂದೇಶ ನೀಡಿದರು.
ಪ್ರಾಣೇಶ ಆಚಾರ್ಯ ಕೆರೂರ, ರಂಗನಾಥ ದೇಸಾಯಿ, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬದ್ರುದ್ದೀನಮುಲ್ಲಾ, ಉಸ್ಮಾನಸಾಬಮುಲ್ಲಾ, ಅಹಮ್ಮದಲಿ ಕುಡಚಿ, ಬುಡ್ಡೆಸಾ ಬಡೋಲಿಕಟ್ಟಿ, ಶೌಕತಲಿ ಕುಡಚಿ, ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ನಿತಿನಕುಮಾರ, ಐ.ಎಂ.ಹಿರೇಗೌಡ್ರ, ಮಹಾಂತೇಶ ಮೆಣಸಗಿ, ಎನ್.ಬಿ.ಬನ್ನೂರ, ಆನಂದ ನಾನಾವಟೆ, ರಂಗಣ್ಣ ಎಮ್ಮಿ, ಡಿ.ಪಿ.ಅಮಲಝರಿ, ಮಲ್ಲಪ್ಪ ಹಡಪದ, ಡಾ.ಬಸವರಾಜ ಬೊಂಬ್ಲೆ, ಗೋಪಾಲಕೃಷ್ಣಾ ದೇಸಾಯಿ ಇತರರಿದ್ದರು.