ರಬಕವಿ ಕಂಠಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜ್ಯೋತಿಬಾ ದೇವರಿಗೆ ತೆರಳುವ ಪಾದಯಾತ್ರೆ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ವಿರುಪಾಕ್ಷಯ್ಯ ಮಠದ, ಶ್ರೀಶೈಲ ಜೊತೆಪ್ಪಗೋಳ ಇತರರಿದ್ದರು. 
ಬಾಗಲಕೋಟೆ

ಪಾದಯಾತ್ರೆ ಆರೋಗ್ಯಕ್ಕೆ ಉತ್ತಮ

ಪ್ರಮುಖ ಮುಖ್ಯಾಂಶಗಳು

  • ವಿರುಪಾಕ್ಷಯ್ಯ ಮಠದ ಹೇಳಿಕೆ
  • ಕೊಲ್ಹಾಪುರ ಜ್ಯೋತಿಬಾಗೆ ಪಾದಯಾತ್ರೆ
ರಬಕವಿ/ಬನಹಟ್ಟಿ: ದೇವರ ಹೆಸರಿನಲ್ಲಿ ಮಾಡುವ ಪಾದಯಾತ್ರೆ, ಭಕ್ತಿ , ಆರೋಗ್ಯ ಹಾಗೂ ವೈಜ್ಞಾನಿಕ ಹಿತದೃಷ್ಟಿಯಿಂದಲೂ ಅದು ಉತ್ತಮವಾಗಿದೆ ಎಂದು ಬಂಡಿಗಣಿ ಗ್ರಾಮದ ಜಂಗಮ ಸಮಾಜದ ಹಿರಿಯರಾದ ವಿರುಪಾಕ್ಷಯ್ಯ ಮಠದ ಹೇಳಿದರು.
ರಬಕವಿ ಕಂಠಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜಮಖಂಡಿ ತಾಲೂಕಿನ ಹುನ್ನೂರ ಹಾಗೂ ರಬಕವಿ ಬನಹಟ್ಟಿ ತಾಲೂಕಿನಿಂದ ಶನಿವಾರ ಕೊಲ್ಹಾಪುರ ಸಮೀಪದ ಜ್ಯೋತಿಬಾ ದೇವರ ಜಾತ್ರೆಗೆ ನೂರಾರು ಯುವಕರು ಪಾದಯಾತ್ರೆ ಮೂಲಕ ತೆರಳುವ ವೇಳೆ ಅನ್ನದಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವರ್ಷ ಪಾದಯಾತ್ರೆ ಮೂಲಕ ತೆರಳು ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಿರುತ್ತೇವೆ. ಮಹಾರಾಷ್ಟ್ರದ ಕೊಲ್ಹಾಪುರ ಜ್ಯೋತಿಬಾ ಚೈತ್ರ ಯಾತ್ರೆ ಏ.1ರಂದು ನಡೆಯಲಿದ್ದು, ಮಹಾರಾಷ್ಟ್ರದ ವಾಡಿ ರತ್ನಗಿರಿಯಲ್ಲಿರುವ ಜ್ಯೋತಿಬಾ ದೇವಸ್ಥಾನದಲ್ಲಿ ನಡೆಯುವ ಈ ಪ್ರಸಿದ್ಧ ಜಾತ್ರೆಗೆ ಈ ಭಾಗದಿಂದ ಸಾವಿರಾರು ಭಕ್ತರು ತೆರಳುತ್ತಾರೆ. ಜಾತ್ರಾ ಸಂಧರ್ಭದಲ್ಲಿ ಲಕ್ಷಾಂತರ ಭಕ್ತರು ಗುಲಾಲ್ ಎರಚಿ, `ಜೋತಿಬಾಚಾ ನಾವಾನಂ ಚಾಂಗಭಲೆ' ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸುತ್ತಾರೆ. ಈ ಹಬ್ಬವು ಶಿವನ ಅವತಾರವಾದ ಜ್ಯೋತಿಬಾನಿಗೆ ಅರ್ಪಿತವಾಗಿದೆ ಎಂದು ತಿಳಿಸಿದರು.
ಕಡಪಟ್ಟಿ, ಹುನ್ನೂರ ಗ್ರಾಮದ ಮಂಜು ಮಾಳಿ, ಶ್ರೀಶೈಲ ಜೊತೆಪ್ಪಗೋಳ ಇತರರಿದ್ದರು.