ಬಾಗಲಕೋಟೆ ನಗರದ ಬಿವಿವಿ ಸಂಘದ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಮಾನಸಿಕ ಚಿಕಿತ್ಸಾ ವಿಭಾಗ ಮತ್ತು ಬಿವಿವಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜು ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಆಟಿಸಂ ಜಾಗೃತಿ ದಿನ ಮತ್ತು ಶಿಕ್ಷಕರಿಗಾಗಿ ಅರಿವು ಹಾಗೂ ತರಬೇತಿ ಕಾರ್ಯಕ್ರಮ ಬಿಇಒ ಮಹಾಗುಂಡಪ್ಪ ಬಡದಾನಿ ಉದ್ಘಾಟಿಸಿದರು.  
ಬಾಗಲಕೋಟೆ

ಆಟಿಸಂ ಲಕ್ಷಣಗಳಿರುವ ಮಕ್ಕಳ ಬಗ್ಗೆ ಪ್ರೀತಿ ಇರಲಿ

ಬಾಗಲಕೋಟೆ: ಆಟಿಸಂ (ಸ್ವಲೀನತೆ) ಒಂದು ಕಾಯಿಲೆಯಲ್ಲ, ಮೆದುಳಿನ ಬೆಳವಣಿಗೆಯಲ್ಲಿನ ವ್ಯತ್ಯಾಸವಷ್ಟೆ ಆಗಿದೆ. ಇಂಥವರ ಸಾಮರ್ಥ್ಯವನ್ನು ಗುರುತಿಸುವುದು ಮುಖ್ಯ. ಸ್ವಲೀನತೆ ಲಕ್ಷಣಗಳಿರುವ ಮಕ್ಕಳ ಬಗ್ಗೆ ಪ್ರೀತಿ, ತಾಳ್ಮೆ ಮತ್ತು ಸಹಾನುಭೂತಿ ಇರಲಿ ಎಂದು ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಹೇಳಿದರು.
ನಗರದ ಬಿವಿವಿ ಸಂಘದ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಮಾನಸಿಕ ಚಿಕಿತ್ಸಾ ವಿಭಾಗ ಮತ್ತು ಬಿವಿವಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜು ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಆಟಿಸಂ ಜಾಗೃತಿ ದಿನ ಮತ್ತು ಶಿಕ್ಷಕರಿಗಾಗಿ ಅರಿವು ಹಾಗೂ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯದಲ್ಲೇ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸ್ವಲೀನತೆ ಗುರುತಿಸಿ ಸೂಕ್ತ ಚಿಕಿತ್ಸೆಯಿಂದ ಜೀವನಶೈಲಿ ಮತ್ತು ಕಲಿಯುವಿಕೆ ಉತ್ತಮಪಡಿಸಬಹುದು. ಮಾನಸಿಕ ಮತ್ತು ಸ್ಪೀಚ್ ಥೆರಪಿ ಚಿಕಿತ್ಸೆಗಳು ಲಭ್ಯವಿವೆ. ಶಾಲೆಯಲ್ಲಿ ಶಿಕ್ಷಕರು ಆಟಿಸಂ ಗುಣಲಕ್ಷಣಗಳಿರುವ ೩ ರಿಂದ ೫ ವರ್ಷದ ಒಳಗಿನ ಮಕ್ಕಳನ್ನು ಗುರುತಿಸಿ ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಿದರೆ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ ಎಂದರು.
ಆಟಿಸಂನಿ0ದ ಬಳಲುತ್ತಿರುವ ಮಕ್ಕಳಿಗೆ ಅಗತ್ಯದ ಚಿಕಿತ್ಸೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವುದು ವೈದ್ಯರ ಆದ್ಯತೆಯಾಗಲಿ. ಪಾಲಕರು ಕೂಡ ಜವಾಬ್ದಾರಿ ನಿರ್ವಹಿಸಬೇಕು. ಆಟಿಸಂ ಕುರಿತು ಸಾರ್ವಜನಿಕರಲ್ಲಿ ವಿಶೇಷವಾಗಿ ಶಿಕ್ಷಕರಲ್ಲಿ ಜಾಗೃತಿ ಮತ್ತು ತಿಳುವಳಿಕೆ ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಬಾಗಲಕೋಟೆ ಕ್ಷೇತ್ರ ಶಿಕ್ಷಣಾಽಕಾರಿ ಮಹಾಗುಂಡಪ್ಪ ಬಡದಾನಿ ಮಾತನಾಡಿ, ಆಟಿಸಂ ಗುಣಲಕ್ಷಣಗಳಿರುವ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದು ಅಗತ್ಯವಾಗಿದೆ. ಆಟಿಸಂನಿAದ ಬಳಲುತ್ತಿರುವ ಮಕ್ಕಳಿಗೆ ಬಿವಿವಿ ಸಂಘದ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾಲೇಜಿನ ಚಿಕಿತ್ಸಾ ತಜ್ಞರು ಈಗಾಗಲೇ ೨೭ ಸರ್ಕಾರಿ ಶಾಲೆಗಳಲ್ಲಿನ ಆಟಿಸಂ ಗುಣಲಕ್ಷಣಗಳಿರುವ ಮಕ್ಕಳನ್ನು ಗುರುತಿಸಿದ್ದು ಆರಂಭದ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದರು.
ಬಾಗಲಕೋಟೆ ನಗರದ ವಿವಿಧ ಶಾಲೆಗಳಿಂದ ನೂರಕ್ಕೂ ಹೆಚ್ಚು ಶಿಕ್ಷಕ-ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಲ್ಲಿ ಕಂಡುಬರುವ ಆಟಿಸಂನ್ನು ಗುರುತಿಸುವ ಕುರಿತು ತರಬೇತಿ ಪಡೆದರು.
ಚಿಕ್ಕಮಕ್ಕಳ ತಜ್ಞವೈದ್ಯೆ ಡಾ.ಶೀಲಾ, ಮನೋವೈದ್ಯೆ ಡಾ.ಲಕ್ಷಿ÷್ಮದೇವಿ, ಮಾನಸಿಕ ತಜ್ಞೆ ಸಮೀಕ್ಷಾ, ಸ್ಪೀಚ್ ಥೆರಪಿಸ್ಟ್ ಸ್ನೇಹಾ ಹಿರೇಮಠ ಮತ್ತು ಶಿಕ್ಷಣ ಇಲಾಖೆಯ ಸಿ.ವೈ.ಸಂಗಮ ಉಪನ್ಯಾಸ ನೀಡಿದರು. ಮೆಡಿಕಲ್ ಕಾಲೇಜ್ ಉಪಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ, ವೈದ್ಯಕೀಯ ಅಽÃಕ್ಷಕ ಡಾ.ಶ್ರೀರಾಮ ಕೋರಾ, ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜ್ ಪ್ರಾಚಾರ್ಯ ಡಾ.ಶ್ರೀವಿದ್ಯಾ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ, ಮಾನಸಿಕ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ನಾರಾಯಣ ಮುತಾಲಿಕ ಉಪಸ್ಥಿತರಿದ್ದರು. ಡಾ.ಗೌರಿ ಪ್ರಾರ್ಥಿಸಿದರು. ಡಾ.ಭಾಸ್ಕರ ಮಾರಾ ಸ್ವಾಗತಿಸಿದರು ಮತ್ತು ಸಿಂಚನಾ ವಂದಿಸಿದರು.