ಗುಳೇದಗುಡ್ಡ ಪಟ್ಟಣದ ತಾ.ಪಂ. ಕಚೇರಿಯಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಧ್ಯಕ್ಷ ಅನೀಲಕುಮಾರ ದಿಡ್ಡಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ತಾಲೂಕು ಅಧ್ಯಕ್ಷ ವೈ.ಆರ್. ಹೆಬ್ಬಳ್ಳಿ, ಯಲಗುರ್ದಪ್ಪ ಗುಡಿಸಲಮನಿ, ರಂಗನಾಥ ಮೊಖಾಶಿ, ದ್ಯಾವಪ್ಪ ಮಾಗಿ, ಸಲ್ಲಾವುದ್ದೀನ ಮೊಮಿನ್, ಅಕ್ಕಮ್ಮ ಬೆಳಗಲ್, ಶಿಶಿಕಲಾ ಗೋನಾಳ ಇದ್ದರು. 
ಬಾಗಲಕೋಟೆ

ಶೇ. 90ರಷ್ಟು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ಲಾಭ

ಪ್ರಮುಖ ಮುಖ್ಯಾಂಶಗಳು

  • ಸಮಿತಿ ಜಿಲ್ಲಾಧ್ಯಕ್ಷ ಅನೀಲಕುಮಾರ ದಿಡ್ಡಿ ಅಭಿಮತ
  • ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
  • ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆ
ಗುಳೇದಗುಡ್ಡ: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿವರ್ಷ ಅಂದಾಜು 58 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದು, ಯೋಜನೆಗಳು ಸರಿಯಾಗಿ ಅನುಷ್ಠಾನಮಾಡಲು ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿದೆ. ಈಗಾಗಲೇ ಶೇ. 98 ರಿಂದ 99ರಷ್ಟು ಅರ್ಹ ಲಾನುಭವಿಗಳಿಗೆ ಪಂಚ ಗ್ಯಾರಂಟಿಗಳು ತಲುಪಿವೆ ಎಂದು ಪಂಚ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಅನೀಲಕುಮಾರ ದಿಡ್ಡಿ ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕು ಹಾಗೂ ಜಿಲ್ಲಾ ಸಮಿತಿಗಳು ಅಧಿಕಾರಿಗಳೊಂದಿಗೆ ಪ್ರತಿ ಗ್ರಾಮದಲ್ಲಿ ಸಭೆ ನಡೆಯಿಸಿ, ಲಾನುಭವಿಗಳಿಗೆ ಯೋಜನೆಗಳು ತಲುಪಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕಿದೆ. ಏನಾದರೂ ಸಮಸ್ಯೆಗಳು ಇದ್ದರೆ ಅದನ್ನು ಪರಿಹರಿಸಲು ಕ್ರಮಕೈಗೊಳ್ಳಬೇಕು. ಗ್ಯಾರಂಟಿ ಯೋಜನೆಗಳಿಂದ ಲಾನುಭವಿಗಳಿಗೆ ಲಾಭವಾಗಿದೆಯೋ ಇಲ್ಲವೋ? ಎಂಬುದನ್ನು ತಿಳಿದುಕೊಳ್ಳಬೇಕು. ಅಲ್ಲದೇ ಪಟ್ಟಣಗಳಲ್ಲಿ ಕೂಡಾ ವಾರ್ಡ್ ಮಟ್ಟದ ಸಭೆ ನಡೆಸಬೇಕು ಎಂದರು.
ಸಮಿತಿ ತಾಲೂಕು ಅಧ್ಯಕ್ಷ ವೈ.ಆರ್. ಹೆಬ್ಬಳ್ಳಿ, ಯಲಗುರ್ದಪ್ಪ ಗುಡಿಸಲಮನಿ, ರಂಗನಾಥ ಮೊಖಾಶಿ, ದ್ಯಾವಪ್ಪ ಮಾಗಿ, ಸಲ್ಲಾವುದ್ದೀನ ಮೊಮಿನ್, ಅಕ್ಕಮ್ಮ ಬೆಳಗಲ್, ಶಿಶಿಕಲಾ ಗೋನಾಳ, ತಾ.ಪಂ. ಸಿಒ ಮಲ್ಲಿಕಾರ್ಜುನ ಬಡಿಗೇರ, ರಾಮಚಂದ್ರ ಮೇತ್ರಿ, ಬಸ್ ಘಟಕದ ಮ್ಯಾನೇಜರ್ ಶಹಿರಾಬಾನು ಅತ್ತಾರ, ಅಂಗನವಾಡಿ ಮೇಲ್ವಿಚಾರಕಿ ಭುವನೇಶ್ವರಿ ಬರಹಾಣಪುರ ಮತ್ತಿತರರು ಇದ್ದರು.