ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದಲ್ಲಿ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಮುತ್ತಣ ಕಲಗೋಡಿ ಮಾತನಾಡಿದರು. ಸದಸ್ಯರಾದ ಸುರೇಶ ಹಳಪೇಟಿ, ನರೇಗಾ ಸಹಾಯಕ ನಿರ್ದೇಶಕ ಮಹಾಂತೇಶ ಚಲವಾದಿ, ಪಿಡಿಒ ಶಿವಲಿಂಗಪ್ಪ ಅಡಲಟ್ಟಿ ಇದ್ದರು. 
ಬಾಗಲಕೋಟೆ

ಗ್ಯಾರಂಟಿ ಯೋಜನೆ ಜನತೆಗೆ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಮುತ್ತಣ್ಣ ಕಲಗೋಡಿ ಹೇಳಿಕೆ
  • ಬೆಳಗಲ್ಲ ಗ್ರಾಮದಲ್ಲಿ ಕುಂದುಕೊರತೆ ಸಭೆ
  • ಕುಟುಂಬ ನಿರ್ವಹಣೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಹಳಷ್ಟು ಸಹಕಾರಿ
ಹುನಗುಂದ: ಕುಟುಂಬ ನಿರ್ವಹಣೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಹಳಷ್ಟು ಸಹಕಾರಿಯಾಗಿವೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಮುತ್ತಣ್ಣ ಕಲಗೋಡಿ ಹೇಳಿದರು.
ತಾಲೂಕಿನ ಬೆಳಗಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೋಮವಾರ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ವತಿಯಿಂದ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಕೆಲವೊಂದು ತಾಂತ್ರಿಕ ಸಮಸ್ಯೆ ಹಾಗೂ ಇನ್ನಿತರ ಕಾರಣಗಳಿಂದ ಕೆಲವರು ಗ್ಯಾರಂಟಿ ಯೋಜನೆಗಳಿಂದ ವಂಚಿತರಾದವರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಂದುಕೊರತೆ ಸಭೆಮಾಡಿ ಲಾನುಭವಿಗಳ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ ಎಂದರು.
ಆಹಾರ ನಿರೀಕ್ಷಕ ರಾಜಶೇಖರ ತುಂಬದ ಮಾತನಾಡಿ, ಬೆಳಗಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 70 ಅಂತ್ಯೋದಯ, 376 ಬಿಪಿಎಲ್, 160 ಎಪಿಎಲ್ ಸೇರಿ ಒಟ್ಟು 606 ಕಾರ್ಡ್‌ಗಳಿವೆ. ಅನ್ನಭಾಗ್ಯ ಯೋಜನೆಯ ಧಾನ್ಯಗಳ ಪೂರೈಕೆಯಲ್ಲಿನ ಸಮಸ್ಯೆ ಕೇಳುತ್ತಿದ್ದಂತೆ. ಅಲ್ಲಿನ ಪಡಿತರರೆಲ್ಲರೂ ಪ್ರತಿ ತಿಂಗಳು 2 ಕೆಜಿ ಕಡಿತಗೊಳಿಸಿ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿಡಿಪಿಒ ಮುತ್ತಣ್ಣ ಬಿ. ಮಾತನಾಡಿ, ರಾಜ್ಯ ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಹುನಗುಂದ ಮತ್ತು ಇಳಕಲ್ಲ ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆ ಶೇ. 98.5ರಷ್ಟು ಸಾಧನೆ ಮಾಡಿದೆ ಎಂದರು.
ಕೆಎಸ್‌ಆರ್‌ಟಿಸಿ ಅಧಿಕಾರಿ ಷಣ್ಮುಖಪ್ಪ ಆನೆಹೊಸೂರ, ಮುತ್ತಣ್ಣ ರೂಡಗಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸದಸ್ಯ ಸುರೇಶ ಹಳಪೇಟಿ, ಶಿವಕುಮಾರ ಹೂನ್ನಳ್ಳಿ, ನರೇಗಾ ಸಹಾಯಕ ನಿರ್ದೇಶಕ ಮಹಾಂತೇಶ ಚಲವಾದಿ, ಪಿಡಿಒ ಶಿವಲಿಂಗಪ್ಪ ಅಡಲಟ್ಟಿ, ಮುಖಂಡರಾದ ಕರಬಸಪ್ಪ ಹಕಾರಿ, ಮಹಾಂತೇಶ ಹಳಬರ ಉಪಸ್ಥಿತರಿದ್ದರು.