ತೇರದಾಳ ಪಟ್ಟಣದ ಪುರಸಭೆಗೆ ಆಡಳಿತಾಧಿಕಾರಿ, ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಭೇಟಿ ನೀಡಿ, ಸಭೆ ನಡೆಸಿದರು, ಮುಖ್ಯಾಧಿಕಾರಿ ಎ್.ಬಿ. ಗಿಡ್ಡಿ, ಮ್ಯಾನೇಜರ್ ಮಲ್ಲಿಕಾರ್ಜುನ ಬಿ.ಪಾಟೀಲ, ಸಿಬ್ಬಂದಿ ಮತ್ತಿತರರಿದ್ದರು.
- ಎಸಿ ಶ್ವೇತಾ ಬೀಡಿಕರ ಭೇಟಿ
- ಸಭೆ ನಡೆಸಿ, ಸಿಬ್ಬಂದಿ ಸಮಸ್ಯೆಗೆ ಸ್ಪಂದನೆ
- ನಾಲ್ಕು ತಿಂಗಳ ವೇತನವನ್ನು ಸೋಮವಾರ ಅಥವಾ ಎರಡು ದಿನಗಳಲ್ಲಿ ಜಮೆ ಮಾಡಲಾಗುವುದು.
ತೇರದಾಳ: ಪಟ್ಟಣದ ಪುರಸಭೆಗೆ ಆಡಳಿತಾಧಿಕಾರಿ, ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೋಮವಾರ ಭೇಟಿ ನೀಡಿ, ಸಿಬ್ಬಂದಿ ಸಭೆ ನಡೆಸಿದರು. ತದನಂತರ ಪುರಸಭೆ ನೀರು ಸರಬರಾಜು ಕಾರ್ಮಿಕರು ನಡೆಸುತ್ತಿರುವ ಮುಷ್ಕರಕ್ಕೆ ಸ್ಪಂದಿಸಿ, ಬಾಕಿ ಉಳಿದ ವೇತನವನ್ನು ಮೂರು ಕಂತುಗಳಲ್ಲಿ ಪಾವತಿಸುವುದಾಗಿ ತಿಳಿಸಿದರು.
ನಾಲ್ಕು ತಿಂಗಳ ವೇತನವನ್ನು ಸೋಮವಾರ ಅಥವಾ ಎರಡು ದಿನಗಳಲ್ಲಿ ಜಮೆ ಮಾಡಲಾಗುವುದು. ಮೇ 15ರೊಳಗೆ ಇನ್ನೇರಡು ಕಂತು ಮತ್ತು ತಿಂಗಳ ಕೊನೆ ಹಂತಕ್ಕೆ ಇನ್ನೇರಡರಂತೆ ಒಟ್ಟು ಎಂಟು ತಿಂಗಳ ಬಾಕಿ ಹಣ ಪಾವತಿಸುವುದಾಗಿ ತಿಳಿಸಿದರು.
ಪುರಸಭೆ ಹಣಕಾಸಿನ ಮೂಲವಾಗಿರುವ ಬಾಡಿಗೆ, ತೆರಿಗೆ, ನಲ್ಲಿ ಬಿಲ್‌ಗಳನ್ನು ಸರಿಯಾಗಿ ತುಂಬಿಸಿಕೊಳ್ಳುವಂತೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು. ತೆರಿಗೆ ವಸೂಲಾತಿಗಾಗಿ ಜಾಗೃತಿ ಮೂಡಿಸಿ, ಪ್ರಮುಖ ಭಾಗಗಳಲ್ಲಿ ಸ್ಟಾಲ್‌ಗಳನ್ನು ನಿರ್ಮಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ಇ-ಆಸ್ತಿ ಆನ್‌ಲೈನ್ ಉತಾರ ತಿದ್ದುಪಡಿಗಾಗಿ ಮನವಿ ಮಾಡಿಕೊಂಡಾಗ ಸಿಬ್ಬಂದಿ ಧನಗರ ಉತ್ತರಿಸಿ, ನೂರು ಅರ್ಜಿಗೆ ಮೂರು ತಿದ್ದುಪಡಿ ಮಾತ್ರ ಆಗುತ್ತೆ ಅಂದದ್ದಕ್ಕೆ, ಎಸಿ ಪ್ರಶ್ನಿಸುತ್ತಾ, ಹಾಗ್ಯಾಕೆ? ಎಲ್ಲವೂ ತಿದ್ದುಪಡಿ ಆಗಬೇಕಲ್ಲವೆ, ಇದಕ್ಕೆ ಸಂಬಂಧಿಸಿದಂತೆ ಪತ್ರ ಕಳಿಸಿ ಎಂದು ಸೂಚಿಸಿದರು. ವಾರ್ಡ್ ನಂ.15ರಲ್ಲಿ ಗಟಾರ್ ಸಮಸ್ಯೆಗೆ ಮುಕ್ತಿಕೊಡಿ ಎಂದು ಸಾರ್ವಜನಿಕರೊಬ್ಬರು ತಮ್ಮ ಅಳಲು ತೊಡಿಕೊಂಡರು.
ಮುಖ್ಯಾಧಿಕಾರಿ ಎಫ್.ಬಿ.ಗಿಡ್ಡಿ, ಮ್ಯಾನೇಜರ್ ಮಲ್ಲಿಕಾರ್ಜುನ ಬಿರಾದಾರಪಾಟೀಲ, ಕಿರಿಯ ಇಂಜನೀಯರ್ ಸೇರಿ ಸಿಬ್ಬಂದಿ ಇದ್ದರು.