ಜಮಖಂಡಿ ರಹಿಮತ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿನ ಮಕ್ಕಳಿಗೆ ಮಕ್ಕಳಿಗೆ ಗುರುತಿನ ಚೀಟಿಗಳು, ಮಕ್ನಾಗಳು ಮತ್ತು ಎಲ್‌ಕೆಜಿ-ಯುಕೆಜಿ ಮಕ್ಕಳಿಗೆ ಟಿ-ಶರ್ಟ್ ಹಾಗೂ ಪ್ಯಾಂಟ್‌ಗಳನ್ನು ಉಚಿತವಾಗಿ ವಿತರಿಸಿಲಾಯಿತು. ನಗರಸಭೆ ಮಾಜಿ ಸದಸ್ಯ ರಿಯಾಜ ತೇಲಸಂಗ, ಮುಖ್ಯಶಿಕ್ಷಕ ಸಲಿಂ ನದಾಫ್, ಸಿಆರ್‌ಪಿಗಳಾದ ಎಸ್.ಆರ್. ಇನಾಮದಾರ, ಎಂ.ಎ. ಪೆಂಡಾರಿ ಇತರರಿದ್ದರು. 
ಬಾಗಲಕೋಟೆ

ಶೈಕ್ಷಣಿಕ ಪ್ರಗತಿಗೆ ಸರ್ಕಾರ ಹೆಚ್ಚಿನ ಒತ್ತು

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ನಗರಸಭೆ ಮಾಜಿ ಸದಸ್ಯ ರಿಯಾಜ ತೇಲಸಂಗ ಹೇಳಿಕೆ
  • ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ
ಜಮಖಂಡಿ: ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರವು ವಿಶೇಷ ಕಾಳಜಿ ವಹಿಸುತ್ತಿದೆ. ಪಾಲಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಗರಸಭೆ ಮಾಜಿ ಸದಸ್ಯ ರಿಯಾಜ ತೇಲಸಂಗ ತಿಳಿಸಿದರು.ʼ
ಪಟ್ಟಣದ ರಹಿಮತ ನಗರದಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೂತನ ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಪದಾಽಕಾರಿಗಳ ಸನ್ಮಾನ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯಶಿಕ್ಷಕ ಸಲೀಂ ನದಾಫ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ, ಸರ್ಕಾರಿ ಸೌಲಭ್ಯಗಳ ಲಾಭ ಪಡೆದು ಅವರನ್ನು ಉನ್ನತ ವಿದ್ಯಾವಂತರನ್ನಾಗಿ ರೂಪಿಸಬೇಕು ಎಂದರು.
ಸಿಆರ್‌ಪಿ ಎಸ್.ಆರ್. ಇನಾಮದಾರ, ಸಾವಳಗಿ ಸಿಆರ್‌ಪಿ ಎಂ.ಎ. ಪೆಂಡಾರಿ, ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಮುಖ್ಯಶಿಕ್ಷಕರ ಕಾರ್ಯವೈಖರಿ ಶ್ಲಾಘಿಸಿದರು.
ಎಸ್‌ಡಿಎಂಸಿ ನೂತನ ಅಧ್ಯಕ್ಷ ಪಾಷ ಭಾಗವಾನ ಹಾಗೂ ಇತರ ಪದಾಽಕಾರಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಸಲೀಂ ನದಾಫ್ ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆ ಮಕ್ಕಳಿಗೆ ಗುರುತಿನ ಚೀಟಿಗಳು, ಮಕ್ನಾಗಳು ಮತ್ತು ಎಲ್‌ಕೆಜಿ-ಯುಕೆಜಿ ಮಕ್ಕಳಿಗೆ ಟಿ-ಶರ್ಟ್ ಹಾಗೂ ಪ್ಯಾಂಟ್‌ಗಳನ್ನು ಉಚಿತವಾಗಿ ವಿತರಿಸಿದರು. ಶಿಕ್ಷಕರ ಈ ಜನಪರ ಕಾಳಜಿ ಕಾಲೋನಿ ನಿವಾಸಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಶಿಕ್ಷಕ ಎಸ್.ಎಸ್. ಜಾಧವ ನಿರೂಪಿಸಿದರು, ಶಿಕ್ಷಕಿ ಮೂಬಶ್ರೀನ ಅವಟಿ ವಂದಿಸಿದರು.