ಬಾಗಲಕೋಟೆ ಬಿವಿವಿ ಸಂಘದ ಇನ್‌ಸ್ಟಿಟ್ಯೂಟ್ ಆ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ಲೇಸ್‌ಮೆಂಟ್‌ನಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಸಮೂಹ ಚಿತ್ರ. ಚಿತ್ರದಲ್ಲಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಗುರುಬಸವ ಸುಳಿಭಾವಿ, ಡಾ. ಮೀನಾ ಚಂದಾವರಕರ್ ಇತರರಿದ್ದರು.
- ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸನ್ ವರದರಾಜನ್ ಸಲಹೆ
- ಬಿಮ್ಸ್ ಪ್ಲೇಸ್‌ಮೆಂಟ್ ಸಂಭ್ರಮ
- ಪ್ಲೇಸ್ಮೆಂಟ್ ಸಕ್ಸಸ್ ಒಂದು ಸಾರ್ಥಕ ಕಾರ್ಯಕ್ರಮವಾಗಿದೆ
ಬಾಗಲಕೋಟೆ: ಔದ್ಯೋಗಿಕ ಕ್ಷೇತ್ರದಲ್ಲಿ ಸಂಶೋಧನಾತ್ಮಕ ತಂತ್ರಜ್ಞಾನ ಕೌಶಲದ ಜತೆಗೆ ಉತ್ತಮ ವ್ಯಕ್ತಿತ್ವ ಬೆಳಸಿಕೊಳ್ಳಬೇಕು ಎಂದು ಡೇಟಾಲಾಜಿಕ್ಸ್ ಇಂಡಿಯಾದ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸನ್ ವರದರಾಜನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಬಿವಿವಿ ಸಂಘದ ಇನ್‌ಸ್ಟಿಟ್ಯೂಟ್ ಆ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ಮಹಾವಿದ್ಯಾಲಯದ ಸಭಾ ಭವನದಲ್ಲಿ ಭಾನುವಾರ ಎಂಬಿಎ ವಿದ್ಯಾರ್ಥಿಗಳ ‘ಪ್ಲೇಸ್‌ಮೆಂಟ್ ಸಕ್ಸಸ್‌ಮೀಟ್-2025’ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವಿತರಿಸಿ ಮಾತನಾಡಿದರು.
ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಲೆಕ್ಕವಿಲ್ಲದಷ್ಟು ಸಂಶೋಧನೆ ಮಾಡಬಹುದಾದ ಅನೇಕ ವಿಷಯಗಳಿವೆ. ಅವುಗಳಲ್ಲಿ ಸಂಸ್ಥೆಗಳ ನಡವಳಿಕೆ, ನೌಕರರ ಧಾರಣ, ಭಾವನಾತ್ಮಕ ಬುದ್ಧಿವಂತಿಕೆ, ಕಾರ್ಯಪಡೆ ವೈವಿಧ್ಯತೆ, ಉದ್ಯೋಗಿ ಕಾರ್ಯಕ್ಷಮತೆ, ಗ್ರಾಹಕ ನಡವಳಿಕೆ, ಉದ್ಯೋಗಿ ಸಂಬಂಧ ಸೇರಿ ಭಾವನಾತ್ಮಕ ಬುದ್ಧಿವಂತಿಕೆಯ ಕುರಿತು ಸಂಶೋಧನೆ ಅಗತ್ಯವಿದೆ. ಇವೆಲ್ಲವೂ ಸಂದರ್ಶನದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂದರು.
ಆರ್‌ಡಿಎ್ ಮತ್ತು ಬಿಇಸಿ - ಎಸ್‌ಟಿಇಪಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಬಿ.ಎಸ್. ಅಂಗಡಿ ಹಾಗೂ ರೆಂಟೋಕಿಲ್‌ನ ಸೀನಿಯರ್ ಎಕ್ಸಿಕ್ಯೂಟಿವ್ ಅಕ್ಷಯ ಭಟ್ ಮಾತನಾಡಿ, ಪ್ಲೇಸ್ಮೆಂಟ್ ಸಕ್ಸಸ್ ಒಂದು ಸಾರ್ಥಕ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರ ಹಾಗೂ ಪಾಲಕರ ಕನಸಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಜೊತೆಗೆ ಉದ್ಯೋಗ ಒದಗಿಸುತ್ತಿರುವ ಮಹಾವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಎಸ್‌ಎನ್ ಮೆಡಿಕಲ್ ಕಾಲೇಜ್ ಹಾಗೂ ಎಚ್‌ಎಸ್‌ಕೆ ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಉಪ ಪ್ರಾಂಶುಪಾಲ ಡಾ. ಸಿ.ಎಸ್. ಹಿರೇಮಠ ಮಾತನಾಡಿ, ರಾಷ್ಟ್ರಾಭ್ಯುದಯಕ್ಕಾಗಿ ಹಗಲಿರುಳು ಜ್ಞಾನಧಾರೆಯ ಅರಿವು ವಿದ್ಯಾರ್ಥಿಗಳಿಂದಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪ್ರಕಾಶ ವಡವಡಗಿ, ಬಾಗಲಕೋಟೆಯ ಪ್ರತಿಭೆಗಳು ಜಾಗತಿಕ ಕಂಪನಿಗಳ ಗಮನ ಸೆಳೆದಿರುವುದು ಸಂಸ್ಥೆಯ ಶಿಕ್ಷಣ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದರು.
ಕಾರ್ಪೋರೇಟ್ ವಲಯದ ಪ್ರಮುಖ ಉದಯ ವರ್ಮಾ ಕೆ., ಕ್ಯಾಡ್‌ಮ್ಯಾಕ್ಸ್ ಸಲ್ಯುಷನ್ಸ್ ನ ಅಧಿಕಾರಿ ಪ್ರಜ್ವಲ್ ಚಟ್ಪಲ್ಲಿ, ಎನ್.ಜೆ. ಇಂಡಿಯಾ ಇನ್ವೆಸ್ಟ್ ಪ್ರೈ. ಲಿ. ನ ಅಧಿಕಾರಿ ಪ್ರದೀಪ್ ಎ.ಎಂ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಪ್ರಸಕ್ತ ಸಾಲಿನ ಪ್ಲೇಸ್‌ಮೆಂಟ್‌ನಲ್ಲಿ ವಿವಿಧ ಕಂಪನಿಗಳಿಗೆ ಉತ್ತಮ ಪ್ಯಾಕೇಜ್ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರ ವಿತರಿಸಲಾಯಿತು.