ಸೆ. ೧೮ ರಂದು ಬಾಗಲಕೋಟೆಯಲ್ಲಿ ನಡೆಯುವ ಗ್ಲೋಬ್ ಇನ್ ಗ್ಲೋಬ್ಯೂಲ್ ರಾಷ್ಟಿçÃಯ ಸಮ್ಮೇಳನದ ಪೋಸ್ಟರ್‌ಗಳನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಬಿಡುಗಡೆ ಮಾಡಿದರು. ಮಹಾಂತೇಶ ಶೆಟ್ಟರ, ಅಶೋಕ ಕರಡಿ, ಡಾ.ರವಿ ಕೋಟೆಣ್ಣವರ ಇತರರು ಇದ್ದರು.
ಬಾಗಲಕೋಟೆ: ಬಿವಿವಿ ಸಂಘದ ಬಿವಿವಿಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಶ್ರಯದಲ್ಲಿ `ಗ್ಲೋಬ್ ಇನ್ ಗ್ಲೋಬ್ಯೂಲ್ ೨.೦' ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವನ್ನು ಅಕ್ಟೋಬರ್ ೧೮ರಂದು ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಸಂಘದ ಮಿನಿ ಸಭಾ ಭವನದಲ್ಲಿ ಸಮ್ಮೇಳನದ ಅಽಕೃತ ಪೋಸ್ಟರ್‌ನ್ನು ಶನಿವಾರ ಬಿಡುಗಡೆ ಮಾಡಿದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಕಡಿಮೆ ಅವಽಯಲ್ಲಿ ಸಂಸ್ಥೆಯು ರಾಷ್ಟçಮಟ್ಟದಲ್ಲಿ ಗುರುತಿಸಿಕೊಂಡು, ಎರಡನೇ ಬಾರಿಗೆ ಇಂತಹ ಪ್ರತಿಷ್ಠಿತ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ಅರುಣ ಹೂಲಿ, ಭಾರತ ಸರ್ಕಾರದ ಆಯುಷ್ ಇಲಾಖೆ, ಕೇಂದ್ರೀಯ ಹೋಮಿಯೋಪಥಿ ಸಂಶೋಧನಾ ಮಂಡಳಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್ ಸಹಯೋಗದೊಂದಿಗೆ ಸಮ್ಮೇಳನ ನಡೆಯಲಿದೆ. ಮುಂಬೈನ ಅಂತಾರಾಷ್ಟ್ರೀಯ ಖ್ಯಾತಿಯ ಹೋಮಿಯೋಪಥಿ ಸಂಶೋಧಕ ಡಾ.ಶ್ರೀಪಾದ ಕೇಡಕರ್ ಮತ್ತು ಡಾ. ಮಯೂರೇಶ ಮಹಾಜನ ಅವರು ಸಂಕೀರ್ಣ ಮತ್ತು ಜೀವನಶೈಲಿ ಸಂಬAಽತ ಆರೋಗ್ಯ ಸಮಸ್ಯೆಗಳಿಗೆ ಹೋಮಿಯೋಪಥಿ ಪರಿಹಾರ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಸುಮಾರು ೧,೦೦೦ಕ್ಕೂ ಹೆಚ್ಚು ವೈದ್ಯರು, ಸಂಶೋಧಕರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಸAಘದ ಸದಸ್ಯರಾದ ಅಶೋಕ ಕರಡಿ, ಮಹಾಂತೇಶ ಶಟ್ಟರ ಹಾಗೂ ಗುರುನಿಂಗಪ್ಪ ಅಂಟೀನ, ಪ್ರಾಧ್ಯಾಪಕ ಡಾ. ರವಿ ಕೋಟೆಣ್ಣವರ, ಡಾ.ಪ್ರದೀಪ ಕೆ., ಡಾ. ತೃಪ್ತಿ ಶಿಂದೆ ಇತರರು ಇದ್ದರು.