ರಬಕವಿಯ ಶ್ರೀದಾನಮ್ಮ ದೇವಿ ದೇವಸ್ಥಾನದಲ್ಲಿ ಲಿಂ.ಶ್ರೀ.ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ 39ನೇ ಅನ್ನದಾಸೋಹಕ್ಕೆ ಗಣ್ಯರು ಚಾಲನೆ ನೀಡಿದರು. ಡಾ. ಶ್ರೀಕಾಂತ ಕೆಂಧೂಳಿ, ಸುಭಾಷ ಉಮದಿ, ರಾಜು ಉಮದಿ, ರವೀಂದ್ರ ಹೇರಲಗಿ ಇದ್ದರು.
- ಜಾನಪದ ಗಾಯಕ ಶ್ರೀಕಾಂತ ಕೆಂಧೂಳಿ ಹೇಳಿಕೆ
- ಬಸವಣ್ಣನವರ ಕಾಯಕ, ದಾಸೋಹ ಮತ್ತು ಅನುಭಾವ ತತ್ವಗಳು ಮಾನವ ಜೀವನಕ್ಕೆ ಮಾರ್ಗದರ್ಶಕವಾಗಿವೆ
- ಅನ್ನದಾಸೋಹ ಸೇವೆ
ರಬಕವಿ/ಬನಹಟ್ಟಿ: ಬಸವಣ್ಣನವರ ಕಾಯಕ, ದಾಸೋಹ ಮತ್ತು ಅನುಭಾವ ತತ್ವಗಳು ಮಾನವ ಜೀವನಕ್ಕೆ ಮಾರ್ಗದರ್ಶಕವಾಗಿವೆ ಎಂದು ಜಾನಪದ ಗಾಯಕ ಶ್ರೀಕಾಂತ ಕೆಂಧೂಳಿ ಹೇಳಿದರು.
ರಬಕವಿಯ ಶ್ರೀದಾನಮ್ಮ ದೇವಿ ದೇವಸ್ಥಾನದಲ್ಲಿ ಲಿಂ. ಡಿ.ಕೆ. ಕೊಟ್ರಶೆಟ್ಟಿ ಫೌಂಡೇಶನ್ ವತಿಯಿಂದ ಅಮವಾಸ್ಯೆ ನಿಮಿತ್ತ ಶನಿವಾರ ಆಯೋಜಿಸಿದ್ದ 39ನೇ ಅನ್ನದಾಸೋಹ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ದುಡಿದು ಸಂಪಾದಿಸಿದ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಬಳಸುವುದು ದಾಸೋಹದ ಮೂಲ ಆಶಯವಾಗಿದ್ದು, ಹಸಿದವರಿಗೆ ಅನ್ನ ನೀಡುವುದು ಅತ್ಯುತ್ತಮ ದಾನವೆಂದು ತಿಳಿಸಿದ ಅವರು, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸೋಮಶೇಖರ ಕೊಟ್ರಶೆಟ್ಟಿಯವರ ಕಾರ್ಯ ನಿಜಕ್ಕೂ ಅಭಿನಂದನಾರ್ಹ ಎಂದರು.
ನಿವತ್ತ ಉಪನ್ಯಾಸಕ ಸುಭಾಷ್ ಉಮದಿ ಮಾತನಾಡಿ, ಅನ್ನದಾಸೋಹದಿಂದ ಬಡವರು, ಅನಾಥರು ಹಾಗೂ ಯಾತ್ರಿಕರಿಗೆ ನೆರವಾಗುತ್ತದೆ. ದಾಸೋಹದ ಮೂಲಕ ಸಮಾಜದಲ್ಲಿ ದಯೆ, ಕರುಣೆ ಮತ್ತು ಸಹಾನುಭೂತಿ ಮೌಲ್ಯಗಳು ವದ್ಧಿಯಾಗುತ್ತವೆ ಎಂದರು.
ಪಿಯುಸಿಯಲ್ಲಿ ಶೇ.96.17 ಅಂಕ ಗಳಿಸಿದ ವಿದ್ಯಾರ್ಥಿ ಗುರುರಾಜ ಸತೀಶ ಗದಗ ಅವರನ್ನು ಸನ್ಮಾನಿಸಲಾಯಿತು.
ರವೀಂದ್ರ ಹೇರಲಗಿ, ರಾಜು ಉಮದಿ, ವಿಶ್ವನಾಥ ಮಿರ್ಜಿ, ಮಹಾದೇವಯ್ಯ ನಂದಯಗೋಳ, ವಿಜಯಕುಮಾರ ಹಲಕುರ್ಕಿ, ಸತೀಶ ಗದಗ, ಸಂಗಮೆಶ ಗುಣಕಿ ಸೇರಿದಂತೆ ಭಾರತ ಗ್ಯಾಸ್ ಸಿಬ್ಬಂದಿ, ಶ್ರೀದೇವಿಯ ಸದ್ಭಕ್ತರು ಇದ್ದರು.