ಮುಧೋಳದಲ್ಲಿ ನಡೆದ ಕಾರ್ಮಿಕರ ಸುರಕ್ಷತಾ ವಿಚಾರ ಸಂಕಿರಣವನ್ನು ನಿರಾಣಿ ಶುಗರ್ಸ್ ಲಿಮಿಟೆಡ್‌ನ ಎಂಡಿ ವಿಶಾಲ್. ನಿರಾಣಿ ಹಾಗೂ ಗಣ್ಯರು ಉದ್ಘಾಟಿಸಿದರು. ಸುಖದೇವ್ ಬನಸೋಡೆ, ಸ್ಮಿಯೋರ್ ಸಂಸ್ಥೆಯ ಆರೋಗ್ಯ ವಿಭಾಗದ ಎಜಿಎಂ ಡಾ. ಶಾಫಿ ಸಾಹೇಬ್ ಬನಾದ, ಮುರುಗೇಶ್ ಹತ್ತಿಕಾಳ್ ಇತರರಿದ್ದರು. 
ಬಾಗಲಕೋಟೆ

ಕಾರ್ಮಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ವಿಶಾಲ್ ಎಂ. ನಿರಾಣಿ ಹೇಳಿಕೆ
  • ವಿಶೇಷ ವಿಚಾರ ಸಂಕಿರಣಕ್ಕೆ ಚಾಲನೆ
  • ಕೈಗಾರಿಕಾ ಸುರಕ್ಷತೆ ಹಾಗೂ ಕಾರ್ಮಿಕರ ಆರೋಗ್ಯವನ್ನು ಅತ್ಯುನ್ನತ ಆದ್ಯತೆ
ಮುಧೋಳ: ಕೈಗಾರಿಕಾ ಸುರಕ್ಷತೆ ಹಾಗೂ ಕಾರ್ಮಿಕರ ಆರೋಗ್ಯವನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಿ ಅಪಘಾತರಹಿತ ಕೆಲಸದ ವಾತಾವರಣ ನಿರ್ಮಿಸಲು ಉದ್ಯಮಗಳು ಬದ್ಧವಾಗಿರಬೇಕು ಎಂದು ನಿರಾಣಿ ಶುಗರ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಶಾಲ್ ಎಂ. ನಿರಾಣಿ ಹೇಳಿದರು.
ನಗರದ ಲೋಕಾಪುರ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ ಮತ್ತು ಎಂ.ಆರ್.ಎನ್ ಉದ್ಯಮ ಸಮೂಹಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸಕ್ಕರೆ ಉದ್ಯಮದ ಕಾರ್ಮಿಕರ ಹಿತದಷ್ಟಿಯ ವಿಶೇಷ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸುರಕ್ಷತೆಯತ್ತ ಮುನ್ನಡೆಯೋಣ ಎಂಬ ಧ್ಯೇಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಸುರಕ್ಷತೆ ಕಬ್ಬಿನಿಂದ ಸಕ್ಕರೆಯವರೆಗೆ ಷಯದ ಕುರಿತು ಅವರು ಸಮಗ್ರ ಒಳನೋಟ ನೀಡಿದರು.
ಕಾರ್ಖಾನೆಗಳು ಮತ್ತು ಬಾಯ್ಲರುಗಳ ಇಲಾಖೆಯ ನಿರ್ದೇಶಕ ನಂಜಪ್ಪ ಕೆ.ಜಿ. ಮಾತನಾಡಿ, ಓಎಸ್‌ಎಚ್‌ಡಬ್ಲ್ಯೂಸಿ ಕೋಡ್ 2020ರ ಕಾನೂನು ಚೌಕಟ್ಟಿನ ಕುರಿತು ವಿವರಿಸಿದರು. ಅಪರ ನಿರ್ದೇಶಕ ರವೀಂದ್ರನಾಥ್ ಎನ್. ರಾಥೋಡ್ ಆನ್-ಸೈಟ್ ತುರ್ತು ನಿರ್ವಹಣಾ ಯೋಜನೆಗಳ ಬಗ್ಗೆ ಜಾಗತಿ ಮೂಡಿಸಿದರು.
ಹುಬ್ಬಳ್ಳಿ ವಲಯದ ಜಂಟಿ ನಿರ್ದೇಶಕ ವೆಂಕಟೇಶ್ ರಾಠೋಡ್ ಸಕ್ಕರೆ ಉದ್ಯಮದ ವಿವಿಧ ಪ್ರಕರಣಗಳ ಮೂಲಕ ಸುರಕ್ಷತಾ ಕ್ರಮಗಳ ಮಹತ್ವವನ್ನು ವಿವರಿಸಿದರು.
ಬೆಳಗಾವಿ ವಿಭಾಗದ ಸಹಾಯಕ ನಿರ್ದೇಶಕ ಸುಖದೇವ್ ಬನಸೋಡೆ, ಸ್ಮಿಯೋರ್ ಸಂಸ್ಥೆಯ ಆರೋಗ್ಯ ವಿಭಾಗದ ಎಜಿಎಂ ಡಾ. ಶಾಫಿ ಸಾಹೇಬ್ ಬನಾದ, ಎಂ.ಆರ್.ಎನ್ ಸಮೂಹದ ತಾಂತ್ರಿಕ ನಿರ್ದೇಶಕ ಮುರುಗೇಶ್ ಹತ್ತಿಕಾಳ್ ಸೇರಿ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಸಕ್ಕರೆ ಕಾರ್ಖಾನೆಗಳ ಸಿಬ್ಬಂದಿ ಉಪಸ್ಥಿತರಿದ್ದರು.