ರಬಕವಿ ಕುಡಚಿ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ರಾಶಿ ಗಟ್ಟಲೇ ತ್ಯಾಜ್ಯ ಬಿದ್ದಿರುವುದು. 
ಬಾಗಲಕೋಟೆ

ರಸ್ತೆ ಬದಿಯಲ್ಲಿಯೇ ಕಸ ವಿಲೇವಾರಿ..!

ಪ್ರಮುಖ ಮುಖ್ಯಾಂಶಗಳು

  • ವಾಯು ವಿಹಾರಿಗಳು ಜನತೆಗೆ ಸಂಚರಿಸಲು ಸಂಕಟ
  • ದುರ್ವಾಸನೆ ಕಿರಿಕಿರಿ
  • ಅನಾರೋಗ್ಯ ಭೀತಿ ಮನೆ ಮಾಡಿದೆ. ರಸ್ತೆ ಬದಿಯಲ್ಲಿ ಕಸದ ರಾಶಿ ಹೆಚ್ಚಾಗುತ್ತಿರುವುದರಿಂದ ಪರಿಸರ ಮಾಲಿನ್ಯವೂ ಉಂಟಾಗುತ್ತಿದೆ.
ರಬಕವಿ-ಬನಹಟ್ಟಿ: ನಗರದ ಪ್ರಮುಖ ರಸ್ತೆಯಾದ ರಬಕವಿ -ಕುಡಚಿ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಸಾರ್ವಜನಿಕರು ಬಳಸಿದ ಗೃಹ ತ್ಯಾಜ್ಯ ಹಾಗೂ ಹಾನಿಕಾರಕ ಪ್ಲಾಸ್ಟಿಕ್, ಬಣ್ಣದ ಚೀಲಗಳನ್ನು ಬೇಕಾಬಿಟ್ಟಿಯಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ವಾತಾವರಣ ಹದಗೆಡುತ್ತಿದ್ದು, ವಾಯುವಿಹಾರಿಗಳು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಈ ಮಾರ್ಗದಲ್ಲಿ ವಾಯುವಿಹಾರಕ್ಕೆ ಆಗಮಿಸುವ ಸಾರ್ವಜನಿಕರಿಗೆ ದುರ್ವಾಸನೆ ಕಿರಿಕಿರಿ ಉಂಟು ಮಾಡುತ್ತಿದೆ. ಅನಾರೋಗ್ಯ ಭೀತಿ ಮನೆ ಮಾಡಿದೆ. ರಸ್ತೆ ಬದಿಯಲ್ಲಿ ಕಸದ ರಾಶಿ ಹೆಚ್ಚಾಗುತ್ತಿರುವುದರಿಂದ ಪರಿಸರ ಮಾಲಿನ್ಯವೂ ಉಂಟಾಗುತ್ತಿದೆ.
ಸಂಬಂಧಪಟ್ಟ ನಗರಸಭೆ ಪರಿಸರ ಅಧಿಕಾರಿಗಳು, ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ನಿಯಮ ಉಲ್ಲಂಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕುರಿತು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸದಿದ್ದರೆ ಸಾರ್ವಜನಿಕರು ನಗರಸಭೆ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ಮಹಾದೇವ ಕೋಟ್ಯಾಳ ಎಚ್ಚರಿಕೆ ನೀಡಿದ್ದಾರೆ.