ಹುನಗುಂದ ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದಲ್ಲಿ ಕಚೇರಿಯಲ್ಲಿ ಶುಕ್ರವಾರ ಡಾ. ಮಹಾಂತೇಶ ಕಡಪಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ನಿರ್ದೇಶಕರಾದ ರವಿ ಹುಚನೂರ, ಎಂ.ಎಸ್. ಮಠ, ಬಸವರಾಜ ಕೆಂದೂರ, ಡಾ. ಶಿವಶಂಕರ ಮುದಗಲ್ಲ ಇದ್ದರು. 
ಬಾಗಲಕೋಟೆ

28ರಂದು ಆರೋಗ್ಯ ಉಚಿತ ತಪಾಸಣೆ ಶಿಬಿರ

ಪ್ರಮುಖ ಮುಖ್ಯಾಂಶಗಳು

  • ಗೌರವ ಕಾರ್ಯದರ್ಶಿ ಮಹಾಂತೇಶ ಕಡಪಟ್ಟಿ ಹೇಳಿಕೆ
  • ಕಾಯಕ ಯೋಗಿ ಲಿಂ. ಗುರುಬಸವಾರ್ಯ ಮಠ ಗುರುಗಳ 47ನೇ ಪುಣ್ಯಸ್ಮರಣೆ
  • ಆರೋಗ್ಯ ಉಚಿತ ತಪಾಸಣೆ ಶಿಬಿರ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ
ಹುನಗುಂದ : ಕಾಯಕ ಯೋಗಿ ಲಿಂ. ಗುರುಬಸವಾರ್ಯ ಮಠ ಗುರುಗಳ 47ನೇ ಪುಣ್ಯಸ್ಮರಣೆ ನಿಮಿತ್ತ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಜ. 28ರಂದು 9.30 ಗಂಟೆಗೆ ಪಟ್ಟಣದ ವಿಜಯ ಮಹಾಂತೇಶ ಉಚಿತ ಪ್ರಸಾದ ನಿಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಮಹಾಂತೇಶ ಕಡಪಟ್ಟಿ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದಲ್ಲಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಿರೂರಿನ ಮಹಾಂತ ತೀರ್ಥದ ಡಾ. ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದಾರೆ. ವಿ.ಮ.ವಿ.ವ. ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ನಿವೃತ್ತ ವಾಣಿಜ್ಯ ತೆರಿಗೆ ನಿರೀಕ್ಷಕ ಲಿಂಗಪ್ಪ ತುರಕನೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗುರುಬಸವಾರ್ಯ ಮಠದ ಮೆಮೋರಿಯಲ್ ಟ್ರಸ್ಟ್‌ನ ಎಸ್.ಎಸ್. ಬೆಳ್ಳಿಹಾಳ ಉಪಸ್ಥಿತರಿರುವರು. ಹಿಂದುಳಿದ ಕಲ್ಯಾಣ ಜಿಲ್ಲಾ ಅಧಿಕಾರಿ ಪಂಕಜ ಜೋಶಿ, ಅಕ್ಷರ ದಾಸೋಹದ ಅಧಿಕಾರಿ ಡಿ.ಎಂ. ಯಾವಗಲ್ಲ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ಮಾಟೂರ ಅವರನ್ನು ಸತ್ಕರಿಸಲಾಗುತ್ತದೆ.
ಬಾಗಲಕೋಟೆಯ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆ ಸಂಶೋಧನೆ ಕೇಂದ್ರದಿಂದ ಸಕ್ಕರೆ ರೋಗ, ಥೈರಾಡ್ ಕಾಯಿಲೆ, ಹೃದಯ ರೋಗ, ಜನರಲ್ ಮೆಡಿಸಿನ್ಸ್, ಶಸ ಚಿಕಿತ್ಸೆ, ಚಿಕ್ಕಮಕ್ಕಳ, ಎಲುಬು-ಕೀಲುಗಳ, ಸೀರೋಗ ಮತ್ತು ಪ್ರಸೂತಿ, ಕಿವಿ-ಗಂಟಲು -ಮೂಗು, ನೇತ್ರ, ಚರ್ಮರೋಗ, ನರರೋಗ, ಚಿಕ್ಕಮಕ್ಕಳ ಶಸ ಚಿಕಿತ್ಸೆ, ಎಲ್ಲ ಕಾಯಿಲೆಗಳ ಸಂಬಂಧಿಸಿದ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಆರೋಗ್ಯ ತಪಾಸಣೆ ಮಾಡಿ ಔಷಧಿ ವಿತರಣೆ ಮಾಡಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘದ ನಿರ್ದೇಶಕರಾದ ರವಿ ಹುಚನೂರ, ಎಂ.ಎಸ್. ಮಠ, ಬಸವರಾಜ ಕೆಂದೂರ, ಡಾ. ಶಿವಶಂಕರ ಮುದಗಲ್ಲ, ವೀರಣ್ಣ ಬಳೂಟಗಿ, ರಾಚಪ್ಪ ರಾಜಮನಿ, ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಸಂಗಣ್ಣ ಚಿನಿವಾಲ, ರಾಮನಗೌಡ ಬೆಳ್ಳಿಹಾಳ ಇದ್ದರು.