ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದ ಸಂಗೀತ ಉತ್ಸವ ಕಾರ್ಯಕ್ರಮ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಯಲ್ಲವ್ವ ರೊಡ್ಡಪ್ಪನವರ ಉದ್ಘಾಟಿಸಿದರು. ಗೋವಿಂದ ಗಸ್ತಿ, ಈರಯ್ಯ ಸ್ವಾಮಿಗಳು ಹಿರೇಮಠ, ಶಿವಪ್ಪ ಶಿಕರೆಪ್ಪಗೋಳ, ಬಸಪ್ಪ ಜಕನೂರ, ಗುರುಪಾದ ಮ್ಯಾಗಿನಮನಿ ಇತರರಿದ್ದರು. 
ಬಾಗಲಕೋಟೆ

ಜಾನಪದ ನಮ್ಮ ನೆಲದ ಸಂಸ್ಕೃತಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಯಲ್ಲವ್ವ ರೊಡ್ಡಪ್ಪನವರ ಹೇಳಿದರು
  • ಸಂಗೀತ ಉತ್ಸವ ಕಾರ್ಯಕ್ರಮ
  • ಜಾನಪದವು ನಮ್ಮ ನೆಲದ ಸಂಸ್ಕೃತಿ, ಸಂಪ್ರದಾಯ ಮತ್ತು ಬದುಕಿನ ಕನ್ನಡಿಯಾಗಿದೆ
ಜಮಖಂಡಿ: ಜಾನಪದವು ನಮ್ಮ ನೆಲದ ಸಂಸ್ಕೃತಿ, ಸಂಪ್ರದಾಯ ಮತ್ತು ಬದುಕಿನ ಕನ್ನಡಿಯಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಯಲ್ಲವ್ವ ರೊಡ್ಡಪ್ಪನವರ ಹೇಳಿದರು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಿದ್ಧಸಿರಿ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘದ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಂಗೀತ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಹಿರಿಯರು ಹಾಗೂ ಸಂಗೀತ ಕಲಾವಿದರು ಉಳಿಸಿ ಬೆಳೆಸಿಕೊಂಡು ಬಂದಿರುವ ಈ ಕಲಾ ಸಂಪತ್ತು, ಮುಂದಿನ ಪೀಳಿಗೆಗೆ ನೀಡಬಹುದಾದ ಅಮೂಲ್ಯ ಕೊಡುಗೆಯಾಗಿದೆ ಎಂದರು.
ಈರಯ್ಯ ಸ್ವಾಮಿಗಳು ಹಿರೇಮಠ ಮಾತನಾಡಿ, ಸಂಗೀತ ಉತ್ಸವಗಳು ಗ್ರಾಮೀಣ ಭಾಗದ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಗೋವಿಂದ ಗಸ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಗ್ರಾಮದ ಯೋಧರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಮುಖಂಡರಾದ ಶಿವಪ್ಪ ಶಿಕರೆಪ್ಪಗೋಳ, ಬಸಪ್ಪ ಜಕನೂರ, ಗುರುಪಾದ ಮ್ಯಾಗಿನಮನಿ, ಮರೆಪ್ಪ ಚಿದಾನಂದ ನಗರ, ರಾಮಪ್ಪ ಪೂಜೇರಿ ಇದ್ದರು. ದೂರದರ್ಶನ ಹಾಗೂ ಆಕಾಶವಾಣಿಯ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು. ಕಲಾ ಸಂಘದ ಅಧ್ಯಕ್ಷ ಸತ್ಯಪ್ಪಾ ಮ್ಯಾಗಿನಮನಿ, ಸದಸ್ಯ ಪುಂಡಲೀಕ ಮ್ಯಾಗಿನಮನಿ ನಿರೂಪಿಸಿ, ವಂದಿಸಿದರು.