ಗುಳೇದಗುಡ್ಡದಲ್ಲಿ ಗಜಾನನ ಸಾಂಸ್ಕೃತಿಕ ಹಾಗೂ ಕ್ರೀಡಾ ಯುವಕ ಮಂಡಳಿವತಿಯಿAದ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಜ್ಞಾನೇಶ್ವರ ಬೊಂಬಲೇಕರ, ಷಣ್ಮುಖಪ್ಪ ತಟ್ಟಿ, ಮಲ್ಲಿಕಾರ್ಜುನ ಕಲಕೇರಿ, ಶೇಖರಪ್ಪ ಗೌಡ್ರ ಕಲಾವಿದರನ್ನು ಸನ್ಮಾನಿಸಲಾಯಿತು. ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ, ಸಂಗಯ್ಯನವರು ಶಿವಪ್ಪಯನಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸಾಲೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕಾಂತ ಶೇಖಾ ಇದ್ದರು. 
ಬಾಗಲಕೋಟೆ

ಜಾನಪದ ನಮ್ಮ ಸಂಸ್ಕೃತಿಯ ಪ್ರತಿಬಿಂಬ

ಪ್ರಮುಖ ಮುಖ್ಯಾಂಶಗಳು

  • ಗುರುಸಿದ್ಧ ಸ್ವಾಮೀಜಿ ಅಭಿಮತ
  • ಜಾನಪದ ಸಂಭ್ರಮ ಕಾರ್ಯಕ್ರಮ
ಗುಳೇದಗುಡ್ಡ: ಬದುಕಿನ ಪ್ರತಿಬಿಂಬವಾದ ಜಾನಪದ ಸಾಹಿತ್ಯವು ಮೌಲ್ಯಗಳ ಅಕ್ಷಯ ನಿಧಿಯಾಗಿದೆ. ಜಾನಪದ ಹಾಡುಗಳು, ಆಚರಣೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ ಎಂದು ಗುರುಸಿದ್ಧೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವಪ್ಪಯ್ಯಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಜಾನನ ಸಾಂಸ್ಕೃತಿಕ ಹಾಗೂ ಕ್ರೀಡಾ ಯುವಕ ಮಂಡಳಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರಮಸಂಸ್ಕೃತಿಗೆ ಪೂರಕವಾದ ಜಾನಪದ ಗೀತೆಗಳು ಜನರ ನೋವು-ನಲಿವುಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತವೆ. ಆಧುನಿಕ ಜೀವನ ಶೈಲಿ ಹಾಗೂ ಸೌಲಭ್ಯಗಳಿಂದಾಗಿ ಜಾನಪದ ಸಾಹಿತ್ಯ ಮೌಲ್ಯ ಕಡೆಗಣೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಕಲಾವಿದರಾದ ಜ್ಞಾನೇಶ್ವರ ಬೊಂಬಲೇಕರ, ಷಣ್ಮುಖಪ್ಪ ತಟ್ಟಿ, ಮಲ್ಲಿಕಾರ್ಜುನ ಕಲಕೇರಿ, ಶೇಖರಪ್ಪ ಗೌಡ್ರ ಅವರನ್ನು ಸನ್ಮಾನಿಸಲಾಯಿತು. ವೇ.ಮೂ. ಸಂಗಯ್ಯನವರು ಶಿವಪ್ಪಯನಮಠ ಸಾನ್ನಿಧ್ಯ ವಹಿಸಿದ್ದರು. ಮಂಡಳಿಯ ಅಧ್ಯಕ್ಷ ಕೂಡ್ಲೆಪ್ಪ ಕಲ್ಯಾಣಿ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸಾಲೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕಾಂತ ಶೇಖಾ, ಶಿವಾನಂದ ಎಣ್ಣಿ, ಸಿದ್ದಪ್ಪ ಸಾರಂಗಿ, ಮುತ್ತಣ್ಣ ತಾಂಡೂರ, ಸಿದಬಸಪ್ಪ ಕೆಲೂಡಿ, ಸುರೇಶ ಸಾರಂಗಿ, ಸಿದ್ದಾರೂಡ ಪರಗಿ, ರಾಚಪ್ಪ ಸಾರಂಗಿ, ಮಲ್ಲಿಕಾರ್ಜುನ ಹಳ್ಳೂರ, ವಿಜಯಕುಮಾರ ಬೆಟಗೇರಿ ಉಪಸ್ಥಿತರಿದ್ದರು.