ಬಾಗಲಕೋಟೆ ರಸ್ತೆ ಸಾರಿಗೆ ಬಸ್ ಸಂಚಾರ ವ್ಯವಸ್ಥೆಯನ್ನು ಸರಿಪಡಿಸುವಂತೆ ಬುಮಾ ಸದಸ್ಯರು ಗುರುವಾರ ಸಾರಿಗೆ ವಿಭಾಗೀಯ ನಿಯಂತ್ರಕರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ರವಿ ಕುಮಟಗಿ, ಉಪಾಧ್ಯಕ್ಷ ರಾಮ ಮುಂದಡಾ, ಶ್ರೀನಿವಾಸ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ಅಮೃತಕರ, ಸಿದ್ದು ಪಟ್ಟಣಶೆಟ್ಟಿ ಇತರರಿದ್ದರು.
- ಬುಮಾ ಸದಸ್ಯರ ಮನವಿ
- ಟ್ರಾಫಿಕ್ ಸಮಸ್ಯೆ
ಬಾಗಲಕೋಟೆ: ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹಾಗೂ ರಸ್ತೆ ಸಾರಿಗೆ ಕುರಿತು ಹಲವು ಬೇಡಿಕೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಬಾಗಲಕೋಟೆ ವ್ಯಾಪಾರ ಮತ್ತು ಉದ್ಯಮಿಗಳ ಸಂಘದ (ಬುಮಾ) ಸದಸ್ಯರು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕರನ್ನು ಭೇಟಿ ಮಾಡಿ, ಬಾಗಲಕೋಟೆ ನಗರದ ಸಂಬಂಧ ಕೆಲ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದರು.
ನಗರಕ್ಕೆ ಆಗಮಿಸುವ ಇಳಕಲ್ಲ, ರಾಯಚೂರ, ಮುದ್ದೇಬಿಹಾಳ, ಕುಷ್ಟಗಿ ಮಾರ್ಗದಿಂದ ಬರುವ ಬಸ್‌ಗಳು ಸಂಗಮ ಕ್ರಾಸ್‌ನಿಂದ ಬೇವಿನಮಟ್ಟಿ ಗ್ರಾಮದ ಮುಖಾಂತರ ನವನಗರ ಬಸ ನಿಲ್ದಾಣಕ್ಕೆ ತೆರಳಿ ಹಳೇ ನಗರಕ್ಕೆ ಬರುತ್ತವೆ. ಮತ್ತೆ ಪುನಃ ನವನಗರ ಬಸ್ ನಿಲ್ದಾಣಕ್ಕೆ ಬಂದು ಮುಂದಿನ ಊರಿಗೆ ತೆರಳುತ್ತವೆ. ಇದರಿಂದ ಇಂದನ ಹಾಗೂ ಸಮಯದ ಅನಾವಶ್ಯಕ ವ್ಯಯವಾಗುತ್ತದೆ. ಇದನ್ನು ತಪ್ಪಸಿ, ಸಂಗಮ ಕ್ರಾಸ್‌ಯಿಂದ ಮೊದಲು ಹಳೆಯ ನಗರದ ನಿಲ್ದಾಣದ ಮೂಲಕ ನವನಗರಕ್ಕೆ ತೆರಳಲು ಕ್ರಮ ಕೈಗೊಳ್ಳಬೇಕು. ಕೆಲವು ಬಸ್‌ಗಳ ನಾಮಫಲಕದಲ್ಲಿ ಬಾಗಲಕೋಟೆ ಬದಲಿಗೆ ಕೇವಲ ನವನಗರ ಎಂದು ಬಳಸುವುದನ್ನು ಕೈಬಿಡಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಸಂಘದ ಅಧ್ಯಕ್ಷ ರವಿ ಕುಮಟಗಿ, ಉಪಾಧ್ಯಕ್ಷ ರಾಮ ಮುಂದಡಾ, ಶ್ರೀನಿವಾಸ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ಅಮೃತಕರ, ಸಿದ್ದು ಪಟ್ಟಣಶೆಟ್ಟಿ, ಆಜಂನೇಯ ಕಾಗೆ ಇದ್ದರು.