ಬಾಗಲಕೋಟೆ ಕಲಾ ಭವನದ ಆವರಣದಲ್ಲಿರುವ ವಸ್ತು ಸಂಗ್ರಾಲಯದಲ್ಲಿ ಮಂಗಳವಾರ ಕ್ಷೇತ್ರ ಕಾರ್ಯದ ಅಧ್ಯಯನದಲ್ಲಿ ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಮಾತನಾಡಿದರು. ಡಾ. ಚಂದ್ರಶೇಖರ ಕಾಳನ್ನವರ, ರಂಗನಾಥ ಪೂಜಾರ, ದೀಪಾ ನಾಯಕ, ಮುತ್ತಪ್ಪ, ಭರಮಗೌಡ್ರ, ಲಕ್ಕಪ್ಪ ಮಾಳಗಿ, ಈರಣ್ಣ ಛಲವಾದಿ, ಸಿದಪ್ಪ ಕರಿಹೊಳಿ, ದಸ್ತಗಿರಿಸಾಬ್ ಕೊಲ್ಹಾರ ಇದ್ದರು.
- ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಹೇಳಿಕೆ
- ಕ್ಷೇತ್ರ ಕಾರ್ಯದ ಅಧ್ಯಯನ
- ಸಂಶೋಧನೆಗಳಲ್ಲಿ ಯುವ ಸಮೂಹವು ಆಕರಗಳನ್ನು ಹೆಚ್ಚು ಬಳಕೆ ಮಾಡಿಕೊಂಡರೆ ಸಂಶೋಧನೆಯಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ ಕಾಣಲು ಸಾಧ್ಯವಿದೆ
ಬಾಗಲಕೋಟೆ: ಉನ್ನತ ಶಿಕ್ಷಣದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಸಂಶೋಧನೆ ಅಧ್ಯಾಯನದಲ್ಲಿ ನಿಖರವಾದ ಆಕರಗಳ ಬಳಕೆ ಮಾಡಿಕೊಳ್ಳಬೇಕು. ಕ್ಷೇತ್ರ ಕಾರ್ಯದ ಮೂಲಕ ಆಕರಗಳ ಸಂಗ್ರಹಿಸಿ ಸಂಶೋಧನೆ ಗಟ್ಟಿಗೊಳಿಸಲು ಸಾಧ್ಯವಿದೆ ಎಂದು ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಹೇಳಿದರು.
ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025-26ನೇ ಸಾಲಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಸಂಶೋಧನೆಯಲ್ಲಿ ಕ್ಷೇತ್ರ ಕಾರ್ಯ ಮತ್ತು ಆಕರಗಳ ಬಳಕೆ ಕುರಿತು ಕಲಾಭವನದ ಆವರಣದಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಮಂಗಳವಾರ ನಡೆಸಿದ ಕ್ಷೇತ್ರ ಕಾರ್ಯದ ಅಧ್ಯಯನದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಶಾಸನಗಳನ್ನು ಹಸ್ತಪ್ರತಿ, ಕೃತಿಗಳನ್ನು ಆಕರಗಳಾಗಿ ಬಳಕೆ ಮಾಡಿಕೊಳ್ಳುವ ಬಗೆ ತಿಳಿಸಿದರು.
ಇಂದಿನ ಸಂಶೋಧನೆಗಳಲ್ಲಿ ಯುವ ಸಮೂಹವು ಆಕರಗಳನ್ನು ಹೆಚ್ಚು ಬಳಕೆ ಮಾಡಿಕೊಂಡರೆ ಸಂಶೋಧನೆಯಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ ಕಾಣಲು ಸಾಧ್ಯವಿದೆ. ವಿದ್ಯಾರ್ಥಿಗಳು ತಮ್ಮ ಕ್ಷೇತ್ರ ಕಾರ್ಯದಲ್ಲಿ ದೊರೆತ ಆಕರಗಳನ್ನು ಬಹುಶಿಸ್ತಿಯ ನೆಲೆಯಲ್ಲಿ ಬಳಸಿ ವಸ್ತು ನಿಷ್ಠ ಸಂಶೋಧಕರಾಗಬೇಕು ಎಂದು ಸಲಹೆ ನೀಡಿದರು.
ಡಾ. ಚಂದ್ರಶೇಖರ ಕಾಳನ್ನವರ ಮಾತನಾಡಿ, ಪದವಿ ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಮನೋಭಾವ ಬೆಳೆಸುವ ಸದುದ್ದೇಶದಿಂದ ಪಠ್ಯಕ್ರಮದ ಅನುಸಾರವಾಗಿ ನಡೆಸಿರುವ ಸಂಶೋಧನಾ ಕ್ಷೇತ್ರ ಕಾರ್ಯದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ರಂಗನಾಥ ಪೂಜಾರ, ದೀಪಾ ನಾಯಕ, ಮುತ್ತಪ್ಪ, ಭರಮಗೌಡ್ರ, ಲಕ್ಕಪ್ಪ ಮಾಳಗಿ, ಈರಣ್ಣ ಛಲವಾದಿ, ಸಿದಪ್ಪ ಕರಿಹೊಳಿ, ದಸ್ತಗಿರಿಸಾಬ್ ಕೊಲ್ಹಾರ, ಶಿವರಾಮ ಪಿಂಡರಕಿ, ಅನೀಲ ತೆಗ್ಗಿ, ಕುಮಾರಸ್ವಾಮಿ, ರುಕ್ಮವ್ವ ಕೊಳ್ಳಿ ಇದ್ದರು.