ಹುನಗುಂದ ತಾಲೂಕಿನ ಹಡಗಲಿ ಬ್ಯಾರೇಜ್‌ಗೆ ಗೇಟ್ ಅಳವಡಿಸುವಂತೆ ಆಗ್ರಹಿಸಿ ಚಿತ್ತರಗಿ, ಗಂಗೂರ, ಕಿರಸೂರ, ಪಾಪಥನಾಳ ಹಾಗೂ ಹೀರೆಮಳಗಾವಿ ಗ್ರಾಮದ ರೈತರು ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಶಿವಬಸಪ್ಪ ಗಾದಿ, ಎಸ್.ಎನ್.ನಿಂಗನಗೌಡರ, ಬಸವಂತಪ್ಪ ಕಾಮಾ, ವಿಜಯಕುಮಾರ ಕಾಮಾ ಇತರರಿದ್ದರು. 
ಬಾಗಲಕೋಟೆ

ಹಡಗಲಿ ಬ್ಯಾರೇಜ್‌ಗೆ ಗೇಟ್ ಅಳವಡಿಸಲು ರೈತರ ಮನವಿ

ಪ್ರಮುಖ ಮುಖ್ಯಾಂಶಗಳು

  • ಬ್ಯಾರೇಜ್‌ಗೆ ತಕ್ಷಣ ಗೇಟ್
  • ಮಲಪ್ರಭಾ ನದಿ
ಹುನಗುಂದ: ತಾಲೂಕಿನ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಡಗಲಿ ಬ್ಯಾರೇಜ್‌ಗೆ ತಕ್ಷಣ ಗೇಟ್ ಅಳವಡಿಸುವಂತೆ ಆಗ್ರಹಿಸಿ ಚಿತ್ತರಗಿ, ಗಂಗೂರ, ಕಿರಸೂರ, ಪಾಪಥನಾಳ ಹಾಗೂ ಹೀರೆಮಳಗಾವಿ ಗ್ರಾಮದ ರೈತರು ಶುಕ್ರವಾರ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ತೀವ್ರವಾಗುತ್ತಿದ್ದು, ಬ್ಯಾರೇಜ್‌ಗೆ ಗೇಟ್ ಅಳವಡಿಸಿದರೆ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಲಿದೆ ಎಂದು ತಿಳಿಸಿದರು.
ಚಿತ್ತರಗಿ ಗ್ರಾಮದ ರೈತ ಎಸ್.ಎನ್. ನಿಂಗನಗೌಡರ ಮಾತನಾಡಿ, ಹಲವು ವರ್ಷಗಳಿಂದ ಬ್ಯಾರೇಜ್ ನಿರ್ಮಾಣವಾಗಿದ್ದರೂ ಗೇಟ್ ಅಳವಡಿಸದ ಕಾರಣ ನೀರು ಸಂಗ್ರಹವಾಗುತ್ತಿಲ್ಲ. ಇದರಿಂದ ರೈತರಿಗೆ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಽಕಾರಿಗಳು ತಕ್ಷಣ ಕ್ರಮ ಕೈಗೊಂಡು ಬ್ಯಾರೇಜ್‌ಗೆ ಗೇಟ್ ಅಳವಡಿಸಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಶಿವಬಸಪ್ಪ ಗಾದಿ, ಬಸವಂತಪ್ಪ ಕಾಮಾ, ವಿಜಯಕುಮಾರ ಕಾಮಾ, ಸಂಗಪ್ಪ ನಿಡೋಣಿ, ಮಹಾಂತೇಶ ನಾಲತವಾಡ, ಸಾಂತಪ್ಪ ಹಂಡರಗಲ್ಲ, ಸಂಗಪ್ಪ ಹರಪೇಟಿ, ಕುಮಾರಗೌಡ ಗೌಡರ, ಕುಮಾರ ಬೇವೂರ, ರಾಮಣ್ಣ ಚಿರಲಾಪೂರ ಸೇರಿ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.