ತೇರದಾಳ ತಾಲೂಕಿನ ಗೋಲಬಾಂವಿ ರಸ್ತೆಯ ಒಂದನೇ ಕಾಲುವೆ ಸ್ವಚ್ಛತೆಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಬಿಜೆಪಿ ನಗರ ಘಟಕ ಅಧ್ಯಕ್ಷ ರಾಮಣ್ಣ ಹಿಡಕಲ್, ಉಪಾಧ್ಯಕ್ಷ ಪ್ರಕಾಶ ಹೊಸಮನಿ, ವಿಠ್ಠಲ ತಟ್ರಿ ಮತ್ತಿತರಿದ್ದರು.
- ಶಾಸಕ ಸಿದ್ದು ಸವದಿ ಹೇಳಿಕೆ
- ಗೋಲಬಾಂವಿ ರಸ್ತೆಯ ಒಂದನೇ ಕಾಲುವೆ ಸ್ವಚ್ಛತಾ ಕಾಮಗಾರಿಗೆ ಚಾಲನೆ
ತೇರದಾಳ: ರೈತರು ಸಮೃದ್ಧರಾಗಿದ್ದರೆ ಸಮಾಜವೂ ಸಮೃದ್ಧವಾಗುತ್ತದೆ. ಈ ನಿಟ್ಟಿನಲ್ಲಿ ರೈತರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ತಾಲೂಕಿನ ಗೋಲಬಾಂವಿ ರಸ್ತೆಯ ಒಂದನೇ ಕಾಲುವೆ ಸ್ವಚ್ಛತಾ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಮಳೆಗಾಲದ ಹಿನ್ನೆಲೆಯಲ್ಲಿ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಾಲುವೆಗಳಲ್ಲಿ ಬೆಳೆದ ಗಿಡ-ಗಂಟಿಗಳನ್ನು ತೆರವುಗೊಳಿಸುವುದು, ಸ್ವಚ್ಛತೆ ಮತ್ತು ದುರಸ್ತಿ ಕಾಮಗಾರಿಗಳಿಗೆ ನೀರಾವರಿ ಇಲಾಖೆಯಿಂದ 42.18 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದರು.
ಕಾಲುವೆ ನೀರಿನ ಹರಿವಿಗೆ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆದುಕೊಳ್ಳಲಾಗಿದೆ. ನೀರು ತಲುಪದ ಕಾಲುವೆಗಳಿಗೆ ಸಂಬಂಸಿದಂತೆ ಡಿಪಿಆರ್ ಸಿದ್ಧಪಡಿಸಲು ನೀರಾವರಿ ಇಲಾಖೆ ರಬಕವಿ ವಿಭಾಗದ ಎಇಇ ಶ್ರೀಧರ ನಂದಿಹಾಳ ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರೈತರು ಕೂಡ ಕಾಲುವೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಅವುಗಳಲ್ಲಿ ಪೈಪ್‌ಗಳನ್ನು ಅಳವಡಿಸಬಾರದು ಎಂದು ಮನವಿ ಮಾಡಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ರಾಮಣ್ಣ ಹಿಡಕಲ್, ಉಪಾಧ್ಯಕ್ಷ ಪ್ರಕಾಶ ಹೊಸಮನಿ, ವಿಠ್ಠಲ ತಟ್ರಿ, ಶೀತಲ ಗೂಳನ್ನವರ, ಕೇದಾರಿ ಪಾಟೀಲ, ಸುಭಾಸ ಗಾತಾಡೆ, ಶೀತಲ ಬೋಳಗೊಂಡ, ಶ್ರೀಶೈಲ ತೆಳಗಿನಮನಿ, ಸಂಗಮೇಶ ಕಾಲತಿಪ್ಪಿ, ಸದಾಶಿವ ಹೊಸಮನಿ, ಸಚಿನ ಕೊಡತೆ, ನಿಂಗಪ್ಪ ನೀಲಜಗಿ, ನಾಗಪ್ಪ ಹೊಸಮನಿ, ಸಂತೋಷ ಅಕ್ಕೆನ್ನವರ, ವಿಠ್ಠಲ ಹಾಡಕರ, ಮುರಗೇಶ ಮಿರ್ಜಿ, ಆನಂದ ಮದುಮಲಿ ಮತ್ತಿತರಿದ್ದರು.