ಮುಧೋಳ ನಗರದ ತಾಲೂಕು ಆಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಿಕ ಮಾತನಾಡಿದರು. ಇಒ ರಾಘವೇಂದ್ರ ಕಳ್ಳಿಮನಿ, ಗ್ರೇಡ್-2 ತಹಸೀಲ್ದಾರ್ ಎ.ಕೆ.ಇಂಡಿಕರ, ಸಿಪಿಐ ಎಂ.ನಾಗರಡ್ಡಿ, ಆಯುಕ್ತ ಗೋಪಾಲ ಖಾಸೆ, ಬಿಇಒ ಸಮೀರ ಮುಲ್ಲಾ ಇತರರಿದ್ದರು.
- ತಹಸೀಲ್ದಾರ್ ಚಿಕ್ಕಪ್ಪ ನಾಯಕ ಹೇಳಿಕೆ
- ಪೂರ್ವಭಾವಿ ಸಭೆ
- ಸ್ವಾತಂತ್ರ್ಯೋತ್ಸವ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲು ಸಹಕರಿಸಬೇಕು
ನಗರದಲ್ಲಿ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ಅದ್ದೂರಿಯಾಗಿ ಹಾಗೂ ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು.
ನಗರದ ತಾಲೂಕು ಆಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಯಶಸ್ಸಿಗೆ ಬೇಕಾಗುವಂತಹ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳಿಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ರಾಷ್ಟ್ರೀಯ ಹಬ್ಬ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಿ, ಸ್ವಾತಂತ್ರ್ಯೋತ್ಸವ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲು ಸಹಕರಿಸಬೇಕು ಎಂದು ತಹಸೀಲ್ದಾರ್ ಮನವಿ ಮಾಡಿಕೊಂಡರು.
ತಾಪಂ ಇಒ ರಾಘವೇಂದ್ರ ಕಳ್ಳಿಮನಿ, ಗ್ರೇಡ್-2 ತಹಸೀಲ್ದಾರ್ ಎ.ಕೆ.ಇಂಡಿಕರ, ಸಿಪಿಐ ಎಂ.ನಾಗರಡ್ಡಿ, ಆಯುಕ್ತ ಗೋಪಾಲ ಖಾಸೆ ಬಿಇಒ ಸಮೀರ ಮುಲ್ಲಾ, ಕೃಷಿ ಅಧಿಕಾರಿ ಸಿದ್ಧಲಿಂಗೇಶ ದೊಡ್ಡಮನಿ, ನೌಕರರ ಸಂಘದ ಅಧ್ಯಕ್ಷ ಪ್ರಕಾಶ.ಹೊಸಮನಿ, ಬಿಆರ್‌ಸಿ ಅಧಿಕಾರಿ ಸಂಗಮೇಶ ನೀಲಗುಂದ, ಟಿಎಚ್‌ಒ ಡಾ.ವೆಂಕಟೇಶ ಮಲಾಣಾ, ಡಾ.ಗೋವಿಂದ ರಾಠೋಡ, ಕಂದಾಯ ನಿರೀಕ್ಷಕ ಪ್ರಕಾಶ ಕುಂದರಗಿ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಕಂದಗಲ್, ಜಿ.ಡಿ.ನಿಂಬಾಳಕರ ಬಿ.ಎಚ್.ಬೀಳಗಿ ಇತರರಿದ್ದರು.