ಇಳಕಲ್ಲದ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನವನದಲ್ಲಿ ನಗರಸಭೆ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಶ್ರೀನಿವಾಸ ಜಾಧವ ಸಸಿ ನೆಟ್ಟು ನೀರೆರೆದರು. ಪರಶುರಾಮ ನಾರಾಯಣಿ, ಆರೋಗ್ಯ ಅಧಿಕಾರಿ ಮನೋಹರ ದೊಡ್ಡಮನಿ, ಕಿರಿಯ ಆರೋಗ್ಯ ಅಧಿಕಾರಿ ಶರಣಪ್ಪ ಹುಲಿ ಇತರರಿದ್ದರು. 
ಬಾಗಲಕೋಟೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಶ್ರೀನಿವಾಸ ಜಾಧವ ಅಭಿಮತ
  • ಪರಿಸರವನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ
  • ಹಸಿರನ್ನು ಉಳಿಸುವುದು ಕೇವಲ ಆಚರಣೆಯಾಗದೆ ನಿತ್ಯದ ಬದುಕಿನ ಭಾಗವಾಗಬೇಕು
ಇಳಕಲ್ಲ : ಪರಿಸರವನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ. ಇಂದಿನ ಜಾಗತಿಕ ತಾಪಮಾನದ ದಿನಗಳಲ್ಲಿ ಹಸಿರನ್ನು ಉಳಿಸುವುದು ಕೇವಲ ಆಚರಣೆಯಾಗದೆ ನಿತ್ಯದ ಬದುಕಿನ ಭಾಗವಾಗಬೇಕು ಎಂದು ನಗರಸಭೆ ಆಯುಕ್ತ ಶ್ರೀನಿವಾಸ ಜಾಧವ ಹೇಳಿದರು.
ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನವನದಲ್ಲಿ ನಗರಸಭೆ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಮಾಲಿನ್ಯವನ್ನು ತಡೆಗಟ್ಟಲು ನಾವೆಲ್ಲರೂ ಕೈಜೋಡಿಸಿ ಗಿಡ-ಮರಗಳನ್ನು ಬೆಳೆಸಬೇಕಾಗಿದೆ. ಹಸಿರುಮಯ ಹಾಗೂ ಸ್ವಚ್ಛ ನಗರವನ್ನಾಗಿ ಮಾಡಲು ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದರು.
ಪರಶುರಾಮ ನಾರಾಯಣಿ, ಆರೋಗ್ಯ ಅಧಿಕಾರಿ ಮನೋಹರ ದೊಡ್ಡಮನಿ, ಕಿರಿಯ ಆರೋಗ್ಯ ಅಧಿಕಾರಿ ಶರಣಪ್ಪ ಹುಲಿ ಸಿಬ್ಬಂದಿ ಬಸವರಾಜ ಕಿರಗಿ ಸೇರಿ ಪೌರ ಕಾರ್ಮಿಕರು ಇದ್ದರು.