ಬಾಗಲಕೋಟೆ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಈಚೆಗೆ ನಡೆದ ಪರಿಸರ ದಿನಾಚರಣೆಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸಸಿಗೆ ನೀರೂಣಿಸುವ ಮೂಲಕ ಚಾಲನೆ ನೀಡಿದರು. ಮಹೇಶ ಅಥಣಿ, ಅಶೋಕ ಸಜ್ಜನ, ಡಾ. ಭುವನೇಶ್ವರಿ ಯಳಮಲಿ ಮತ್ತಿತರರು ಇದ್ದರು. 
ಬಾಗಲಕೋಟೆ

ಪರಿಸರ ವಿನಾಶ ಜಾಗತಿಕ ತಾಪಮಾನಕ್ಕೆ ಕಾರಣ

ಪ್ರಮುಖ ಮುಖ್ಯಾಂಶಗಳು

  • ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಹೇಳಿಕೆ
  • ಮನೆಗೊಂದು ಗಿಡ ನೆಡುವುದು ಸಂಸ್ಕೃತಿಯಾಗಲಿ
ಬಾಗಲಕೋಟೆ: ಹಸಿರು ಪರಿಸರ ಸಮೃದ್ಧ ಬದುಕಿನ ಸಂಕೇತ. ಮನುಷ್ಯರ ಆರೋಗ್ಯ ರಕ್ಷಣೆಯಲ್ಲಿ ಪರಸರದ ಕೊಡುಗೆ ಅಪಾರ. ಆದ್ದರಿಂದ ಮರಗಳನ್ನು ಬೆಳೆಸುವುದು ನಮ್ಮ ಆದ್ಯತೆಯಾಗಬೇಕು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಹೇಳಿದರು.
ನಗರದ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಸಿರು ಪರಿಸರವನ್ನು ಸಂರಕ್ಷಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಬೇಕು. ಮನೆಗೊಂದು ಗಿಡ ನೆಡುವುದು ಸಂಸ್ಕೃತಿಯಾಗಬೇಕು. ಜಾಗತಿಕ ತಾಪಮಾನದಂತಹ ಸಮಸ್ಯೆಗೆ ಪರಿಸರದ ವಿನಾಶವೇ ಕಾರಣವಾಗಿದೆ. ಮನುಷ್ಯ ಆರೋಗ್ಯದಿಂದ ಬದುಕಲು ಮರಗಿಡಗಳ ಅಗತ್ಯ ಬಹುಮುಖ್ಯವಾಗಿದೆ ಎಂದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯೆ ಡಾ. ಭುವನೇಶ್ವರಿ ಯಳಮಲಿ, ಅಧೀಕ್ಷಕ ಡಾ. ಶ್ರೀರಾಮ ಕೋರಾ, ಉಪ ಪ್ರಾಚಾರ್ಯ ಡಾ. ಸಿ.ಎಸ್. ಹಿರೇಮಠ, ಡೆಂಟಲ್ ಕಾಲೇಜ್ ಪ್ರಾಚಾರ್ಯ ಡಾ. ರವಿರಾಜ ದೇಸಾಯಿ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ದಿಲೀಪ ನಾಟೆಕರ್ ಮತ್ತಿತರರಿದ್ದರು.