ಬಾಗಲಕೋಟೆಯಲ್ಲಿ ಡಿಎಸ್‌ಎಸ್ (ಸಾಗರ ಬಣ) ಜಿಲ್ಲಾ ಮಹಿಳಾ ಸಮಿತಿ ರಚಿಸಿ, ನೂತನ ಪದಾಽಕಾರಿಗಳನ್ನು ಅಭಿನಂದಿಸಲಾಯಿತು.
ಬಾಗಲಕೋಟೆ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಸಂಪೂರ್ಣವಾಗಿ ಪಾಲ್ಗೊಂಡ ತಮ್ಮ ತಮ್ಮ ಪ್ರದೇಶದಲ್ಲಿ ವಾಸಿರುವ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ, ಯಾವುದೇ ಮತದಾರರು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಡಿಎಸ್‌ಎಸ್(ಸಾಗರ ಬಣ) ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಸಂಘಟನೆ ಪ್ರಮುಖರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ದೇಶದಲ್ಲಿ ಅಂದಾಜು ೧೩ ರಾಜ್ಯಗಳಲ್ಲಿ ಎಸ್‌ಐಆರ್ ಆಗಿದ್ದು, ಅಲ್ಲಿ ೫ ಕೋಟಿಗಿಂತ ಹೆಚ್ಚು ಮತದಾರರು ಹೊರಗುಳಿದಿದ್ದಾರೆ. ಈ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಕರ್ನಾಟಕ ಯಾವುದೇ ದೇಶದ ಗಡಿರೇಖೆ ಹಂಚಿಕೊAಡಿರುವುದಿಲ್ಲ. ಹೀಗಾಗಿ ಇಲ್ಲಿ ನುಸುಳುಕೋರರು ಎನ್ನುವ ಪ್ರಮೇಯ ಬರುವುದಿಲ್ಲ. ಯಾವುದೇ ತಾಂತ್ರಿಕ ನೆಪಮಾಡಿ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಡಿಎಸ್‌ಎಸ್ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಬೇಕಿದೆ. ಮುಖ್ಯವಾಗಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಮತಪಟ್ಟಿಯಿಂದ ಹೋಗದಂತೆ ಎಚ್ಚರವಹಿಸಬೇಕಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಬಸವರಾಜ ಹಳ್ಳದಮನಿ, ರಮೇಶ ಅನಗವಾಡಿ, ಎಚ್. ಎನ್. ನೀಲನಾಯಕ, ಕಾಸಿಮ್‌ಅಲಿ ಗೋಠೆ, ಸಂಗಪ್ಪ ನಾರಾಯಣಿ, ಬಸವರಾಜ ಚಲವಾದಿ ಮತ್ತಿತರರು ಇದ್ದರು.
ಸಭೆಯಲ್ಲಿ ನೂತನವಾಗಿ ಮಹಿಳಾ ಜಿಲ್ಲಾ ಸಮಿತಿ ರಚಿಸಲಾಯಿತು. ಜಿಲ್ಲಾ ಸಂಚಾಲಕಿಯಾಗಿ ಆಶಾಬೇಗಂ ಬಿರಾದಾರ, ಜಿಲ್ಲಾ ಸಂಘಟನಾ ಸಂಚಾಲಕರಾದಿ ರೇಷ್ಮಾ ಅಜ್ಮೀರ, ಯಾಸ್ಮೀನ ಹೊನ್ಯಾಳ, ಪವಿತ್ರಾ ಜಕ್ಕಪ್ಪನವರ, ನಂದಾ ಚವ್ಹಾಣ ಹಾಗೂ ಖಜಾಂಚಿಯಾಗಿ ಮಹೆಕಪಾತಿಮಾ ಬಿರಾದಾರ ಅವರನ್ನು ನೇಮಕ ಮಾಡಲಾಯಿತು.