ಗುಳೇದಗುಡ್ಡ ಪಟ್ಟಣದಲ್ಲಿ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು. ಮೌಲಾನಾ ಮಹ್ಮದ್ ನಸೀನ್ ಅಕ್ತರ, ಸಂಜಯ ಬರಗುಂಡಿ, ಜಮೀರ ಮೌಲ್ವಿ, ವೈ.ಆರ್.ಹೆಬ್ಬಳ್ಳಿ, ಕೆ.ಆರ್.ರಾಯಚೂರ, ಕೀರಪ್ಪ ತಳವಾರ, ಚಿದಾನಂದಸಾ ಕಾಟವಾ, ರಜಕ ಕುದರಿ, ಎಂ.ಎಂ. ಜಮಖಾನಿ, ರಫೀಕ ಕಲ್ಬುರ್ಗಿ, ಸಲೀಮ ಮೊಮಿನ ಇದ್ದರು.  
ಬಾಗಲಕೋಟೆ

ಹೈಟೆಕ್ ಅಂಗನವಾಡಿ ನಿರ್ಮಾಣಕ್ಕೆ ಒತ್ತು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಬಿ.ಚಿಮ್ಮನಕಟ್ಟಿ ಹೇಳಿಕೆ
  • ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ
  • ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ.
ಗುಳೇದಗುಡ್ಡ: ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಅಂಗನವಾಡಿ ಶಾಲೆಗಳಿಂದ ಹಿಡಿದು ಪದವಿ ಶಿಕ್ಷಣದ ವರೆಗಿನ ಶಾಲೆಗಳು ಖಾಸಗಿ ಶಾಲೆಹಳನ್ನು ಮೀರಿಸಲಿವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸಂಜೆ 15ನೇ ಹಣಕಾಸು ಯೋಜನೆಯಡಿ ಅಂದಾಜು 27ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅಂಗವಾಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಎಲ್ಲ ಸೌಲಭ್ಯಗಳು ದೊರೆಯುವಂತೆ ಅಂಗನವಾಡಿ ಕಟ್ಟಡ ವಿನ್ಯಾಸಮಾಡಲಾಗಿದ್ದು, ಅಂಗನವಾಡಿ ಕಟ್ಟಡಕ್ಕೆ 27 ಲಕ್ಷ ರೂ. ಬಿಡುಗಡೆ ಮಾಡಿದ್ದು ಇದೇ ಮೊದಲಬಾರಿ ಎಂದರು.
ಕ್ಷೇತ್ರದಲ್ಲಿ ಮುಂದೆ ನಿರ್ಮಿಸಲಿರುವ ಎಲ್ಲ ಅಂಗನವಾಡಿಗಳು ಈ ಅಂಗನವಾಡಿಯಂತೆ ಹೈಟೆಕ್ ಅಂಗನವಾಡಿಗಳನ್ನಾಗಿ ನಿರ್ಮಿಸಲಾಗುವುದು. ಅಲ್ಲದೆ ಪಟ್ಟಣಕ್ಕೆ ಕೆಪಿಎಸ್ ಶಾಲೆ ಮಂಜೂರಾಗಿದ್ದು, ಇಲ್ಲಿ ಮಕ್ಕಳು ಎಲ್.ಕೆ.ಜಿ.ಯಿಂದ ಹಿಡಿದು ಪಿಯುಸಿವರೆಗೆ ಓದಬಹುದು. ಸರ್ಕಾರ ಶಿಕ್ಷಣಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ ಎಂದು ತಿಳಿಸಿದರು.
ಮೌಲಾನಾ ಮಹ್ಮದ್ ನಸೀನ್ ಅಕ್ತರ ಸಾನ್ನಿಧ್ಯ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಸಂಜಯ ಬರಗುಂಡಿ, ಜಮೀರ ಮೌಲ್ವಿ, ವೈ.ಆರ್.ಹೆಬ್ಬಳ್ಳಿ, ಕೆ.ಆರ್.ರಾಯಚೂರ, ಕೀರಪ್ಪ ತಳವಾರ, ಚಿದಾನಂದಸಾ ಕಾಟವಾ, ಅಂಜುಮನ್ ಅಧ್ಯಕ್ಷ ರಜಕ ಕುದರಿ, ಎಂ.ಎಂ. ಜಮಖಾನಿ, ರಫೀಕ ಕಲ್ಬುರ್ಗಿ, ಸಲೀಮ ಮೊಮಿನ, ಶಿವಾನಂದ ಮಳಿಮಠ, ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮಜಾವರ, ವ್ಯವಸ್ಥಾಪಕ ಎ.ಎಚ್.ಮುದ್ದೇಬಿಹಾಳ, ಸಲೀಮ ಡಾಲಾಯತ್ ಇದ್ದರು.