ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೊಡಿ ಪದವಿ ಮಹಾವಿದ್ಯಾಲಯದಲ್ಲಿ ಜರುಗಿದ ಮಹಿಳಾ ಸಬಲೀಕರಣ ಕೇಂದ್ರ ಹಾಗೂ ಐಕ್ಯೂಎಸಿ ಘಟಕ ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಸಮಾರಂಭಕ್ಕೆ ಭಾರತಿ ತಾಳಿಕೋಟಿ ಚಾಲನೆ ನೀಡಿದರು. ಪ್ರಾಚಾರ್ಯ ಡಾ. ಜಿ. ಆರ್. ಜುನ್ಯಾಯ್ಕರ, ಡಾ.ಮನೋಹರ ಶಿರಹಟ್ಟಿ, ಡಾ.ಪ್ರಕಾಶ ಕೆಂಗನಾಳ, ರೇಷ್ಮಾ ಗಜಾಕೋಶ, ಲಕ್ಷ್ಮೀ ಖವಾಸಿ ಇತರರಿದ್ದರು.
- ಭಾರತಿ ತಾಳಿಕೋಟಿ ಅಭಿಮತ
- ಆರ್ಥಿಕವಾಗಿ ಬೆಳೆಯಲು ಮುಂದಾಗಿ
- ಮಹಿಳಾ ದಿನಾಚರಣೆ ಸಮಾರಂಭ
ರಬಕವಿ/ಬನಹಟ್ಟಿ : ಶಿಕ್ಷಣ, ಆತ್ಮವಿಶ್ವಾಸ ಮತ್ತು ಛಲದಿಂದ ಹಿಡಿದ ಗುರಿ ತಲುಪುವ ಗಮ್ಯತೆ ಇವುಗಳೆಲ್ಲವೂ ಮಹಿಳೆಯರ ಸಬಲೀಕರಣ ಹಾಗೂ ಪ್ರಗತಿಯ ಮುಖ್ಯ ಮೆಟ್ಟಿಲುಗಳಾಗಿವೆ ಎಂದು ಹೊಸೂರು-ರಬಕವಿಯ ಪದ್ಮಾವತಿ ಇಂಟರ್‌ನ್ಯಾಶನಲ್ ಶಾಲೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ ಹೇಳಿದರು.
ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಲಾ, ವಾಣಿಜ್ಯ, ಬಿಬಿಎ, ಬಿಸಿಎ, ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಜರುಗಿದ ಮಹಿಳಾ ಸಬಲೀಕರಣ ಕೇಂದ್ರ ಹಾಗೂ ಐಕ್ಯೂಎಸಿ ಘಟಕ ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
1908ರಲ್ಲಿ ಮಹಿಳಾ ಕಾರ್ಮಿಕರು ಸಮಾನ ವೇತನಕ್ಕೆ ಆಗ್ರಹಿಸಿ ನಡೆಸಿದ ಹೋರಾಟ ಹಾಗೂ 1970ರಲ್ಲಿ ರಷ್ಯಾದಲ್ಲಿ ಮಹಿಳಾ ಶೋಷಣೆಯ ವಿರುದ್ಧದ ಹೋರಾಟ ವಿಶ್ವಸಂಸ್ಥೆ ಗಮನ ಸೆಳೆದು ಮಾ. 8ನ್ನು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ಘೋಷಣೆಯಾಯಿತು. ಸಮಾನತೆ, ಆರೋಗ್ಯ ರಕ್ಷಣೆ, ಶಿಕ್ಷಣ, ಶೋಷಣೆ ವಿರುದ್ಧ ಜಾಗತಿ ಹೆಚ್ಚಿಸುವಲ್ಲಿ ಮಹತ್ವತೆ ದೊರೆತು ಮಹಿಳೆಯರು ಸಮಾಜ ಸೇವೆ, ವ್ಯಾಪಾರ, ಉದ್ಯಮ, ವೈದ್ಯಕೀಯ, ಶಿಕ್ಷಣ, ವಿಜ್ಞಾನ, ಬಾಹ್ಯಾಕಾಶ, ಸೇನೆ ಸೇರಿದಂತೆ ಎಲ್ಲ ಕ್ಷೇತ್ರಗಳತ್ತ ಮಹಿಳೆ ಮುಕ್ತವಾಗಿ ಸೇವೆ ಸಲ್ಲಿಸಲು ಅವಕಾಶವಾಯಿತು ಎಂದರು.
ನಾಶಿ ುಡ್ ಪ್ರೊಡಕ್ಟ್ ವ್ಯವಸ್ಥಾಪಕ ನಿರ್ದೇಶಕಿ ಸ್ಮಿತಾ ನಾಶಿ ಮಾತನಾಡಿ, ಎಲ್ಲ ಮಹಿಳೆಯರು ನಗರ ಜೀವನ ಇಷ್ಟಪಡುವ ಬದಲು ಗ್ರಾಮೀಣ ಭಾಗದಲ್ಲೂ ಸಣ್ಣ ಕೈಗಾರಿಕೆ, ಉದ್ಯಮ ನಡೆಸುವ ಮೂಲಕ ಆರ್ಥಿಕವಾಗಿ ಬೆಳೆಯಲು ಮುಂದಾಗಿ ಎಂದರು.
ಇತಿಹಾಸ ತಜ್ಞ ಪ್ರೊ. ಡಾ. ಮಂಜುನಾಥ ಬೆನ್ನೂರ ಮಾತನಾಡಿ, ಸೀ ಶಿಕ್ಷಣಕ್ಕೆ ಅರ್ಹಳಲ್ಲ ಎಂಬ ಕಾಲಘಟ್ಟದಲ್ಲಿ ಮಹಿಳಾ ಶಿಕ್ಷಣಕ್ಕೆ ಅಹರ್ನಿಶಿ ಶ್ರಮಿಸಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆ ವಿರೋಧಗಳ ನಡುವೆಯೂ ಶ್ರಮಿಸಿದ್ದರಿಂದ ವನಿತೆಯರು ಎಲ್ಲ ಕ್ಷೇತ್ರಗಳಲ್ಲಿ ಮಿಂಚುವಂತಾಗಿದೆ ಎಂದರು.
ಪ್ರಾಚಾರ್ಯ ಡಾ. ಜಿ.ಆರ್. ಜುನ್ನಾಯ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಮನೋಹರ ಶಿರಹಟ್ಟಿ, ಡಾ. ಪ್ರಕಾಶ ಕೆಂಗನಾಳ, ರೇಷ್ಮಾ ಗಜಾಕೋಶ, ಲಕ್ಷ್ಮೀ ಖವಾಸಿ, ಡಾ. ಸುವರ್ಣ ವರದಾಯಿನಿ, ದಿವ್ಯಾ ದೇವಾಡಿಗ, ಶೋಭಾ ಪಟ್ಟಣ, ಶ್ವೇತಾ ಮಠದ, ವಿ.ವೈ. ಪಾಟೀಲ, ರತ್ನಾ ಗುಂಡಿ, ಶಿರೀಶ ಹಳೆಮನಿ, ಮಹಾವೀರ ಸಂಕಾರ, ಅಶ್ವಿನಿ ಮಳಲಿ, ಸೌಮ್ಯ ಸವದಿ ಇತರರಿದ್ದರು.
ಸ್ಫೂರ್ತಿ ಬಿರಾದಾರ ಪ್ರಾರ್ಥಿಸಿದರು. ದೀಪಾ ಹುಬ್ಬಳ್ಳಿ ಸ್ವಾಗತಿಸಿದರು. ನರ್ಮದಾ ಗೊಂಬಿ, ಪೂಜಾ ಡಾಗಾ ನಿರೂಪಿಸಿದರು. ಸ್ನೇಹಾ ಆರುಟಗಿ ವಂದಿಸಿದರು.