ಬನಹಟ್ಟಿ ಬಸ್ ನಿಲ್ದಾಣದ ಸಮೀಪದ ಬಯಲು ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿರುವ ಕುಡುಕರ ತಂಡ. 
ಬಾಗಲಕೋಟೆ

ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರ ಹಾವಳಿ

ಪ್ರಮುಖ ಮುಖ್ಯಾಂಶಗಳು

  • ಬನಹಟ್ಟಿಯಲ್ಲಿ ಬೆಸತ್ತ ಜನರು
  • ಕ್ರಮಕ್ಕೆ ಒತ್ತಾಯ
ರಬಕವಿ/ಬನಹಟ್ಟಿ: ಅವಳಿ ನಗರ ಪ್ರದೇಶದ ವಿವಿಧ ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ಜಾಗಗಳಲ್ಲಿ ಕುಡುಕರ ಹಾವಳಿ ಹೆಚ್ಚುತ್ತಿರುವುದರಿಂದ ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷವಾಗಿ ಬನಹಟ್ಟಿ ಬಸ್ ನಿಲ್ದಾಣದ ಸಮೀಪದ ರಸ್ತೆಬದಿ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಕುಳಿತು ಮದ್ಯಪಾನ ಮಾಡುವ ದೃಶ್ಯಗಳು ದಿನನಿತ್ಯದ ಸಂಗತಿಯಾಗಿವೆ.
ಈ ಮಾರ್ಗವು ಲಕ್ಷ್ಮಿ ನಗರ ಬಡಾವಣೆ ಸೇರಿ ಶಾಲೆಗಳು ಹಾಗೂ ವ್ಯಾಪಾರ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಸಂಚಾರದಲ್ಲಿ ಮುಜುಗರ ಹಾಗೂ ಭದ್ರತಾ ಆತಂಕ ಉಂಟಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಹೆಚ್ಚುತ್ತಿರುವ ವಾಹನ ಸಂಚಾರದ ನಡುವೆ ಮದ್ಯಪಾನ ಮಾಡಿದವರಿಂದ ಅಪಘಾತಗಳ ಭೀತಿ ಕೂಡ ಹೆಚ್ಚಾಗಿದೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
"

ನಾನು ಕಳೆದವಾರವಷ್ಟೆ ಬನಹಟ್ಟಿ ವಲಯದ ಸಿಪಿಐ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಕೂಡಲೆ ಇಂಥಹ ಸ್ಥಳಗಳನ್ನು ಗುರುತಿಸಿ ಸಿಬ್ಬಂದಿಗೆ ಮಾಹಿತಿ ಒದಗಿಸಿ ಸ್ವತಃ ನಾನು ಸ್ಥಳಗಳನ್ನು ಪರೀಶೀಲಿಸಿ, ಸಾರ್ವಜನಿಕರಿಗಾಗುವ ತೊಂದರೆಗಳನ್ನು ಸರಿಪಡಿಸುತ್ತೇನೆ.

— | ರಾಜು ಆರ್. ಪಾಟೀಲ ಸಿಪಿಐ. ಬನಹಟ್ಟಿ.