ಬಾಗಲಕೋಟೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ಚುರುಕೊಗೊಳಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗೃತ ಕ್ರಮವಾಗಿ ಶಿಕ್ಷಣ ಸಂಸ್ಥೆಗಳ ಪರವಾನಿಗೆ ಪಡೆದು ಶಾಲೆ, ಕಾಲೇಜು ಕೊಠಡಿ, ಹಾಸ್ಟೆಲ್, ಹಾಲ್‌ಗಳಲ್ಲಿ ಮಾದಕ ವಸ್ತುಗಳನ್ನು ವಿದ್ಯಾರ್ಥಿಗಳು ಸಂಗ್ರಹಿಸಿದ್ದಾರೆಯೇ ಎಂದು ನಾರ್ಕೋಟಿಕ್ಸ್ ಶ್ವಾನದಳದ ಮೂಲಕ ಪರಿಶೀಲಿಸುತ್ತಿರುವುದು. 
ಬಾಗಲಕೋಟೆ

ಡ್ರಗ್-ಫ್ರೀ ಬಾಗಲಕೋಟೆ ಮಿಷಿನ್ ಕಾರ್ಯಾಚರಣೆ

ಬಾಗಲಕೋಟೆ: ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿ ಸಮಾಜದಲ್ಲಿ ನಿರಂತರವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ಧೇಶದಿಂದ ಬಾಗಲಕೋಟೆ ಜಿಲ್ಲಾ ಮಟ್ಟದಲ್ಲಿ ಜೂನ್ ೨೨ ರಿಂದ ಪೊಲೀಸ್ ಇಲಾಖೆಯೂ `ಡ್ರಗ್-ಫ್ರೀ ಬಾಗಲಕೋಟೆ ಮಿಷಿನ್' ಕಾರ್ಯಾಚರಣೆಯನ್ನು ಆರಂಭಿಸುತ್ತಿದೆ.
ಜಿಲ್ಲೆಯಲ್ಲಿ ೨೦ ಸಾವಿರಕ್ಕೂ ಅಽಕ ವಿದ್ಯಾರ್ಥಿಗಳು ಒಟ್ಟು ೮೦೦ ಕ್ಕೂ ಅಽಕಾ ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವಿರುದ್ಧ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಜೂ. ೨೨, ೨೩ ಮತ್ತು ೨೪ ರಂದು ಈ ಮೂರು ದಿನಗಳ ಕಾಲ ವಿಶೇಷ ಶಿಕ್ಷಣ ಸಂಸ್ಥೆಗಳ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಕಾರ್ಯಕ್ರಮದ ಸಮನ್ವಯಕ್ಕಾಗಿ ಪ್ರತಿಯೊಂದ ಶಿಕ್ಷಣ ಸಂಸ್ಥೆಗೆ ಈಗಾಗಲೇ ಪೊಲೀಸ್ ನೋಡಲ್ ಅಽಕಾರಿಗಳನ್ನು ನೇಮಿಸಲಾಗಿದೆ. ಅವರು ಸಂಸ್ಥೆಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು, ಜಾಗೃತಿ ಕಾರ್ಯಕ್ರಮಗಳು ಹಾಗೂ ಮಾದಕ ವಸ್ತುಗಳನ್ನು ತಡೆಗಟ್ಟುವ ಕ್ರಮಗಳು ಮತ್ತು ಪ್ರತಿಕ್ರಿಯಾ ವ್ಯವಸ್ಥೆಗಳ ಸಮನ್ವಯನ್ನು ವಹಿಸುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.
ಸಮಿತಿ ರಚನೆಗೆ ಉತ್ತೇಜನ:
ಪ್ರತಿಯೊಂದ ಶಿಕ್ಷಣ ಸಂಸ್ಥೆಗಳಲ್ಲಿ ಅದರ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿ ಪ್ರತಿನಿಽಗಳು ಹಾಗೂ ಇತರೆ ಸಂಬAಽತ ಸದಸ್ಯರನ್ನು ಒಳಗೊಂಡ ಮಾದಕ ವಸ್ತು ಜಾಗೃತಿ ಮತ್ತು ತಡೆಗಟ್ಟುವ ಸಮಿತಿ ರಚಿಸಲು ಉತ್ತೇಜಿಸಲಾಗುವುದು. ಸಮಿತಿಗಳು ಜಾಗೃತಿ ಮೂಡಿಸುವುದು, ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸುವುದು ಹಾಗೂ ಆರೋಗ್ಯಕರ ಶಿಕ್ಷಣ ವಾತಾವರಣ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಎಲ್ಲ ಸಂಸ್ಥೆಗಳಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ನಿಯಮಿತ ಪರಿಶೀಲನೆಗಾಗಿ ಮಾಸಿಕ ಸಭೆಯ ನಮೂನೆಯನ್ನು ಸಹ ಒದಗಿಸಲಾಗುತ್ತಿದೆ.
ಈ ಮಾದಕ ವಸ್ತುಗಳ ವಿರುದ್ಧದ ಹೋರಾಟವೂ ಬರೀ ಪೊಲೀಸ್ ಇಲಾಖೆಯ ಜವಾಬ್ದಾರಿ ಮಾತ್ರವಲ್ಲದೇ ಇದರಲ್ಲಿ ಸಾರ್ವಜನಿಕರು, ಹೋರಾಟಗಾರರು, ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಹೀಗೆ ಎಲ್ಲರನ್ನು ಈ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಈ ಅಭಿಯಾನದಲ್ಲಿ ಎಲ್ಲರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ತಿಂಗಳು ಅಂತ್ಯಕ್ಕೆ ಮಾದಕ ವಸ್ತು ವಿರೋಽ ಜಾಗೃತಿ ಜಾಥಾ ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ `ಡ್ರಗ್-ಫ್ರೀ ಬಾಗಲಕೋಟೆ ಮಷಿನ್' ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬನ್ನಿ, ನಮ್ಮ ಯುವ ಜನತೆಯನ್ನು ರಕ್ಷಿಸಿ ಭವಿಷ್ಯದ ಪೀಳಿಗೆಯನ್ನು ಸುರಕ್ಷಿತಗೊಳಿಸೋಣ ಎಂದು ಎಸ್ಪಿ ಸಿದ್ಧಾರ್ಥ ಗೋಯಲ್ ಮನವಿ ಮಾಡಿದ್ದಾರೆ.
೨೦ ಪ್ರಕರಣಗಳಲ್ಲಿ ೮ ಜನರ ಬಂಧನ:
ಜಿಲ್ಲೆಯಲ್ಲಿ ಪೊಲೀಸರು ಮಾದಕ ವಸ್ತುಗಳ ವಿರೋಽ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ೨೦ ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿವೆ.
ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದು, ಮಾದಕ ವಸ್ತುಗಳ ಸರಬರಾಜು/ ಮಾರಾಟ/ಸೇವನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕೈಗೊಂಡು ೨೦ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣಗಳಿಗೆ ಸಂಬAಽಸಿದAತೆ ೮ ಜನ ಆರೋಪಿಗಳನ್ನು ಬಂಽಸಲಾಗಿದೆ. ಒಟ್ಟು ೨.೨೭ ಲಕ್ಷ ರೂ. ಮೌಲ್ಯದ ೨.೮೬೪ ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಶಿಕ್ಷಣ ಸಂಸ್ಥೆಗಳಲ್ಲಿ ನಾರ್ಕೋಟಿಕ್ಸ್ ಶ್ವಾನದಳ ಹಾಗೂ ತಂತ್ರಜ್ಞಾನ ಆಧಾರಿತ ನಿಗಾ ವ್ಯವಸ್ಥೆ ಜಾರಿ ಮಾಡಿ ವಿದ್ಯಾರ್ಥಿಗಳು ಹಾಗೂ ಯುವಜನರನ್ನು ರಕ್ಷಿಸಲು ಕಠಿಣ ಕಾನೂನು ಕ್ರಮಗಳ ಜೊತೆಗೆ ಇದನ್ನು ತಡೆಗಟ್ಟುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಪಿ ಸಿದ್ಧಾರ್ಥ ಗೋಯಲ್ ಹೇಳುತ್ತಾರೆ.