ಬಾಗಲಕೋಟೆ ಜಿಪಂ ಸಭಾಭವನದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಪಂ ಆಡಳಿತಾಽಕಾರಿ ಮೊಹಮ್ಮದ ಮೊಹಿಸಿನ್ ಅಧ್ಯಕ್ಷತೆಯಲ್ಲಿ ಜಿಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಜಿಲ್ಲಾಽಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಎಸ್ಪಿ ಸಿದ್ಧಾರ್ಥ ಬಾಲೆ ಹಾಗೂ ಇತರೆ ಅಽಕಾರಿಗಳು ಇದ್ದರು.
ಬಾಗಲಕೋಟೆ: ಬರೀ ಕಚೇರಿಯಲ್ಲೆ ಕುಳಿತು ಕರ್ತವ್ಯ ಮುಗಿಸದೇ ಪ್ರತಿ ತಿಂಗಳು ಎಲ್ಲ ತಾಲೂಕುಗಳಿಗೆ ಪ್ರವಾಸ ಮಾಡಿ, ಅಲ್ಲಿನ ಇಲಾಖೆ ಕಾರ್ಯ ಹೇಗೆ ನಡೆದಿದೆ? ಸಾರ್ವಜನಿಕರಿಗೆ ಸ್ಪಂದನೆ ಆಗುತ್ತಿದೆಯಾ? ಯೋಜನೆ ಅನುಷ್ಠಾನ ಹೇಗಿದೆ? ಎನ್ನುವ ಕುರಿತು ಪರಿಶೀಲಿಸಿ ಅಗತ್ಯ ಸಲಹೆ, ಸೂಚನೆ ನೀಡಿ. ಅದನ್ನು ಬಿಟ್ಟು ಸಭೆಗಳಿಗೆ ಬರೀ ಅಂಕಿ, ಅಂಶಗಳ ಜೊತೆ ಬರುವುದು ಬೇಡ ಎಂದು ವಿವಿಧ ಇಲಾಖೆ ಅಽಕಾರಿಗಳು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೊಹಿಸಿನ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ಜಿಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳ ಪ್ರಗತಿ ಅವಲೋಕಿಸಿತ್ತು ಮಾತನಾಡಿದರು.
ಆಯುಷ್ ಇಲಾಖೆ ಅಽಕಾರಿ ಜಿಲ್ಲೆಯಲ್ಲಿ ಇರುವ ಆಸ್ಪತ್ರೆ, ಹೆಲ್ತ್ ಆ್ಯಂಡ್ ವೆಲ್ನಸ್ ಸೆಂಟರ್, ಕಟ್ಟಡಗಳ ಬಗ್ಗೆ ಅಂಕಿ ಅಂಶಗಳನ್ನು ಸಭೆಯ ಮುಂದಿಟ್ಟಾಗ, ಬರೀ ಇದನ್ನೆ ಹೇಳೋದರಲ್ಲರೀ, ಪ್ರತಿ ತಾಲೂಕಿನ ಆಸ್ಪತ್ರೆ, ಸೆಂಟರ್‌ಗಳಲ್ಲಿ ಪ್ರತಿ ನಿತ್ಯ ಒಳರೋಗಿಗಳು, ಹೊರರೋಗಿಗಳ ಎಷ್ಟು ಇದ್ದಾರೆ? ಯಾವ ತಾಲೂಕಿನ ಆಸ್ಪತ್ರೆಗೆ ಯಾವಾಗ ಭೇಟಿ ನೀಡಿದ್ದೀರಿ? ನೀವು ತೆರಳಿದಾಗ ಆಸ್ಪತ್ರೆಯಲ್ಲಿ ಕಂಡು ಬಂದಿದ್ದೇನು? ಅಲ್ಲಿನ ಸಮಸ್ಯೆಗಳೇನು? ಸೌಲಭ್ಯಗಳೇನು ಈ ಬಗ್ಗೆ ಮಾಹಿತಿ ನೀಡಿ. ಬರೀ ಕಟ್ಟಡ, ಅನುದಾನ ಇಷ್ಟೆ ಹೇಳಿ ಹೋಗೋದಲ್ಲ. ನಿಮ್ಮ ಇಲಾಖೆಯ ಆಗುಹೋಗುಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಮೊಹಿಸಿನ್ ಅವರು ಸ್ಪಷ್ಟವಾಗಿ ಹೇಳಿದರು. ಹಾಗೆಯೇ ವಿವಿಧ ಇಲಾಖೆಗಳ ಅಽಕಾರಿಗಳಿಗೂ ಇದೇ ರೀತಿ ಶಾಂತವಾಗಿಯೇ ಚಾಟಿ ಬೀಸಿದರು.
ಯಾವುದೇ ಯೋಜನೆ ಅಥವಾ ಕಾಮಗಾರಿಗಳು ಅನಗತ್ಯವಾಗಿ ವಿಳಂಬವಾಗದAತೆ ನೋಡಿಕೊಂಡು ಗುರಿ ಸಾಧನೆಗೆ ಕ್ರಮವಹಿಸಕು. ಅಽಕಾರಿಗಳು ನಿಗಽತ ಗುರಿಗಳನ್ನು ಕಡ್ಡಾಯವಾಗಿ ಸಾಽಸಬೇಕು. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ತಲುಪುವಂತೆ ಅಽಕಾರಿಗಳು ಕ್ಷೇತ್ರಮಟ್ಟದಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಗುರಿ ಸಾಧನೆಯಲ್ಲಿ ಹಿಂದುಳಿದ ಇಲಾಖೆಗಳು ತಕ್ಷಣ ಕಾರ್ಯಯೋಜನೆ ರೂಪಿಸಿ ಪ್ರಗತಿ ಸಾಽಸಬೇಕು ಎಂದರು.
ಈಗಲಾದರೂ ಸರಿಯಾಗಿ ಕೆಲಸ ಮಾಡಿ ; ಡಿಎಚ್‌ಒಗೆ ಸೂಚನೆ
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ನಿನ್ನೆಯಷ್ಟೆ ಡಿಎಚ್‌ಒ ಹುದ್ದೆ ವಹಿಸಿಕೊಂಡಿರುವ ಡಾ.ರಾಜಕುಮಾರ ಯರಗಲ್ಲ ಅವರು ಮಾಹಿತಿ ನೀಡುವ ವೇಳೆ, ಸಭೆಯ ಅಧ್ಯಕ್ಷ ಮೊಹಿಸಿನ್ ಅವರು, ಸಭೆಗೆ ಬರುವ ಮುನ್ನ ಮಾಹಿತಿ ತರಬೇಕು. ಸುಮ್ಮನೆ ಬರಬಾರದು. ಇಲಾಖೆಯಲ್ಲಿ ಅನೇಕ ಯೋಜನೆಗಳು ನಿರೀಕ್ಷಿತ ಗುರಿ ತಲುಪಿಲ್ಲ ಎಂದು ಕ್ಲಾಸ್ ತೆಗೆದುಕೊಳ್ಳಲು ಆರಂಭಿಸಿದರು. ಆಗ ಯರಗಲ್ಲ ಅವರು, ಎಲ್ಲವನ್ನು ಗಮನಿಸುತ್ತೇನೆ, ನಾನು ನಿನ್ನೆಯಷ್ಟೆ ಹುದ್ದೆ ವಹಿಸಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಔಷಽಗಳು ಮತ್ತು ಅಗತ್ಯ ಸೌಲಭ್ಯಗಳ ಲಭ್ಯತೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ತಾಯಿ-ಮಗು ಆರೋಗ್ಯ, ಲಸಿಕಾ ಕಾರ್ಯಕ್ರಮ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಹಾವು ಕಡಿತದ ಪ್ರಕರಣಗಳಿಗೆ ತಕ್ಷಣ ಚಿಕಿತ್ಸೆ ದೊರೆತು ಮರಣ ಪ್ರಮಾಣ ಕಡಿಮೆಯಾಗಬೇಕು. ಜಿಲ್ಲೆಯಲ್ಲಿ ಔಷಧ ಕೊರತೆ ಇದೆಯಾ ಎಂದಾಗ, ಜಿಲ್ಲೆಯಲ್ಲಿ ಯಾವುದೇ ಔಷಧ ಸಮಸ್ಯೆ ಇಲ್ಲ ಎಂದು ಡಿಎಚ್‌ಒ ತಿಳಿಸಿದರು.
ಈ ಮಧ್ಯ ಜಿಪಂ ಸಿಇಒ ಗಜಾನನ ಬಾಲೆ ಅವರು, ಡಿಎಚ್‌ಒ ಡಾ.ಯರಗಲ್ಲ ಅವರಿಗೆ ಆಯ್ತು, ಆಯ್ತು... ಈ ಸಲವಾದರೂ ಸರಿಯಾಗಿ ಕೆಲಸ ಮಾಡಿಕೊಂಡು ಹೋಗಿ ಎಂದು ಎಚ್ಚರಿಸಿದ್ದು ನಡೆಯಿತು.
ಸಭೆಯಲ್ಲಿ ಜಿಲ್ಲಾಽಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಕಾರಿ ಸ್ವಪ್ನಿಲ್ ಅಹೀರೆ, ಜಿಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಜಿಪಂ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ ಉಕ್ಕಲಿ, ಮುಖ್ಯ ಯೋಜನಾಽಕಾರಿ ಅಲ್ಲಮಪ್ರಭು ಅಲ್ಲಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.