ಮಹಾಲಿಂಗಪುರ ಬಿಜೆಪಿ ವತಿಯಿಂದ ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸುವ ಮುನ್ನ ಮನವಿಪತ್ರ ಪ್ರದರ್ಶಿಸಿದರು. ಬಿಜೆಪಿ ಮುಖಂಡರಾದ ಶಂಕರಗೌಡ ಪಾಟೀಲ, ಮಲ್ಲು ದಲಾಲ, ಜಿ.ಎಸ್. ಗೊಂಬಿ ಇತರರಿದ್ದರು.
- ಯುವ ಮೋರ್ಚಾ ಅಧ್ಯಕ್ಷ ಮಲ್ಲು ದಲಾಲ ಆಗ್ರಹ
- ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ಮನವಿ
ಮಹಾಲಿಂಗಪುರ: ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ವಿಷ ಸರ್ಪವಿದ್ದಂತೆ ಅವರನ್ನು ಕೊಲ್ಲದಿದ್ದರೆ ನೀವು ಬದುಕುವುದಿಲ್ಲ ಎಂಬ ಹೇಳಿಕೆ ನೀಡಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸದಸ್ಯರನ್ನು ಕೊಲ್ಲಲು ಮುಸಲ್ಮಾನರನ್ನು ಪ್ರಚೋದಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಲ್ಲು ದಲಾಲ ಆಗ್ರಹಿಸಿದರು.
ಪಟ್ಟಣದಲ್ಲಿ ಬಿಜೆಪಿ ಮುಖಂಡರು, ಯುವ ಮೋರ್ಚಾ ಮತ್ತು ನಗರ ಘಟಕದ ವತಿಯಿಂದ ಇತ್ತೀಚೆಗೆ ಪ್ರತಿಭಟನೆ ನಡೆಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವ ಖರ್ಗೆಯವರು ಪ್ರಚೋದನಕಾರಿ ಭಾಷಣಮಾಡಿ ದೇಶದಲ್ಲಿರುವ ಲಕ್ಷಾಂತರ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಜೀವಕ್ಕೆ ಅಪಾಯ ತಂದಿದ್ದಾರೆ. ಧಾರ್ಮಿಕ ಮತ್ತು ಸಮುದಾಯಗಳ ನಡುವಿನ ಸೌಹಾರ್ದತೆಗೆ ಭಂಗ ತರುವ ಮತ್ತು ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆ ನೀಡಿದ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು
ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿದರು.
ಬಿಜೆಪಿ ಮುಖಂಡರಾದ ಜಿ.ಎಸ್. ಗೊಂಬಿ, ಚನ್ನಪ್ಪ ಪಟ್ಟಣಶೆಟ್ಟಿ, ಗುರುಪಾದ ಅಂಬಿ, ಚನ್ನಬಸು ಯರಗಟ್ಟಿ, ಮಹೇಶ ಮುಕುಂದ, ವಿಜಯ ಸಬಕಾಳೆ, ಮಹಾಲಿಂಗಪ್ಪ ಕಂಠಿ, ನಾಗಪ್ಪ ಖೋತ, ಶಿವನಗೌಡ ಪಾಟೀಲ, ಜಗದೀಶ ಜಕ್ಕನ್ನವರ, ಶೇಖರ ಮಗದುಮ್, ಮಹೇಶ ಜಿಡ್ಡಿಮನಿ, ಮಹೇಶ ಚಿಂಚಲಿ, ಮಹಾದೇವ ಸಾವಂತ, ಮಹಾಲಿಂಗ ಬುದ್ನಿ, ವೀರೇಶ ಮುಂಡಗನೂರ ಇತರರಿದ್ದರು.