ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಡಿ.ಎನ್. ಮಂಜುನಾಥ
- ಡಿಎಚ್‌ಒ ಮಂಜುನಾಥ್ ಹೇಳಿಕೆ
- ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ
- ವೈದ್ಯಾಧಿಕಾರಿ ಬಿಡುಗಡೆ, ಇನ್ನರ‍್ವರ ನೇಮಕ
ಕಲಾದಗಿ: ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಬದಲು ವೈದ್ಯರ ಪತ್ನಿಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಸರ‍್ವಜನಿಕರ ಆರೋಪದ ಹಿನ್ನೆಲೆ ಆರೋಪಿತ ವೈದ್ಯಾಧಿಕಾರಿ ಡಾ. ಎಚ್.ವಿ. ಲೇಬಗೇರಿಯನ್ನು ಈ ಸ್ಥಳದಿಂದ ಬಿಡುಗಡೆಗೊಳಿಸಲಾಗಿದ್ದು, ಅವರ ಬದಲಿಗೆ ಈ ಹಿಂದೆ ಸೇವೆ ಸಲ್ಲಿಸಿದ್ದ ಡಾ. ಅನೀಲ ಬದ್ನೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ. ಡಿ.ಎನ್. ಮಂಜುನಾಥ ತಿಳಿಸಿದ್ದಾರೆ.
ಗುರುವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂರ‍್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ನಡೆದಿರುವುದು ನಿಜಕ್ಕೂ ಸಲ್ಲದ ಬೆಳವಣಿಗೆ ಆಗಿದ್ದು, ಈಗಾಗಲೇ ಡಾ. ಲೇಬಗೇರಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅದಕ್ಕೆ ಉತ್ತರ ಬಂದ ನಂತರ ಅದನ್ನು ಆಧರಿಸಿ ಹಾಗೂ ಇಲ್ಲಿನ ಸಿಬ್ಬಂದಿ ಹೇಳಿಕೆ ಆಧರಿಸಿ ವರದಿಯನ್ನು ಆಯುಕ್ತರಿಗೆ ಮುಂದಿನ ಕ್ರಮಕ್ಕಾಗಿ ಕಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಹಿಳೆ ಮೇಲೆಯೂ ಕ್ರಮ
ಡಾ. ಲೇಬಗಿರಿ ಅವರಿಂದ ನೋಟಿಸ್‌ಗೆ ಉತ್ತರ ಬಂದ ನಂತರ ಪರಿಶೀಲನೆ ಬಳಿಕ ಚಿಕಿತ್ಸೆ ನೀಡಿರುವ ವೈದ್ಯರ ಪತ್ನಿ ಮೇಲೆ ಪೊಲೀಸ್ ಕ್ರಮಕ್ಕೆ ಖಂಡಿತವಾಗಿ ಮುಂದಾಗಲಾಗುವುದು. ಡಾ. ಲೇಬಗೇರಿ ಅವರ ಆರೋಗ್ಯ ಸರಿಯಿಲ್ಲ. ಹೀಗಾಗಿ ಅವರ ಪತ್ನಿ ಚಿಕಿತ್ಸೆ ನೀಡುತ್ತಿದ್ದಾಳೆ ಎನ್ನುವ ವಿಷಯ ಗಮನಕ್ಕೆ ಬಂದಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಕಲ್ ಬರ‍್ಡ್ಯಿದ್ದು ಅದರ ಮೂಲಕ ಅವರ ಆರೋಗ್ಯವನ್ನು ಪರೀಕ್ಷೆ ಮಾಡಿಸಲಾಗುವುದು. ಆ ವರದಿ ಬಳಿಕ ಮುಂದಿನ ನರ‍್ಧಾರ ಮಾಡಲಾಗುವುದು ತಿಳಿಸಿದರು.
ಬಾಗಲಕೋಟೆ ತಾಲೂಕು ವೈದ್ಯಾಧಿಕಾರಿ ಡಾ. ಸರಸ್ವತಿ ಮಾಗಿ ಇದ್ದರು.