ತೇರದಾಳದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಆಯೋಜಿಸಿದ ಡಿಜಿಐ ಸ್ಕಾಲರ್‌ಸಿಪ್ ಟೆಸ್ಟ್ -2026 ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಸಮರ್ಥ ಚಿಕ್ಕಲಕಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಾಚಾರ್ಯ ಡಾ.ಪಿ.ಬಿ.ಅಪರಾಜ್, ಪ್ರಕಾಶ ಮಾಳಿ ಇತರರಿದ್ದರು. 
ಬಾಗಲಕೋಟೆ

ಡಿಜಿಐ ಸ್ಕಾಲರ್‌ಸಿಪ್ ಸ್ಪರ್ಧಾತ್ಮಕ ಪರೀಕ್ಷೆ

ತೇರದಾಳ: ಪಟ್ಟಣದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಡಿಜಿಐ ಸ್ಕಾಲರ್‌ಸಿಪ್ ಟೆಸ್ಟ್-2026 ಸ್ಪರ್ಧಾತ್ಮಕ ಪರೀಕ್ಷೆ ಜರುಗಿತು.
ದಾನಿಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಪಿ.ಬಿ ಅಪರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರಾಜ್ಯ-ರಾಷ್ಟ್ರಮಟ್ಟದ ಹೈಟೆಕ್ ಕ್ಯಾಂಪಸ್ ಒಳಗೊಂಡಿದೆ. ಮಗುವಿನ ಸರ್ವಾಂಗೀಣ ಬೆಳವಣಿಗೆಗಾಗಿ ಬೇಕಾಗುವ ಮೂಲ ಸೌಲಭ್ಯಗಳನ್ನು ಇಲ್ಲಿ ಕೊಡ ಮಾಡಲಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೂ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಹೇಳಿದರು.
ವಿವಿಧ ಸ್ಥಳಗಳಿಂದ ಆಗಮಿಸಿದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮುಧೋಳದ ಸಮರ್ಥ ಚಿಕ್ಕಲಕಿ (ಪ್ರಥಮ), ಕಾತರಕಿಯ ಸಿಂಚನಾ ಹೊನ್ನಾಳಿ (ದ್ವಿತೀಯ) ಹಾಗೂ ತೇರದಾಳದ ಸೃಜನಾ ಜೈನ್(ತೃತೀಯ) ಸ್ಥಾನ ಪಡೆದುಕೊಂಡರು.
ಪ.ಪೂ ಪ್ರಾಚಾರ್ಯ ಪ್ರಕಾಶ ಮಾಳಿ, ಶಿವು, ಬಿ.ಬಿ.ಘಟನಟ್ಟಿ ಇತರರಿದ್ದದರು.