ಕೆರೂರ ಪಟ್ಟಣದ ಗ್ರಾಮ ದೇವತೆಗಳಾದದ್ಯಾಮ್ಮವ್ವಾ ಹಾಗೂ ದುರ್ಗಮ್ಮ ದೇವಿಯ ರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.
- ಕೆರೂರಲ್ಲಿ ಗ್ರಾಮ ದೇವಿ
- ರಥೋತ್ಸವ ಸಂಭ್ರಮ
ಕೆರೂರ: ಪಟ್ಟಣದ ಗ್ರಾಮ ದೇವತೆಯರಾದ ದ್ಯಾಮ್ಮವ್ವಾ ಹಾಗೂ ದುರ್ಗಮ್ಮ ದೇವಿಯ ಮಹಾ ರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ಒಂಬತ್ತು ವರ್ಷಗಳ ಬಳಿಕ ನಡೆದ ರಥೋತ್ಸವದಲ್ಲಿ ಭಕ್ತರು ಭಂಡಾರ ಎರಚಿ ಭಕ್ತಿ ಭಾವ ವ್ಯಕ್ತಪಡಿಸಿದ್ದು, ಸಂಭ್ರಮದ ವಾತಾವರಣ ನಿರ್ಮಾಣವಾಯಿತು.
ಬೆಳಗ್ಗೆ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಂಜೆ 5.30ಕ್ಕೆ ದೇವಿಯರನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥವು ರಾಜಬೀದಿಗಳಲ್ಲಿ ಸಂಚರಿಸುವ ವೇಳೆ ಭಕ್ತರು ಉಡಿ ತುಂಬಿ ದರ್ಶನ ಪಡೆದು ಜೈಕಾರ ಹಾಕುತ್ತಾ ರಥವನ್ನು ಎಳೆದರು.
ರಾಷ್ಟ್ರೀಯ ಹೆದ್ದಾರಿಯಲ್ಲೂ ಭಕ್ತರ ದೊಡ್ಡ ಸಮೂಹ ನೆರೆದಿದ್ದು, ಎಲ್ಲ ವಯೋಮಾನದ ಜನರು ಉತ್ಸಾಹದಿಂದ ಪಾಲ್ಗೊಂಡರು. ಬೇಸಿಗೆ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಾರ್ಗಗಳ ಸ್ವಚ್ಛತೆ ಕೈಗೊಳ್ಳಲಾಗಿತ್ತು. ಜೊತೆಗೆ ಜಾತ್ರೆಯ ಅಂಗವಾಗಿ ಮುಖ್ಯ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಉತ್ಸವದ ಸೊಬಗು ಹೆಚ್ಚಿಸಿತು.
ಹಿರಿಯರು, ಯುವಕರು, ಮಹಿಳೆಯರು ಹಾಗೂ ಪರ ಊರಿನಿಂದ ಬಂದ ಭಕ್ತರು ಪರಸ್ಪರ ಭಂಡಾರ ಎರಚಿ ಜಾತ್ರೆಯನ್ನು ಸಂಭ್ರಮಿಸಿದರು.