ಬಾದಾಮಿ ಸಮೀಪದ ಬನಶಂಕರಿಯಲ್ಲಿ ಅಖಿಲ ಭಾರತ ದೇವಾಂಗ (ನೇಕಾರ) ಜಾಗೃತಿ ಸಮಾವೇಶ ಸಮಾರಂಭ ಕುರಿತು ರವೀಂದ್ರ ಕಲಬುರ್ಗಿ ಮಾಹಿತಿ ನೀಡಿದರು. ಹಂಪಿ ಹೇಮಕೂಟದ ದಯಾನಂದಪುರಿ ಮಹಾಸ್ವಾಮಿಗಳು, ಸಿ.ಎಲ್. ಧನಪಾಲ್, ಟಿ. ರಾಜೇಶ, ಎಚ್. ಪರಮೇಶ್ವರಪ್ಪ ಇತರರಿದ್ದರು.
- ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾಹಿತಿ
- ಸಿದ್ಧತೆಗಳ ಪರಿಶೀಲನೆ
- ದಯಾನಂದಪುರಿ ಮಹಾಸ್ವಾಮೀಜಿ 36ನೇ ಪಟ್ಟಾಭಿಷೇಕ
ಬಾದಾಮಿ: ಸಮೀಪದ ಬನಶಂಕರಿಯಲ್ಲಿ ಅಖಿಲ ಭಾರತ ದೇವಾಂಗ(ನೇಕಾರ) ಜಾಗೃತಿ ಸಮಾವೇಶ-2026, ದಯಾನಂದಪುರಿ ಮಹಾಸ್ವಾಮಿಜಿಯವರ 36ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭ ಮೇ 8, 9ರಂದು ಜರುಗಲಿದೆ.
ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅಖಿಲ ಭಾರತ ದೇವಾಂಗ (ನೇಕಾರ) ಜಾಗೃತಿ ಸಮಾವೇಶದ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಸಮಾಜದ ಸಂಘಟನೆ, ಜಾಗೃತಿ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಎಲ್ಲ ರಂಗಗಳಲ್ಲಿ ಸಮಾಜ ಬಾಂಧವರು ಸಂಘಟಿತರಾಗಬೇಕಿದೆ ಎಂದು ತಿಳಿಸಿದರು.
ಮೇ 8ರಂದು ಬೆಳಗ್ಗೆ 5ಕ್ಕೆ ಬನಶಂಕರಿದೇವಿಗೆ ಅಭಿಷೇಕ, 6ಕ್ಕೆ ಸಣ್ಣಕ್ಕಿ ಬಾಗೂರು ಬನಶಂಕರಿದೇವಿ ಉತ್ಸವ ಮೂರ್ತಿ ಆಹ್ವಾನದೊಂದಿಗೆ ಚೌಡೇಶ್ವರಿ ದೇವಿ ಕತ್ತಿ ಹಬ್ಬದ ಉದ್ಘಾಟನೆಯನ್ನು ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಭೀಮಸೇನ ಚಿಮ್ಮನಕಟ್ಟಿ ನೆರವೇರಿಸುವರು.
ಮಧ್ಯಾಹ್ನ 12ಕ್ಕೆ ವೇದಿಕೆ ಕಾರ್ಯಕ್ರಮಗಳು ಆರಂಭವಾಗುತ್ತವೆ. ದಯಾನಂದಪುರಿ ಶ್ರೀಗಳು, ಬಸವರಾಜ ಪಟ್ಟದಾರ್ಯ ಶ್ರೀಗಳು ಸೇರಿ ಆರು ಜನ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ವಚನಕಾರ ದೇವರದಾಸಿಮಯ್ಯನವರ ಇಂಗ್ಲಿಷ್ ವಚನಗಳ ಕೃತಿ ಬಿಡುಗಡೆ ಮಾಡುವರು. ಬಿಜೆಪಿ ಅಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಅವರು ದಾಸೋಹ ಭವನ 1 ಮತ್ತು 2ನೇ ಮಹಡಿ ಉದ್ಘಾಟಿಸುವರು. ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿಯವರು ದಾನಿಗಳನ್ನು ಸನ್ಮಾನಿಸುವರು. ರಾಜ್ಯಸಭಾ ಸದಸ್ಯ ಕೆ. ನಾರಾಯಣ್ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
ಬನಶಂಕರಿ ಹತ್ತಿರದ ಜಾಗದಲ್ಲಿ ಭವ್ಯ ಪೆಂಡಾಲ್ ಹಾಕಲಾಗಿದೆ. ಸುಮಾರು 60 ರಿಂದ 70 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಭಾಗವಹಿಸಿದ ಎಲ್ಲರಿಗೂ ಉಪಾಹಾರ, ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಭರದ ಸಿದ್ಧತೆ ನಡೆದಿದೆ ಎಂದು ಸಮಿತಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾಹಿತಿ ನೀಡಿದರು.
ಹಂಪಿ ಹೇಮಕೂಟದ ದಯಾನಂದಪುರಿ ಮಹಾಸ್ವಾಮಿಗಳು, ಸಿ.ಎಲ್. ಧನಪಾಲ್, ಟಿ. ರಾಜೇಶ, ಎಚ್. ಪರಮೇಶ್ವರಪ್ಪ, ಕೆ.ಸಿ. ತಿಮ್ಮಶೆಟ್ಟಿ, ಸಂಕಣ್ಣ ಕರಡಿಗುಡ್ಡ, ಟಿ.ಆರ್. ಉಮಾಪತಿ, ಚುಡಾಮಣಿ ಕೇಶವಮೂರ್ತಿ, ಕುಮಾರ ಶೇಬಿನಕಟ್ಟಿ, ಮಹೇಶ ಶೇಬಿನಕಟ್ಟಿ, ಗವಿರಂಗಯ್ಯ, ಶ್ರೀಧರ ದೇವಾಂಗ, ಸತೀಶ ಸಪ್ಪರದ ಇತರರಿದ್ದರು.