ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಕೃಷಿ, ತೋಟಗಾರಿಕೆ ಇಲಾಖೆ ಅಽಕಾರಿಗಳ ಜೊತೆ ಭೇಟಿ ನೀಡಿದ ಜಿಲ್ಲಾಽಕಾರಿ ಸಂಗಪ್ಪ ಅವರು ಬೆಳೆಹಾನಿ ವೀಕ್ಷಿಸಿದರು. 
ಬಾಗಲಕೋಟೆ

ಜಿಲ್ಲೆಯ ವಿವಿಧೆಡೆ ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ವೀಕ್ಷಣೆ

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಜಿಲ್ಲಾಽಕಾರಿ ಸಂಗಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು.

ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಽಕಾರಿಗಳೊಂದಿಗೆ ಬಾಗಲಕೋಟೆ ತಾಲೂಕಿನ ಶಿರೂರ ವ್ಯಾಪ್ತಿಯಲ್ಲಿ ಬರುವ ಸಿದ್ದಪ್ಪ ಹರಣಶಿಕಾರಿ ಅವರ ಜಮೀನಿನಲ್ಲಿ ಬೆಳೆದ ಹೆಸರು, ಗುಳೇದಗುಡ್ಡ ತಾಲೂಕಾ ವ್ಯಾಪ್ತಿಯ ಬೂದನಗಡ ಗ್ರಾಮದ ಚಂದ್ರಶೇಖರ ಲಾಯದಗುಂದಿ ಅವರ ಜಮೀನಿನಲ್ಲಿ ಬೆಳೆಯಲಾದ ಸೂರ್ಯಕಾಂತಿ ಬೆಳೆ, ರಾಯಪ್ಪ ನಿಂಬಲಗುAದಿಯವರು ಬೆಳೆದ ತೊಗರಿ ಬೆಳೆ ಹಾಗೂ ಪಾದನಕಟ್ಟಿ ಗ್ರಾಮದ ಬಸಪ್ಪ ಕಾಳಪ್ಪ ಕುಂಬಾರ ಅವರ ತೊಗರಿ ಬೆಳೆ ಹಾಗೂ ಶ್ರೀಕಾಂತ ಭೀಮನಗಡ ಅವರು ಬೆಳೆದ ಸೂರ್ಯಕಾಂತಿ ಬೆಳೆಗಳನ್ನು ವೀಕ್ಷಣೆ ಮಾಡಿದರು.
ಕ್ಷೇತ್ರ ಭೇಟಿ ಸಂದರ್ಭದಲ್ಲಿ ಮಳೆಯ ಅಭಾವದಿಂದ ಹಾನಿಗೊಳಗಾಗುತ್ತಿರುವ ಬೆಳೆಗಳನ್ನು ಪರಿಶೀಲಿಸಿ ಹಾನಿಯ ಪ್ರಮಾಣವನ್ನು ವೀಕ್ಷಿಸಿದರು. ಈ ವೇಳೆ ರೈತರು ಎದುರುಸುತ್ತಿರುವ ಸಮಸ್ಯೆಗಳು ಹಾಗೂ ಬೆಳೆ ನಷ್ಟದ ಕುರಿತು ಮಾಹಿತಿ ಪಡೆದುಕೊಂಡರು. ಬೆಳೆ ಹಾನಿ ಮಾಹಿತಿ ದಾಖಲಿಸಿಕೊಂಡ ಜಿಲ್ಲಾಽಕಾರಿಗಳು ವಾಸ್ತವ ಸ್ಥಿತಿಗತಿಗಳ ಕುರಿತು ಸ್ಥಳದಲ್ಲಿದ್ದ ಇನ್ಸೂರೆನ್ಸ್ ಕಂಪನಿಯ ಪ್ರತಿನಿಽಗಳಿಗೆ ತಿಳಿಸಿದರು. ರೈತರಿಗೆ ಸಿಗಬೇಕಾದ ನೆರವು ಹಾಗೂ ಪರಿಹಾರ ಕ್ರಮಗಳ ಕುರಿತು ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಹೇಳಿದರು.
ಹುನಗುಂದ ತಾಲೂಕಿನ ಪ್ರಯಾಣ ಬೆಳೆಸಿದ ಜಿಲ್ಲಾಽಕಾರಿಗಳು ರಕ್ಕಸಗಿ ಗ್ರಾಮ ವ್ಯಾಪ್ತಿಯ ಬೆಳೆಹಾನಿಗೊಳಗಾದ ಹೆಸರು, ತೊಗರಿ ಹಾಗೂ ಸೂಳೆಭಾವಿ ಗ್ರಾಮ ವ್ಯಾಪ್ತಿಯ ವಿವಿಧ ಜಮೀನುಗಳಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾನಿಗೊಳಗಾದ ತೊಗರಿ ಬೆಳೆಯನ್ನು ವೀಕ್ಷಣೆ ಮಾಡಿ, ರೈತರಿಂದ ನೇರವಾಗಿ ಸಮಸ್ಯೆಗಳನ್ನು ಆಲಿಸಿದರು. ರೈತರಿಗೆ ಬೇಕಾದ ಕಂಪನಿಗಳ ಬಿತ್ತನೆ ಬೀಜಗಳು ಆರ್.ಎಸ್.ಕೆ.ಗಳನ್ನು ಸಮಯಕ್ಕೆ ಸರಿಯಾಗಿ ದೊರೆಯುತ್ತಿಲ್ಲ. ಇದರಿಂದ ಹೆಚ್ಚಿನ ಬೆಳೆಗೆ ಖಾಸಗಿ ಮಾರಾಟಗಾರರಿಂದ ಪಡೆಯಬೇಕಾಗುತ್ತದೆ ಎಂದು ತಿಳಿಸಿದಾಗ ಸಮಯಕ್ಕೆ ಸರಿಯಾಗಿ ಬೀಜಗಳ ವಿತರಣೆ ಕ್ರಮಕೈಗೊಳ್ಳಲು ಅಽಕಾರಿಗಳಿಗೆ ಜಿಲ್ಲಾಽಕಾರಿಗಳು ಸೂಚಿಸಿದರು.
ಕ್ಷೇತ್ರ ಭೇಟಿ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ಕೃಷಿ ಇಲಾಖೆಯ ಬಾಗಲಕೋಟೆ ವಿಭಾಗದ ಉಪ ನಿರ್ದೇಶಕ ಅಗಸನಾಳ, ಗುಳೇದಗುಡ್ಡ ತಹಸೀಲ್ದಾರ ಶಿವಾನಂದ ಬೊಮ್ಮನ್ನವರ, ಎಸ್.ಬಿ.ಐ ಜನರಲ್ ಇನ್ಸೂರನ್ಸ್ ಕಂಪನಿಯ ಜಿಲ್ಲಾ ವ್ಯವಸ್ಥಾಪಕ ಜನಾರ್ಧನ ತಿವಾರಿ, ಅಮೀನಗಡ ಹೋಬಳಿ ಕಂದಾಯ ನಿರೀಕ್ಷಕ ಡಿ.ಎಸ್,ಯತ್ನಟ್ಟಿ, ಗ್ರಾಮ ಆಡಳಿತಾಽಕಾರಿ ಸಚೀನ ರಾಠೋಡ ಸೇರಿದಂತೆ ಕೃಷಿ, ತೋಟಗಾರಿಕೆ ಇಲಾಖೆಯ ತಾಲೂಕಾ ಮಟ್ಟದ ಅಽಕಾರಿಗಳು ಇದ್ದರು.