ಕಲಾದಗಿ ಪಟ್ಟಣದ ಹಿಂದೂ ಜಾಗರಣ ವೇದಿಕೆ ಕಲಾದಗಿ ಘಟಕ ಹಾಗೂ ಸಕಲ ಸಮಾಜದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹಿಂಜಾವೇ ಪ್ರಮುಖ ಕೃಷ್ಣಾ ಸುಲಾಖೆ ಮಾತನಾಡಿದರು. ಬಶೆಟ್ಟೆಪ್ಪ ಅಂಗಡಿ, ಶ್ರೀಧರ ವಾಘ, ಲಕ್ಷ್ಮಣ ಶಿರಬೂರ, ದಯಾನಂದ ವಾಘ, ಅಜಯ ಕುಲಕರ್ಣಿ, ತಿಮ್ಮಣ್ಣ ಬಟಕುರ್ಕಿ ಇತರರಿದ್ದರು.
- ಹಿಂಜಾವೇ ಪ್ರಮುಖ ಕೃಷ್ಣ ಸುಲಾಖೆ ಆಗ್ರಹ
- ಬಾಗಲಕೋಟೆ ಘಟನೆ ಖಂಡಿಸಿ ಪ್ರತಿಭಟನೆ
- ಸಮನ್ಸ್ ನೀಡಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ
ಕಲಾದಗಿ: ಬಾಗಲಕೋಟೆ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ಎಸೆತದಂತಹ ಘಟನೆಗಳು ಶಾಂತಿಯುತ ಸಮಾಜಕ್ಕೆ ಕಂಟಕವಾಗಿದ್ದು, ಸೆರೆ ಸಿಕ್ಕ ಮುಸ್ಲಿಂ ಕಿಡಿಗೇಡಿ ಆರೋಪಿಗಳನ್ನು ಕೂಡಲೇ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಮುಧೋಳದ ಹಿಂಜಾವೇ ಪ್ರಮುಖ ಕೃಷ್ಣ ಸುಲಾಖೆ ಆಗ್ರಹಿಸಿದರು.
ಪಟ್ಟಣದ ಹಿಂದೂ ಜಾಗರಣ ವೇದಿಕೆ ಕಲಾದಗಿ ಘಟಕ ಹಾಗೂ ಸಕಲ ಸಮಾಜದ ನೇತೃತ್ವದಲ್ಲಿ ಗ್ರಾಮದ ರಂಗ ಮಂದಿರದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಡಾ. ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಉಪ ತಹಸೀಲ್ದಾರ್ ಕಾರ್ಯಾಲಯದ ಹತ್ತಿರ ತಲುಪಿತು.
ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ಶಾಂತವಾಗಿದ್ದ ಬಾಗಲಕೋಟೆಯಲ್ಲಿ ಕಲ್ಲೆಸೆತ ಘಟನೆಯಿಂದಾಗಿ ಕೋಮು ಗಲಭೆಗಳು ಸೃಷ್ಟಿಯಾಗುತ್ತಿದ್ದು, ಶಾಂತವಾಗಿ ಸಾಗುತ್ತಿದ್ದ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಎಸೆದ ಕಲ್ಲು ಸ್ವತಃ ಎಸ್ಪಿಯವರಿಗೆ ತಾಗಿದ್ದರೂ ಕೂಡ ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳದೇ ಇರುವುದು ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಹಿಂದೂಗಳು ಸಹಿಷ್ಣುಗಳಾಗಿದ್ದು ಅದರ ದುರುಪಯೋಗ ರಾಜ್ಯದಲ್ಲಿ ಆಗುತ್ತಿದೆ. ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ಅದನ್ನು ಪ್ರತಿಭಟಿಸುವ ನಮ್ಮ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ. ಫೆ. 26ರಂದು ನಡೆಯುವ ಪ್ರತಿಭಟನೆಗೂ ಮುಂಚೆ ನಮ್ಮ ಬೇಡಿಕೆಗಳಾದ ಬಾಗಲಕೋಟೆಯ ಪಂಕಾ ಮಸೀದಿಯ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವುದು, ಅಹಿತಕರ ಘಟನೆಗೆ ಪ್ರಚೋದಿಸಿದ ಮುಸ್ಲಿಂ ಯುವಕರನ್ನು ಗೂಂಡಾ ಕಾಯ್ದೆ ಹಾಕಿ ಗಡಿ ಪಾರು ಸೇರಿ ಈ ಘಟನೆಗೆ ಸಂಬಂದಿಸಿದಂತೆ ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಕೇಸನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ವಿಎಚ್‌ಪಿ ಮುಖಂಡ ವಸಂತ ಮಮದಾಪೂರ, ನಿಂಗಪ್ಪ ಅಗಸರ ಮಾತನಾಡಿ, ಯಾವುದೇ ಸಕಾರಣ ನೀಡದೇ ಹಿಂದೂಪರ ಕಾರ್ಯಕರ್ತರಿಗೆ ನೀಡಿರುವ ನೋಟಿಸ್‌ಗಳನ್ನು ಕೂಡಲೇ ಹಿಂಪಡೆಯಬೇಕೆಂದು ಪೊಲೀಸ್ ಇಲಾಖೆಗೆ ಆಗ್ರಹಿಸಿದರು.
ಉಪ ತಹಸೀಲ್ದಾರ ಆರ್.ಆರ್. ಕುಲಕರ್ಣಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬಶೆಟ್ಟೆಪ್ಪ ಅಂಗಡಿ, ಶ್ರೀಧರ ವಾಘ, ಲಕ್ಷ್ಮಣ ಶಿರಬೂರ, ದಯಾನಂದ ವಾಘ, ಅಜಯ ಕುಲಕರ್ಣಿ, ತಿಮ್ಮಣ್ಣ ಬಟಕುರ್ಕಿ, ಮಂಜುನಾಥ ಬಿಲಕೇರಿ, ರಾಜೇಂದ್ರ ಜಾಧವ, ಯಮನಪ್ಪ ಬೂದಿಹಾಳ, ಭೀಮಶಿ ಕರಡಿಗುಡ್ಡ, ಮಲ್ಲಪ್ಪ ಬಡಿಗೇರ, ಹಣಮಂತ ತಳವಾರ, ಬಸು ಬಡಿಗೇರ, ಭೀಮಣ್ಣ ದಾಸನ್ನವರ, ಸಿದ್ದು ಬಾಲರೆಡ್ಡಿ, ಸದಾಶಿವ ಪೂಜಾರಿ, ನಿಂಗಪ್ಪ ಜಮ್ಮನಕಟ್ಟಿ, ನಾಗರಾಜ ಗಿಡ್ಡಿ, ಅಶೋಕ ವಾಸ್ಟರ, ಹವಳೆಪ್ಪ ಮಾದರ, ತುಳಸಪ್ಪ ತಳವಾರ, ರಾಕೇಶ ಗುಂಜುಟಗಿ ಇದ್ದರು.
ಬಾಗಲಕೋಟೆಯಲ್ಲಿ ಫೆ. 26ರಂದು ಜರುಗುವ ಪ್ರತಿಭಟನೆ ಹಿನ್ನೆಲೆ ಗ್ರಾಮದ ಕೆಲವು ಹಿಂದೂಪರ ಕಾರ್ಯಕರ್ತರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಪೊಲೀಸರು ನೋಟಿಸ್ ಜತೆ ಸಮನ್ಸ್ ನೀಡಿದ್ದರಿಂದ ಹಿಂದೂಪರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.
ಪೊಲೀಸ್ ಠಾಣೆಗೆ ತೆರಳಿದ ಸಮನ್ಸ್ನಲ್ಲಿ ಹೆಸರಿದ್ದ ಹಿಂದೂ ಮುಖಂಡರು ಇದನ್ನು ಪ್ರಶ್ನಿಸುವುದರೊಂದಿಗೆ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಸಂಜೆಯೊಳಗಾಗಿ ನಮಗೆ ನೀಡಿರುವ ಸಮನ್ಸ್ಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲವಾದರೆ ಠಾಣೆ ಮುಂದೆ ಧರಣಿ ಕೂಡಲಾಗುವುದು ಎಂದು ಹಿಂದೂಪರ ಮುಖಂಡರು ಪೊಲೀಸರನ್ನು ಆಗ್ರಹಿಸಿದರು.
ಕಲಾದಗಿ ಪಟ್ಟಣದ ಹಿಂದೂ ಜಾಗರಣ ವೇದಿಕೆ ಕಲಾದಗಿ ಘಟಕ ಹಾಗೂ ಸಕಲ ಸಮಾಜದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹಿಂಜಾವೇ ಪ್ರಮುಖ ಕೃಷ್ಣಾ ಸುಲಾಖೆ ಮಾತನಾಡಿದರು. ಬಶೆಟ್ಟೆಪ್ಪ ಅಂಗಡಿ, ಶ್ರೀಧರ ವಾಘ, ಲಕ್ಷ್ಮಣ ಶಿರಬೂರ, ದಯಾನಂದ ವಾಘ, ಅಜಯ ಕುಲಕರ್ಣಿ, ತಿಮ್ಮಣ್ಣ ಬಟಕುರ್ಕಿ ಇತರರಿದ್ದರು.