ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಸರ್ಕಾರಿ ಆದರ್ಶ ಶಾಲೆಯಲ್ಲಿ ಶಾಲಾ ಸಂಸತ್ ರಚನೆ ಸಂದರ್ಭದಲ್ಲಿ ಪಿಂಕ್ ಬೂತ್ ರಚಿಸಿರುವುದು. 
ಬಾಗಲಕೋಟೆ

ಪ್ರಜಾಪ್ರಭುತ್ವದ ಜಾಗೃತಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರಭಾರಿ ಪ್ರಾಚಾರ್ಯ ಶಂಕರರಾವ ಕುಲಕರ್ಣಿ ಹೇಳಿಕೆ
  • ಶಾಲಾ ಸಂಸತ್ ಚುನಾವಣೆ
  • ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಮುಖ ಪಾತ್ರವಹಿಸುತ್ತಾನೆ.
ಬಾದಾಮಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಮುಖ ಪಾತ್ರವಹಿಸುತ್ತಾನೆ. ಇಂದಿನ ಮಕ್ಕಳೇ ನಾಳಿನ ಮತದಾರರು, ಅವರಿಗೆಲ್ಲ ಶಾಲೆಯಲ್ಲಿ ಮತದಾನದ ಪ್ರಕ್ರಿಯೆ ಜಾಗೃತಿಗೊಳಿಸುವುದು ತುಂಬಾ ಅಗತ್ಯ ಎಂದು ಪ್ರಭಾರಿ ಪ್ರಾಚಾರ್ಯ ಶಂಕರರಾವ ಕುಲಕರ್ಣಿ ಹೇಳಿದರು.
ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಸರ್ಕಾರಿ ಆದರ್ಶ ಶಾಲೆಯಲ್ಲಿ ಮಂಗಳವಾರ ನಡೆದ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಚುನಾವಣೆ ಬಗ್ಗೆ ಮಾತನಾಡಿದರು. ಪ್ರಜಾಪ್ರಭುತ್ವದ ಅಡಿಯಲ್ಲಿ ನಾವೆಲ್ಲ ಇದ್ದೇವೆ ಎನ್ನುವುದು ಮರೆಯಬಾರದು. ಸಂವಿಧಾನ ನಮಗೆ ನೀಡಿರುವ ದೊಡ್ಡ ಕೊಡುಗೆ ಪ್ರಜಾಪ್ರಭುತ್ವ ಅಂತ ಬಣ್ಣಿಸಿದರು.
ಇನ್ನೂ ಮಕ್ಕಳು ಮತದಾನ ಮಾಡುವ ಮೂಲಕ ಶಾಲಾ ಸಂಸತ್ ರಚಿಸಲಾಯಿತು. ಚುನಾವಣೆ ವೇಳಾಪಟ್ಟಿ ಪ್ರಕಟ, ಮತದಾರರ ಪಟ್ಟಿ, ನಾಮಪತ್ರ ಸಲ್ಲಿಸುವಿಕೆ, ಚುನಾವಣೆ ಪ್ರಣಾಳಿಕೆ, ಪ್ರಚಾರ ಹಾಗೂ ಮತಗಟ್ಟೆಗಳಲ್ಲಿ ಮತದಾನ ಮಾಡುವುದನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮುಖಾಂತರ ತಿಳಿಸಿಕೊಡಲಾಯಿತು. ಮತದಾನದ ಸಂಭ್ರಮ ಹಾಗೂ ಅನುಭವವನ್ನು ಮಕ್ಕಳು ಪಡೆದುಕೊಂಡರು.
ಸಿದ್ದು ಕೊರವರ, ಸಂಗಮೇಶ ಉಳ್ಳಾಗಡ್ಡಿ, ಬಸವರಾಜ ಸಿಂದಗಿಮಠ, ಬಿ.ಆರ್. ಚಿಕ್ಕಣ್ಣವರ, ರಮೇಶ ಹಂಜಿ, ರಂಗನಾಥ್ ಇಳಿಗೇರ, ರಮೇಶ ಕತ್ತಿಕೈ, ಭಾಗ್ಯಲಕ್ಷ್ಮೀ ಟಿ.ಎಚ್. ರೇಣುಕಾ ಶಿಸ್ತಗಾರ, ಕೀರ್ತಿ ಬಡಿಗೇರ, ಶ್ರೀನಿವಾಸ ಈಳಗೇರ, ಅಶೋಕ ಪೂಜಾರಿ ರಘುವೀರ ಕೇಶವಸ್ವಾಮಿ, ಪ್ರಭು ನಾಯ್ಕರ, ಎಸ್.ಬಿ.ಮುದೇನಗುಡಿ, ಅನುಪಮಾ ನಾಯ್ಕರ, ದುರ್ಗಾ ಬಿ, ರೂಪ ಎಂ, ಅಕ್ಷತಾ ಹಿರೇಮಠ ಮತ್ತಿತರರು ಇದ್ದರು.