ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಸುಧೀರ ನಡುವಿನಮನಿ, ದುರ್ಗವ್ವ ಹರಿಜನ, ಶಿವಾನಂದ ಬಸಪ್ಪಗೋಳ ಮತ್ತಿತರರಿದ್ದರು.
- 34ನೇ ದಿನಕ್ಕೆ ಕಾಲಿಟ್ಟ ಸರದಿ
- ಸತ್ಯಾಗ್ರಹ ಹೋರಾಟಕ್ಕೆ ಮತ್ತಷ್ಟು ಬಲ
- ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ಮೂಲಕ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು.
ರಬಕವಿ-ಬನಹಟ್ಟಿ: ಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಸರದಿ ಸತ್ಯಾಗ್ರಹ ಮಂಗಳವಾರ 32ನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ದಲಿತ ಸಂಘಟನೆಗಳು ಕೂಡ ಹೋರಾಟಕ್ಕೆ ಬೆಂಬಲ ಘೋಷಿಸುವ ಮೂಲಕ ಹೋರಾಟದ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿದೆ.
ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ಮೂಲಕ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು. ವಿವಿಧ ಸಮಾಜಗಳು, ರೈತರು, ನೇಕಾರರು, ಮಹಿಳೆಯರು ಹಾಗೂ ಸಂಘಟನೆಗಳ ಬಳಿಕ ದಲಿತ ಸಮುದಾಯವೂ ಹೋರಾಟದೊಂದಿಗೆ ಕೈಜೋಡಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಬನಹಟ್ಟಿಯ ಜನರ ಆಡಳಿತಾತ್ಮಕ ಅಗತ್ಯಗಳಿಗೆ ಅನುಕೂಲವಾಗುವಂತೆ ಪ್ರಜಾಸೌಧವನ್ನು ಬನಹಟ್ಟಿಯಲ್ಲಿಯೇ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರುವವರೆಗೆ ಹೋರಾಟ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಹೋರಾಟಗಾರರು ಸ್ಪಷ್ಟಪಡಿಸಿದರು.
ದಲಿತ ಸಮುದಾಯದ ಬೆಂಬಲವೂ ಹೋರಾಟಕ್ಕೆ ದೊರೆತಿರುವುದರಿಂದ ಪ್ರಜಾಸೌಧದ ಬೇಡಿಕೆ ಮತ್ತಷ್ಟು ಪ್ರಬಲವಾಗಿ ಸರ್ಕಾರದ ಗಮನ ಸೆಳೆಯುವಂತಾಗಿದೆ. ಜನರ ಆಡಳಿತಾತ್ಮಕ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ದೊರೆಯಬೇಕಿದ್ದು, ಈ ನಿಟ್ಟಿನಲ್ಲಿ ಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಾಣವಾಗಬೇಕು ಎಂಬುದು ಹೋರಾಟಗಾರರ ಒತ್ತಾಯವಾಗಿದೆ.
ಪ್ರಜಾಸೌಧ ನಿರ್ಮಾಣದ ಬೇಡಿಕೆಗೆ ಎಲ್ಲ ವರ್ಗದ ಜನರಿಂದ ಬೆಂಬಲ ವ್ಯಕ್ತವಾಗುತ್ತಿರುವುದು ಹೋರಾಟದ ಶಕ್ತಿಯನ್ನು ಹೆಚ್ಚಿಸಿದೆ. ಜನರ ಒಗ್ಗಟ್ಟಿನೊಂದಿಗೆ 32 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟ ಇದೀಗ ಪ್ರಮುಖ ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ. -ಸುಧೀರ ನಡುವಿನಮನಿ, ಮಾದಿಗ ಸಮಾಜದ ಮುಖಂಡ
ಟಿಪ್ಪಣ್ಣ ಬಸಪ್ಪಗೋಳ, ಉಮೇಶ ನಡುವಿನಮನಿ, ರೇಣುಕಾ ಮಡ್ಡಿಮನಿ, ದುರ್ಗವ್ವ ಹರಿಜನ, ಮಹಾನಂದಾ ನಡುವಿನಮನಿ, ಸಂಜನಾ ಮಡ್ಡಿಮನಿ, ದುರ್ಗಪ್ಪ ನಡುವಿನಮನಿ, ರಾಜು ನಡುವಿನಮನಿ, ಶಿವಾನಂದ ಬಸಪ್ಪಗೋಳ, ಸಿದ್ದಪ್ಪ ಚಿಕ್ಕೋಡಿ, ಜಗದೀಶ ನಡುವಿನಮನಿ, ಬಾಲು ಮಡ್ಡಿಮನಿ, ರಮೇಶ ಬನಹಟ್ಟಿ, ಯಲ್ಲಪ್ಪ ಚಿಕ್ಕೂಡ, ಶೆಟ್ಟೆಪ್ಪ ಬಸಪ್ಪಗೋಳ, ದುರ್ಗಪ್ಪ ಹರಿಜನ ಸೇರಿ ಹಲವರು ಪಾಲ್ಗೊಂಡಿದ್ದರು.