ಹುನಗುಂದ ವಿಮವಿವ ಸಂಘದ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿದರು. ಡಾ. ಶಿವಶಂಕರ ಮುದಗಲ್, ರಾಚಪ್ಪ ರಾಜಮನಿ ಇತರರಿದ್ದರು.
- ಡಾ. ಮಹಾಂತೇಶ ಕಡಪಟ್ಟಿ ಹೇಳಿಕೆ
- 21ರಂದು ವಿಶ್ವಯೋಗ ದಿನ ಆಚರಣೆ
- ಯೋಗ ಆರೋಗ್ಯಕ್ಕೆ ಪೂರಕವಾಗಿದೆ. ಎಲ್ಲರೂ ಪ್ರತಿನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಂಡು ರೋಗ ಮುಕ್ತರಾಗಬೇಕು
ಹುನಗುಂದ : ಪಟ್ಟಣದ ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ವಿಶ್ವ ಯೋಗ ದಿನಾಚರಣೆ ನಿಮಿತ್ತ ಬೆಳಗ್ಗೆ 6.30ಕ್ಕೆ ಯೋಗಾಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು.
ನಗರದ ವಿಮವಿವ ಸಂಘದ ಕಾರ್ಯಾಲಯದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗ ಆರೋಗ್ಯಕ್ಕೆ ಪೂರಕವಾಗಿದೆ. ಎಲ್ಲರೂ ಪ್ರತಿನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಂಡು ರೋಗ ಮುಕ್ತರಾಗಬೇಕು. ಯೋಗ ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ಅಂಗ ಸಂಸ್ಥೆಗಳ ಶಾಲಾ-ಕಾಲೇಜು ಶಿಕ್ಷಕರು ವಿದ್ಯಾರ್ಥಿಗಳು ನಗರದ ಯುವಕರು, ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ ಎಂದು ಹೇಳಿದರು.
ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಸಂಗಣ್ಣ ಚಿನಿವಾಲರ ಮಾತನಾಡಿ, ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ದೆಹಲಿ ಕಮಾಂಡೋ ಮಹಾಂತೇಶ ಗೌಡರ ಯೋಗಾಭ್ಯಾಸ ಮಾಡಿಸಲಿದ್ದಾರೆ ಎಂದರು.
ಸಂಸ್ಥೆ ನಿರ್ದೇಶಕರಾದ ಡಾ. ಶಿವಶಂಕರ ಮುದಗಲ್, ರಾಚಪ್ಪ ರಾಜಮನಿ, ರಾಮನಗೌಡ ಬೆಳ್ಳಿಹಾಳ, ಮಹಾಂತೇಶ ಕತ್ತಿ, ಈರಣ್ಣ ಬಳೂಟಗಿ, ಪ್ರಾಚಾರ್ಯರಾದ ಎಸ್.ಆರ್. ಗೋಲಗೊಡ, ಎಚ್.ಎಸ್. ಬೋಳಿಶಟ್ಟರ, ಮುಖ್ಯ ಶಿಕ್ಷಕ ಎಸ್.ಸಿ. ರಾಜೂರ, ಆರ್.ವಿ.ಪಾಟೀಲ ಸೇರಿ ಇತರರಿದ್ದರು.