ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ಕಂಬಿ ಮಲ್ಲಯ್ಯನ ಐದೇಶಿ ನಿಮಿತ್ತ ಜರುಗಿದ ನಾಟಕ ಉದ್ಘಾಟನೆ ಸಮಾರಂಭದಲ್ಲಿ ತಾ.ಪಂ. ಮಾಜಿ ಸದಸ್ಯ ಗುರುಪಾದಯ್ಯ ಮರಡಿಮಠ ಮಾತನಾಡಿದರು. ಅಡವಯ್ಯ ಹಿರೇಮಠ, ಹನಮಂತ ಮಗದುಮ್, ಸುಭಾಸ ಕಂಪು ಇತರರಿದ್ದರು. 
ಬಾಗಲಕೋಟೆ

ಮೌಲ್ಯಗಳ ಸಂಕಲನವೇ ಸಂಸ್ಕೃತಿ

ಪ್ರಮುಖ ಮುಖ್ಯಾಂಶಗಳು

  • ಗುರುಪಾದಯ್ಯ ಮರಡಿಮಠ ಹೇಳಿಕೆ
  • ನಾಟಕ ಉದ್ಘಾಟನೆ ಸಮಾರಂಭ
  • ಆಧುನಿಕ ಯುಗದಲ್ಲಿ ನಾಟಕ ಕಲೆಯನ್ನು ಉಳಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ
ರಬಕವಿ/ಬನಹಟ್ಟಿ: ಆಧುನಿಕ ಯುಗದಲ್ಲಿ ನಾಟಕ ಕಲೆಯನ್ನು ಉಳಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಾ.ಪಂ. ಮಾಜಿ ಸದಸ್ಯ ಗುರುಪಾದಯ್ಯ ಮರಡಿಮಠ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವರ ಕಂಬಿ ಐದೇಶಿ ನಿಮಿತ್ತ ಶನಿವಾರ ಜರುಗಿದ ‘ಮುತ್ತಿನಂತೆ ಅತ್ತಿಗೆ’ ಸಾಮಾಜಿಕ ನಾಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಕೃತಿ ಎಂದರೆ ಕೇವಲ ಆಚರಣೆಗಳಲ್ಲ. ಅದು ಜೀವನದ ಪ್ರತಿಯೊಂದು ಹಂತದಲ್ಲೂ ವ್ಯಕ್ತವಾಗುವ ಮೌಲ್ಯಗಳ ಸಂಕಲನವಾಗಿದೆ. ಪೂರ್ವಜರು ರೂಪಿಸಿದ ಆಚರಣೆಗಳ ಹಿಂದೆ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಅಂಶಗಳು ಅಡಗಿವೆ. ಸಮಾಜದಲ್ಲಿನ ಕುಂದುಕೊರತೆಗಳನ್ನು ತಿದ್ದುವಂತಹ ನಾಟಕಗಳ ಅಗತ್ಯ ಇಂದಿನ ಪೀಳಿಗೆಗೆ ಹೆಚ್ಚು ಇದೆ ಎಂದು ಅವರು ತಿಳಿಸಿದರು.
ನಾವಲಗಿ ಗ್ರಾಮವು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಮತ್ತಷ್ಟು ಬಲಿಷ್ಠವಾಗಬೇಕು. ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಆಧಾರ ಎಂದು ಹೇಳಿದರು.
ಈರಪಯ್ಯ ಮಠಪತಿ, ಅಡವಯ್ಯ ಹಿರೇಮಠ, ಹನಮಂತ ಮಗದುಮ್, ಸುಭಾಸ ಕಂಪು, ದಾನಪ್ಪ ಆಸಂಗಿ, ಬಸವರಾಜ ಗಣಿ, ಸಿದ್ದು ಕಂಚು, ರಾಜು ಕದಂ, ಗಿರೀಶ ಕಾಂತಿ, ಬಸಪ್ಪ ಮೆಟಗುಡ್ಡ, ಕಲ್ಮೇಶ ದೇವದಾಸ, ಮಹೇಶ ಚಿಂಚಖಂಡಿ, ಮಂಜು ಕಾಂತಿ, ಸಿದ್ದು ಹಳ್ಳಿ, ದುಂಡು ಕಾಂತಿ, ರಮೇಶ ಚಿಂಚಖಂಡಿ, ಗಂಗಪ್ಪ ಅಮಲಝರಿ, ಈರಪ್ಪ ತಿಮ್ಮಾಪೂರ, ಅಲ್ಲಪ್ಪ ಮುಗಳಖೋಡ ಸೇರಿ ಹಲವರು ಉಪಸ್ಥಿತರಿದ್ದರು. ಶ್ರೀಶೈಲ ಗಣಿ ಹಾಗೂ ಕಾಡೇಶ ಕಂಪು ನಿರೂಪಿಸಿದರು.