ಬನಹಟ್ಟಿಯ ಎಸ್‌ಟಿಸಿ ಕಲಾ, ವಾಣಿಜ್ಯ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ನಿಮಿತ್ತ ಬಾಗಲಕೋಟೆ ವಿ.ವಿ. ಅಥ್ಲೆಟಿಕ್ ಕ್ರೀಡಾಕೂಟಗಳನ್ನು ಕವಿವಿ ನಿವೃತ್ತ ಕುಲಪತಿ ಜಿ.ಎಂ. ಪಾಟೀಲ ಚಾಲನೆ ನೀಡಿದರು. ಡಾ. ವಿ.ಎಸ್. ಮಾಳಿ, ಡಾ. ಮಂಜುನಾಥ ಬೆನ್ನೂರ ಇದ್ದರು. 
ಬಾಗಲಕೋಟೆ

ಸೇವಾ ಮನೋಭಾವನೆ ರೂಢಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಕುಲಪತಿ ಜಿ.ಎಂ. ಪಾಟೀಲ ಹೇಳಿಕೆ
  • ಅಥ್ಲೆಟಿಕ್ ಕ್ರೀಡಾಕೂಟ ಉದ್ಘಾಟನೆ
  • ಸಹಕಾರ ಮತ್ತು ಸೇವಾ ಮನೋಭಾವನೆ ಬದುಕಿನಲ್ಲಿ ರೂಢಿಸಿಕೊಳ್ಳುವ ಜೊತೆಗೆ ಸೋಲನ್ನು ಗೆಲುವಾಗಿ ಹೇಗೆ ಪರಿವರ್ತಿಸಬೇಕು
ರಬಕವಿ-ಬನಹಟ್ಟಿ : ಬದುಕು ಕಟ್ಟಿಕೊಳ್ಳಲು ಕಲೆ ಅಗತ್ಯವಾದರೆ, ಕ್ರೀಡೆಗಳಿಂದ ಸ್ಪರ್ಧಾತ್ಮಕ ಭಾವನೆ ಜೊತೆಗೆ ಮಾನವೀಯ ಗುಣಗಳೂ ವೃದ್ಧಿಯಾಗುತ್ತವೆ ಎಂದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ನಿವೃತ್ತ ಕುಲಪತಿ ಜಿ.ಎಂ. ಪಾಟೀಲ ಹೇಳಿದರು.
ಬನಹಟ್ಟಿಯ ಜನತಾ ಶಿಕ್ಷಣ ಸಂಘದ ತಮ್ಮಣ್ಣೆಪ್ಪ ಚಿಕ್ಕೋಡಿ ಕಲಾ, ವಾಣಿಜ್ಯ, ಬಿಬಿಎ, ಬಿಸಿಎ, ಸ್ನಾತಕೋತ್ತರ ಕೇಂದ್ರದಲ್ಲಿ ಭಾನುವಾರ ಬಾಗಲಕೋಟೆ ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಮತ್ತು ಸೇವಾ ಮನೋಭಾವನೆ ಬದುಕಿನಲ್ಲಿ ರೂಢಿಸಿಕೊಳ್ಳುವ ಜೊತೆಗೆ ಸೋಲನ್ನು ಗೆಲುವಾಗಿ ಹೇಗೆ ಪರಿವರ್ತಿಸಬೇಕು. ಛಲ ಮೂಡಿಸುತ್ತದೆ. ಹಠ, ದ್ವೇಷ ಮರೆಸಿ ಆರೋಗ್ಯಕರ ಸ್ಪರ್ಧೆ ಮೂಲಕ ಜಯದ ಗುರಿಯತ್ತ ಸಾಗಿಸುವ ಮನಸ್ಸು ಕ್ರೀಡಾಪಟುಗಳಲ್ಲಿ ಮುಖ್ಯವಾಗಿ ಬೆಳೆಯುತ್ತದೆ ಎಂದರು.
ಡಾ. ವಿ.ಎಸ್. ಕುಳ್ಳಿ ಅಧ್ಯಕ್ಷತೆ ವಹಿಸಿದ್ದರು. ಚಿದಾನಂದ ಢವಳೇಶ್ವರ, ಸಂಸ್ಥೆಯ ಅಧ್ಯಕ್ಷ ಸುಭಾಷಚಂದ್ರ ಭದ್ರನ್ನವರ, ಕಾರ್ಯಾಧ್ಯಕ್ಷ ಬಸವಂತಪ್ಪ ಜಾಡಗೌಡ, ವಿಜಯಪುರ ಪಿಎಸ್‌ಐ ಪ್ರೇಮಾ ಕುಚಬಾಳ, ಶಂಕರ ಸೋರಗಾಂವಿ, ಶಂಕರ ಜಾಲಿಗಿಡದ, ಡಾ. ಎಸ್.ಎಸ್. ಹೂಲಿ, ಪ್ರಾಚಾರ್ಯ ಡಾ. ಜಿ.ಆರ್. ಜುನ್ನಾಯ್ಕರ್ ಇದ್ದರು. ಡಾ. ಮಂಜುನಾಥ ಬೆನ್ನೂರ ಸ್ವಾಗತಿಸಿದರು, ಡಾ. ಮನೋಹರ ಶಿರಹಟ್ಟಿ ನಿರೂಪಿಸಿದರು.