ತೇರದಾಳ ಪಟ್ಟಣದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಪರಿಸರ ಸಂರಕ್ಷಣಾಗತಿವಿಧಿಯ ಬಡೀ ಬೈಠಕ್‌‘ ಕಾರ್ಯಕ್ರಮಕ್ಕೆ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು. ಕರ್ನಾಟಕ ದಕ್ಷಿಣ ಹಾಗೂ ಉತ್ತರ ಪ್ರಾಂತಗಳ ಸಂಯೋಜಕ, ಪ್ರಚಾರಕ ಜಯರಾಮ್ ಬೊಳ್ಳಜಿ, ಕರ್ನಾಟಕ ಉತ್ತರ ಪ್ರಾಂತ್ಯ ಪ್ರಮುಖರಾದ ಆನಂದ ಶಿರಬೂರ, ಡಾ.ಪುಷ್ಪದಂತ ದಾನಿಗೊಂಡ ಇತರರಿದ್ದರು.  
ಬಾಗಲಕೋಟೆ

ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಅತ್ಯಗತ್ಯ

ಪ್ರಮುಖ ಮುಖ್ಯಾಂಶಗಳು

  • ಜಯರಾಮ್ ಬೊಳ್ಳಜಿ ಹೇಳಿಕೆ
  • ದಾನಿಗೊಂಡ ಶಿಕ್ಷಣ ಸಂಸ್ಥೆಯಲ್ಲಿ ಪರಿಸರ ಸಂರಕ್ಷಣಾಗತಿವಿಧಿಯ ಬಡೀ ಬೈಠಕ್ ಕಾರ್ಯಕ್ರಮ.
  • ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ.
ತೇರದಾಳ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಕಾಪಾಡಿಕೊಂಡರೆ ಉತ್ತಮ ಆರೋಗ್ಯದ ಜೊತೆಗೆ ಸುಸ್ಥಿರ ಜೀವನ ಸಾಧ್ಯವಾಗುತ್ತದೆ ಎಂದು ಕರ್ನಾಟಕ ದಕ್ಷಿಣ ಹಾಗೂ ಉತ್ತರ ಪ್ರಾಂತಗಳ ಸಂಯೋಜಕ ಹಾಗೂ ಪ್ರಚಾರಕ ಜಯರಾಮ್ ಬೊಳ್ಳಜಿ ಹೇಳಿದರು.
ಪಟ್ಟಣದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ ’ಪರಿಸರ ಸಂರಕ್ಷಣಾಗತಿವಿಧಿಯ ಬಡೀ ಬೈಠಕ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಬಳಕೆ ನಿಯಂತ್ರಣವು ಪರಿಸರ ಸಂರಕ್ಷಣೆಗೆ ಅತ್ಯಗತ್ಯವಾಗಿದೆ. 2019ರ ಕೋವಿಡ್ ನಂತರ ದೇಶಾದ್ಯಂತ ಆರಂಭಗೊಂಡ ಪರಿಸರ ಸಂರಕ್ಷಣಾಗತಿವಿಧಿಯು ತಾಲೂಕು ಮಟ್ಟದಲ್ಲಿ ವಿವಿಧ ತಂಡಗಳ ಮೂಲಕ ಶಿಕ್ಷಣ, ಧಾರ್ಮಿಕ, ಮಹಿಳಾ, ಯುವ ಹಾಗೂ ಸಮಾಜಸೇವಾ ಸಂಘಟನೆಗಳನ್ನು ಒಗ್ಗೂಡಿಸಿ ಪರಿಸರ ಸ್ನೇಹಿ ಬದುಕಿನ ಬಗ್ಗೆ ಜಾಗತಿ ಮೂಡಿಸುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಉತ್ತರ ಪ್ರಾಂತ್ಯ ಪ್ರಮುಖ ಆನಂದ ಶಿರಬೂರ ಮಾತನಾಡಿ, ದಾನಿಗೊಂಡ ಶಿಕ್ಷಣ ಸಂಸ್ಥೆಯ ಪರಿಸರ ಸ್ನೇಹಿ ಕಾರ್ಯಚಟುವಟಿಕೆಗಳು ಮಾದರಿಯಾಗಿವೆ. ಮಳೆನೀರು ಕೊಯ್ಲು, ನೀರಿನ ಮರುಬಳಕೆ ಸೇರಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಎನ್‌ಎಸ್‌ಪಿಸಿ, ಪರಿಸರ ಪಾಠಶಾಲೆ, ಪ್ರಕತಿ ವಂದನ, ವಕ್ಷರಕ್ಷಾ ಬಂಧನ, ಸ್ವಚ್ಛ ಸಾಗರ ಅಭಿಯಾನ ಹಾಗೂ ಅಮತದೇವಿ ಬಲಿದಾನ ಮಾಸದಂತಹ ಕಾರ್ಯಕ್ರಮಗಳ ಮೂಲಕ ಪರಿಸರ ಜಾಗತಿ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳ ಪರಿಸರ ಟೋಳಿಗಳನ್ನು ಘೋಷಿಸಿ, ಸಸಿ ಹಾಗೂ ಶಾಲು ನೀಡಿ ಜವಾಬ್ದಾರಿಗಳನ್ನು ಹಂಚಲಾಯಿತು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಪುಷ್ಪದಂತ ದಾನಿಗೊಂಡ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾಕಾರ್ಯವಾಹ ಪ್ರಭು ಪಾಟೀಲ, ಜಿಲ್ಲಾ ಸಹ ಸಂಯೋಜಕರು ಡಾ. ರಾಕೇಶ್ ಲಾಡ್, ಗಂಗಾಧರ ಬಿಂಗಿ, ಪ್ರಶಾಂತ್ ಕುಲಕರ್ಣಿ, ಸಂದೀಪಗೌಡ ಪಾಟೀಲ್, ರವಿ ಸಲಬನ್ನವರ, ಪ್ರಕಾಶ ಮಾಳಿ, ಚಂದ್ರಶೇಖರ ಲಕ್ಕುಂಡಿ, ಮಂಜುನಾಥ ಕೊರ್ತಿ, ಗುರುರಾಜ್ ಲೂತಿ, ಮನೋಜ ಯಾದವಾಡ, ನಾರಿ ಶಕ್ತಿ ಪ್ರಮೂಖರಾದ ರಜನಿ ಕರಡಿ, ವಂದನಾ ದೇಶಪಾಂಡೆ, ಕಾಶಿಬಾಯಿ ರೆಡ್ಡಿ, ಡಾ. ನೀಲಿಮಾ ಕಾಗಿ ಉಪಸ್ಥಿತರಿದ್ದರು.