ಗುಳೇದಗುಡ್ಡ ತಾಲೂಕಿನ ಲಾಯದಗುಂದಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆಗೆ ಜಾಗೆ ಶಾಸಕರ ಭೀಮಸೇನ ಚಿಮ್ಮನಕಟ್ಟಿ ಪರಿಶೀಲಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ, ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಅಧ್ಯಕ್ಷ ಬಸವರಾಜ ಗೋನಾಳ, ಅಕ್ಷರ ದಾಸೋಹ ಅಧಿಕಾರಿ ಮಹಾಂತೇಶ ನರೆಗಲ್ಲ ಇದ್ದರು. 
ಬಾಗಲಕೋಟೆ

ಲಾಯದಗುಂದಿ ಗ್ರಾಮದಲ್ಲಿ ಕೆಪಿಎಸ್‌ಸಿ ಶಾಲೆ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಲಾಯದಗುಂದಿ ಗ್ರಾಮಕ್ಕೆ ಮಂಜೂರಾಗಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡ ನಿರ್ಮಾಣ
  • ಶಾಸಕ ಭೀಮಸೇನ ಚಿಮ್ಮನಕಟ್ಟಿ ಭಾನುವಾರ ಗ್ರಾಮದ ಸರ್ಕಾರಿ ಪೌಢಶಾಲೆಗೆ ತೆರಳಿ ಜಾಗ ಪರಿಶೀಲಿಸಿದರು
  • ಜಾಗೆ ಸರ್ವೇಮಾಡಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಗುಳೇದಗುಡ್ಡ: ತಾಲೂಕಿನ ಲಾಯದಗುಂದಿ ಗ್ರಾಮಕ್ಕೆ ಮಂಜೂರಾಗಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭಾನುವಾರ ಗ್ರಾಮದ ಸರ್ಕಾರಿ ಪೌಢಶಾಲೆಗೆ ತೆರಳಿ ಜಾಗ ಪರಿಶೀಲಿಸಿದರು. ಈ ಜಾಗೆ ಸರ್ವೇಮಾಡಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಸ್ಥರೊಂದಿಗೆ ಚರ್ಚೆ ಬಳಿಕ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಾಯದಗುಂದಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾಗಿದ್ದು, ಈ ಶಾಲೆಯಿಂದ ಲಾಯದಗುಂದಿ, ಆಸಂಗಿ, ಕಟಗಿನಹಳ್ಳಿ, ಸಬ್ಬಲಹುಣಸಿ ಹಾಗೂ ನಾಗರಾಳ ಗ್ರಾಮಗಳ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಲಾಯದಗುಂದಿ ಗ್ರಾಮದಲ್ಲಿಯೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭವಾಗಲಿದೆ. ಅದು ಎಲ್ಲಿಯೂ ಸ್ಥಳಾಂತರವಾಗುವುದಿಲ್ಲ, ಗ್ರಾಮಸ್ಥರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದರು.
ಎಲ್‌ಕೆಜಿಯಿಂದ ಪಿಯುಸಿ ವರೆಗೆ ಈ ಭಾಗದ ಮಕ್ಕಳು ಓದಬೇಕು ಎಂಬ ಉದ್ದೇಶದಿಂದ ಲಾಯದಗುಂದಿ ಗ್ರಾಮದಲ್ಲಿ ಪಬ್ಲಿಕ್ ಸ್ಕೂಲ್ ಆರಂಭವಾಗಲಿದ್ದು, ಇದರಿಂದ ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ. ಬೇರೆ ಪಟ್ಟಣಗಳಿಗೆ ಓದಲು ಹೋಗುವುದು ತಪ್ಪುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ, ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಅಧ್ಯಕ್ಷ ಬಸವರಾಜ ಗೋನಾಳ, ಅಕ್ಷರ ದಾಸೋಹ ಅಧಿಕಾರಿ ಮಹಾಂತೇಶ ನರೆಗಲ್ಲ, ದೈಹಿಕ ಪರಿವೀಕ್ಷಕ ಬಿ.ಎಚ್. ಹಳಗೇರಿ, ಶಿವಪ್ಪ ಜಡಿ, ಪ್ರಕಾಶ ಗೌಡರ, ಬಸವರಾಜ ಜಂಗಮರ, ಪುತ್ರಪ್ಪ ಅಂಗಡಿ, ಗಂಗಾಧರ ಮನ್ನೂರ, ಸುಂದರ ಕುರಿ ಗ್ರಾ.ಪಂ. ಸದಸ್ಯರು ಇದ್ದರು.