ಕೆರೂರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನಾಚರಣೆ ಅಂಗವಾಗಿ ಪಟ್ಟಣದ ಹಿರಿಯ ಕಾರ್ಯಕರ್ತರಿಗೆ ಬಿ.ಬಿ.ಸೂಳಿಕೇರಿ, ಪರಸಪ್ಪಜ್ಜ ಚೂರಿ,ಬಸಪ್ಪ ಹರಣಶಿಕಾರಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಎಂ.ಜಿ.ಕಿತ್ತಲಿ, ಗುಳೇದಗುಡ್ಡ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ ಚೂರಿ, ನಾಮ ನಿರ್ದೇಶಿತ ಸದಸ್ಯ ಶ್ರೀಧರ ಕಾಂಬಳೆ, ಲಾಲಸಾಬ ಸೂಳಿಕೇರಿ ಇದ್ದರು.
- ಕಾಂಗ್ರೆಸ್ ಪಕ್ಷ ಸಂಸ್ಥಾಪನ ದಿನಾಚರಣೆ
- ಹಿರಿಯ ಕಾರ್ಯಕರ್ತರಿಗೆ ಸನ್ಮಾನ
- ಕಾಂಗ್ರೆಸ್ ಪಕ್ಷವು ಸ್ವಾತಂತ್ರೃ ಹೋರಾಟದ ಇತಿಹಾಸವನ್ನು ಹೊಂದಿದೆ
ಕೆರೂರ: ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗುಳೇದಗುಡ್ಡ ಬ್ಲಾಕ್ ಯೂಥ್ ಕಾಂಗ್ರೆಸ್ ವತಿಯಿಂದ ಪಕ್ಷಕ್ಕಾಗಿ ಶ್ರಮಿಸಿದ ಹಿರಿಯ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಸ್ವಾತಂತ್ರೃ ಹೋರಾಟದ ಇತಿಹಾಸವನ್ನು ಹೊಂದಿದೆ. ಪಕ್ಷಕ್ಕಾಗಿ ಮತ್ತು ದೇಶಕ್ಕಾಗಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ ಗಾಂಧಿ ಅವರಂತ ಅನೇಕ ನಾಯಕರು ಶ್ರಮಿಸಿದ್ದಾರೆ. ಅನೇಕರು ಪಕ್ಷವನ್ನು ಬಲವರ್ಧನೆ ಮಾಡಿ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.
ಪಟ್ಟಣದಲ್ಲಿ ಪಕ್ಷಕ್ಕಾಗಿ ಶ್ರಮಿಸಿದ ಹಿರಿಯರಾದ ಬಿ.ಬಿ.ಸೂಳಿಕೇರಿ, ಪರಸಪ್ಪಜ್ಜ ಚೂರಿ,ಬಸಪ್ಪ ಹರಣಶಿಕಾರಿ ಅವರಿಗೆ ಸನ್ಮಾನಿಸಲಾಯಿತು.
ಗುಳೇದಗುಡ್ಡ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ ಚೂರಿ, ನಾಮ ನಿರ್ದೇಶಿತ ಸದಸ್ಯ ಶ್ರೀಧರ ಕಾಂಬಳೆ, ಲಾಲಸಾಬ ಸೂಳಿಕೇರಿ, ಯಮನೂರ ವಡ್ಡರ, ಮಂಜು ತಿಮ್ಮಾಪೂರ, ಮಹೆಬೂಬ್ ಸೂಳಿಕೇರಿ ಇತರರು ಇದ್ದರು.